ಹುಬ್ಬಳ್ಳಿ: ಬಿಜೆಪಿ ರಾಷ್ಟ್ರೀಯ ಚುನಾವಣಾ ಪ್ರಚಾರ ಸಮಿತಿ ನೂತನ ಅಧ್ಯಕ್ಷರಾಗಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ದುರ್ಗದಬೈಲ್ನ ವೃತ್ತದಲ್ಲಿ ಭಾನುವಾರ ಸಂಜೆ ನೂರಾರು ಕಾರ್ಯಕರ್ತರು ಸೇರಿ ಮೋದಿ ಪರವಾಗಿ ಜಯಘೋಷ ಮಾಡಿದರು. ಪಣಜಿಯಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ಪಕ್ಷದ ಕಾರ್ಯಕಾರಿಣಿ ಸಭೆ ಮುಗಿಸಿಕೊಂಡು ನೇರವಾಗಿ ವಿಶೇಷ ವಿಮಾನದಲ್ಲಿ ಹುಬ್ಬಳ್ಳಿಗೆ ಬಂದಿಳಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ ಕೂಡ ಈ ವಿಜಯೋತ್ಸವದಲ್ಲಿ ಪಾಲ್ಗೊಂಡರು

ಈ ಸಂದರ್ಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, `ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷದ ಮಹತ್ವದ ಕಾರ್ಯಕಾರಿಣಿ ಸಭೆ ಪಣಜಿಯಲ್ಲಿ ಎರಡು ದಿನ ನಡೆದಿದ್ದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನೇ ಪಕ್ಷದ ನೂತನ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಇದು ಪಕ್ಷದ ಎಲ್ಲ ಕಾರ್ಯಕರ್ತರಲ್ಲಿ ಖುಷಿ ಮೂಡಿಸಿದೆ' ಎಂದರು.

`ನರೇಂದ್ರ ಮೋದಿ ಅವರಿಗೆ ನಮ್ಮ ರಾಜ್ಯದಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ. ಅವರನ್ನು ಆಯ್ಕೆ ಮಾಡಿರುವುದು ಅವರೆಲ್ಲರಿಗೂ ಬಹಳ ಸಂತಸ ನೀಡಿದೆ' ಎಂದರು.

`ಮಾಧ್ಯಮದವರು ಬಿಂಬಿಸುವಂತೆ ಪಕ್ಷದ ರಾಷ್ಟ್ರೀಯ ಮುಖಂಡ ಎಲ್.ಕೆ.ಅಡ್ವಾಣಿ ಅವರಿಗಾಗಲಿ ಅಥವಾ ನರೇಂದ್ರ ಮೋದಿ ಅವರಿಗಾಗಲಿ ಯಾವುದೇ ವೈಮನಸ್ಯವಿಲ್ಲ. ಎಲ್ಲರೂ ಪರಸ್ಪರ ಒಪ್ಪಿಕೊಂಡೇ ಮೋದಿ ಅವರನ್ನು ಬಹುತಮದಿಂದ ಆಯ್ಕೆ ಮಾಡಿದ್ದಾರೆ. ಇಲ್ಲಿ ಯಾವುದೇ ಗೊಂದಲವೂ ಇಲ್ಲ, ಭಿನ್ನಮತವೂ ಇಲ್ಲ' ಎಂದರು.

ರಾಜ್ಯದಲ್ಲಿ ಬಿಜೆಪಿ ಬಲವರ್ಧನೆಗಾಗಿ ಸಾಕಷ್ಟು ಕಾರ್ಯತಂತ್ರಗಳನ್ನು ರೂಪಿಸಲಾಗಿದ್ದು ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎನ್ನುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಮಹೇಶ್ ಟೆಂಗಿನಕಾಯಿ ಮಾತನಾಡಿ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು, ಭಾರತವನ್ನು ಕಾಂಗ್ರೆಸ್ ಮುಕ್ತ ಮಾಡಲಿದ್ದಾರೆ. ಜತೆಗೆ ಬಿಜೆಪಿಯ ಎಲ್ಲ ಕಾರ್ಯಕರ್ತರು ಮೋದಿ ಅವರನ್ನೇ ಮುಂದಿನ ಪ್ರಧಾನಿ ಎಂದು ಬಿಂಬಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಹು-ಧಾ ಪೂರ್ವ ಕ್ಷೇತ್ರದ ಬಿಜೆಪಿ ಘಟಕದ ಅಧ್ಯಕ್ಷ ಶಂಕ್ರಪ್ಪ ಛಬ್ಬಿ, ಕಾರ್ಯದರ್ಶಿ ಸತೀಶ ಜವಾಡಕರ, ಮೋಹನಲಾಲ ಜೈನ್, ರಂಗಾ ಬದ್ದಿ, ಪಾಲಿಕೆ ಸದಸ್ಯರಾದ ಶಿವು ಮೆಣಸಿನಕಾಯಿ, ಯಮೂರ ಜಾಧವ, ದೀಪಕ್, ದೀಪಕ್ ಮೆಹರವಾಡೆ, ಸಂತೋಷ ಅರಕೇರಿ, ವಿನಯ ಮತ್ತಿತರರು ಹಾಜರಿದ್ದರು.

ಮೋದಿ ಆಯ್ಕೆ: ಸಂತಸ
ಲೋಕಸಭೆ ಚುನಾವಣೆಗೆ ಬಿಜೆಪಿಯ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ನರೇಂದ್ರ ಮೋದಿ ಬಗ್ಗೆ ವಿವಿಧ ಪಕ್ಷಗಳ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಭಿಲಾಷೆ ಈಡೇರಿದೆ
ಬಿಜೆಪಿಯ ಲೋಕಸಭಾ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಆಯ್ಕೆಯಾಗುವ ಮೂಲಕ ಇಡೀ ದೇಶದಲ್ಲಿರುವ ಪಕ್ಷದ ಕಾರ್ಯಕರ್ತರ ಅಭಿಲಾಷೆ ಈಡೇರಿದೆ. ಅವರು ಖಂಡಿತ ಒಳ್ಳೆಯ ಆಡಳಿತ ನೀಡಲಿದ್ದಾರೆ. ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿ ರೂಪಿಸುವ ಶಕ್ತಿ ಅವರಲ್ಲಿದೆ.
-ಮಹೇಶ ಟೆಂಗಿನಕಾಯಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ಗೆಲುವು ಖಚಿತ
ಮೋದಿ ಆಯ್ಕೆ ನಮ್ಮಲ್ಲಿ ಹೆಮ್ಮೆ ಮುಡಿಸಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಅವರ ನಾಯಕತ್ವದಲ್ಲಿ ಖಂಡಿತ ಗೆಲುವು ಸಾಧಿಸಲಿದೆ. ಬೆಲೆ ಏರಿಕೆಗೆ ಕಡಿವಾಣ ಹಾಕಿ, ಭಯೋತ್ಪಾದನೆಯನ್ನು ಹತ್ತಿಕ್ಕಿ ಅವರು ಉತ್ತಮ ಆಡಳಿತ ನೀಡಲಿದ್ದಾರೆ.
-ಶಂಕರಪ್ಪ ಛಬ್ಬಿ, ಬಿಜೆಪಿ ಮುಖಂಡ

ನಾಯಕತ್ವ ಒಪ್ಪಲಾಗದು
ಮೋದಿ ನಾಯಕತ್ವವನ್ನು ಅವರ ಪಕ್ಷದವರೇ ಒಪ್ಪಲು ಸಿದ್ಧರಿಲ್ಲ. ಅಲ್ಲದೇ ಮೋದಿ ಕೈಯಲ್ಲಿ ಇಂದಿಗೂ ಅಲ್ಪಸಂಖ್ಯಾತರ ರಕ್ತ ಮೆತ್ತಿಕೊಂಡಿದೆ. 8 ವರ್ಷಗಳ ಕಾಲದ ಅವರ ದಬ್ಬಾಳಿಕೆಯನ್ನು ಒಂದು ಸಮುದಾಯ ಮರೆಯುವುದಿಲ್ಲ. ಇಂತಹವರನ್ನು ಒಬ್ಬ ನಾಯಕ, ದೇಶದ ಪ್ರಧಾನಿ ಎಂದು ಹೇಗೆ ಒಪ್ಪಬಹುದು?
-ಎ.ಎಂ. ಹಿಂಡಸಗೇರಿ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ

`ಕೋಮುವಾದಿಗೆ ಮಣೆ ಬೇಡ'
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಬಿಜೆಪಿ ಪ್ರಚಾರ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಿದ ಬಿಜೆಪಿ ಕ್ರಮ ಸಮಗ್ರ ಭಾರತೀಯರ ದೃಷ್ಟಿಯಿಂದ ಸರಿಯಾದ ನಿರ್ಧಾರ ಅಲ್ಲ. ಮೋದಿ ಗುಜರಾತ್ ಹತ್ಯಾಕಾಂಡದ ರೂವಾರಿ. ಎಲ್ಲ ಭಾರತೀಯರ ಭವಿಷ್ಯ ರೂಪಿಸುವ ಪ್ರಧಾನಿ ಅಭ್ಯರ್ಥಿಯನ್ನಾಗಿಯೂ ಬಿಜೆಪಿ ಬಿಂಬಿಸಬಹುದು. ಆದರೆ ಅವರಿಗೆ ಆ ಅಧಿಕಾರವನ್ನು ಕೊಡುವುದಿಕ್ಕೆ ಆಗುವುದಿಲ್ಲ. ಗುಜರಾತ್ನಲ್ಲಿ ಉಳ್ಳವರ ಪರವಾದ ನೀತಿಗಳನ್ನು ಜಾರಿಗೊಳಿಸಿದ್ದೇ ಗುಜರಾತ್ ಅಭಿವೃದ್ಧಿ ಅಲ್ಲ. ಈ ಅಭಿವೃದ್ಧಿಯ ಪೊಳ್ಳುತನವನ್ನು ಜನತೆ ಅರ್ಥ ಮಾಡಿಕೊಳ್ಳಬೇಕು. ಬಿಜೆಪಿ ಅತ್ಯಂತ ದೊಡ್ಡ ಕೋಮುವಾದಿಗೆ ಮಣೆ ಹಾಕಬಾರದಿತ್ತು.
-ಬಿ.ಎಸ್.ಸೊಪ್ಪಿನ, ಜಿಲ್ಲಾ ಕಾರ್ಯದರ್ಶಿ, ಸಿಪಿಐ (ಎಂ)

`ಅಧಿಕಾರಿಗಳನ್ನು ಜೈಲಿಗೆ ಅಟ್ಟಿದವರು'
ಮೋದಿ ಅವರ ಆಯ್ಕೆ ಬಿಜೆಪಿಗೆ ಸರಿ ಎನಿಸಿರಬಹುದು. ಆದರೆ ಗೋಧ್ರಾ ಹತ್ಯಾಕಾಂಡದಲ್ಲಿ ನೇರವಾಗಿ ಭಾಗವಹಿಸಿದ ಆರೋಪ ಹೊಂದಿರುವ ಅವರ ಆಯ್ಕೆ ದೇಶದ ಜನತೆಗೆ ಸರಿ ಎನಿಸುವುದಿಲ್ಲ. ಗುಜರಾತ್ ಮುಖ್ಯಮಂತ್ರಿಯಾಗಿ ಹೈಕೋರ್ಟ್ ಆದೇಶಗಳಿಗೇ ಎದುರು ಮಾತನಾಡಿದ್ದಾರೆ. ತಮ್ಮ ಮಾತುಗಳನ್ನು ಕೇಳದ ಅಧಿಕಾರಿಗಳ ವಿರುದ್ಧ ಆರೋಪಪಟ್ಟಿ ದಾಖಲಿಸಿ ಜೈಲಿಗೆ ಅಟ್ಟಿದ್ದಾರೆ. ಆದ್ದರಿಂದ, ಬಿಜೆಪಿ ಪ್ರಧಾನಿ ಅಭ್ಯರ್ಥಿಯೆಂದು ಬಿಂಬಿಸುವ ಮೊದಲ ಹಂತವಾದ ಪ್ರಚಾರ ಸಮಿತಿಯ ನೇತಾರನ ಸ್ಥಾನವನ್ನು ಮೋದಿ ಅವರಿಗೆ ಕೊಡಬಾರದಿತ್ತು.
-ಶಿವಯೋಗಿ ಪ್ಯಾಟಿಶೆಟ್ಟರ, ಸಿಪಿಐ ಮುಖಂಡರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.