ದೊಡ್ಡಬಳ್ಳಾಪುರ: ‘ಕಾಡಿನಲ್ಲಿ ಲೂಟಿ ನಡೆಸುತ್ತಿದ್ದ ವೀರಪ್ಪನ್ ವಿರುದ್ಧ ಕಾರ್ಯಚರಣೆ ನಡೆಸಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಕೆ.ಅರ್ಕೇಶ್ ಅವರನ್ನು ನಾಡಿನಲ್ಲಿ ಲೂಟಿ ನಡೆಸುತ್ತಿರುವ ವೀರಪ್ಪ ಮೊಯಿಲಿ ವಿರುದ್ಧ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಲಾಗಿದೆ’ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಹೇಳಿದರು.

ಭಾನುವಾರ ನಗರದಲ್ಲಿ ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಕೆ.ಅರ್ಕೇಶ್ ಪರವಾಗಿ ರೋಡ್ ಷೋನಲ್ಲಿ ಭಾಗವಹಿಸಿದ್ದ ಅವರು ಸಿದ್ದಲಿಂಗಯ್ಯ ವೃತ್ತ, ಡಿಕ್ರಾಸ್ನಲ್ಲಿ ನಡೆದ ಸಭೆಗಳಲ್ಲಿ ಮಾತನಾಡಿದರು.

ಇಷ್ಟು ದಿನ ಬಿಜೆಪಿ, ಕಾಂಗ್ರೆಸ್ ಹೊರತು ಜನರಿಗೆ ಪರ್ಯಾಯ ಪಕ್ಷ, ಅಭ್ಯರ್ಥಿಯ ಆಯ್ಕೆ ಇರಲಿಲ್ಲ. ಈಗ ಆಮ್ ಆದ್ಮಿ ಪಕ್ಷ ಪ್ರಾಮಾಣಿಕ ಅಭ್ಯರ್ಥಿಯನ್ನು ಚುನಾವಣಾ ಕಣಕ್ಕೆ ಇಳಿಸಿದೆ. ಈ ಭಾಗದ ಮತದಾರರು ವೀರಪ್ಪಮೊಯಿಲಿ ಅವರಿಗೆ ಮತ ನೀಡಿದ್ದರ ಪರಿಣಾಮವನ್ನು ಈಗ ಅನುಭವಿಸಿದ್ದಾರೆ. ಅಂಬಾನಿ ಸೋದರರಿಗೆ ಲಾಭ ಮಾಡಿಕೊಡುವ ಸಲುವಾಗಿಯೇ ಇಂದು ದೇಶದಲ್ಲಿ ಅಡುಗೆ ಅನಿಲದ ಬೆಲೆ ಏರಿಕೆ ಮಾಡಲಾಗಿದೆ. ಜನಸಾಮಾನ್ಯರ ಬಗ್ಗೆ ಕಾಳಜಿ ಇಲ್ಲದ ವೀರಪ್ಪಮೊಯಿಲಿ ಅವರನ್ನು ಈ ಭಾಗದ ಮತದಾರರು ತಿರಸ್ಕರಿಸಬೇಕು ಎಂದರು.

ಹಣ ನೀಡಿ ಅಧಿಕಾರಕ್ಕೆ ಬರುವ ಜನರಿಂದ ಜನಸಾಮಾನ್ಯರ ಕಷ್ಟಗಳು ದೂರವಾಗುವುದಿಲ್ಲ. ದೆಹಲಿ ಮತದಾರರಂತೆ ಇಲ್ಲಿನ ಮತದಾರರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜನ ಸಾಮಾನ್ಯರ ಪಕ್ಷವಾಗಿರುವ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯನ್ನು ಬೆಂಬಲುಸುವಂತೆ ಮನವಿ ಮಾಡಿದರು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಕೆ.ಅರ್ಕೇಶ್ ಮಾತನಾಡಿ, 30 ವರ್ಷಸಾರ್ವಜನಿಕ ಬದುಕಿನಲ್ಲಿ ಯಾವುದೇ ಭ್ರಷ್ಟಾಚಾರ ಇಲ್ಲದೆ ಸೇವೆ ಸಲ್ಲಿಸಿದ್ದೇನೆ. ಈ ಸಲ ಕ್ಷೇತ್ರದ ಮತದಾರರು ಪ್ರಮಾಣಿಕರನ್ನು ಗುರುತಿಸಿ ಮತ ನೀಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಾಹಿತಿ ಕೋಟಗಾನಹಳ್ಳಿ ರಾಮಯ್ಯ ಮತ್ತಿತರರು ಹಾಜರಿದ್ದರು.

ಜಟಾಪಟಿ: ನಗರದ ರಂಗಪ್ಪ ವೃತ್ತದಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾಷಣ ಮಾಡಲು ಆರಂಭಿಸುತ್ತಿದ್ದಂತೆ ಟಿವಿ ಮಾಧ್ಯಮದ ಪ್ರತಿನಿಧಿಗಳು ಚಿತ್ರೀಕರಣಕ್ಕೆ ಮುಂದಾದರು. ಆಮ್ಆದ್ಮಿ ಪಕ್ಷದ ಕಾರ್ಯಕರ್ತರು ಮಾಧ್ಯಮದವರು ಚಿತ್ರೀಕರಣ ಮಾಡದಂತೆ ಹಿಂದಕ್ಕೆ ತಳ್ಳಿದರು. ಇದರಿಂದ ಮಾಧ್ಯಮದವರು ಹಾಗೂ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರ ಮಧ್ಯೆ ಜಟಾಪಟಿ ಆರಂಭವಾಯಿತು. ತಕ್ಷಣ ಮಧ್ಯ ಪ್ರವೇಶ ಮಾಡಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿ ಕೇಜ್ರಿವಾಲ್ ಇದ್ದ ಜೀಪನ್ನು ಮುಂದಕ್ಕೆ ಕಳುಹಿಸುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.