ಬುಧವಾರ, ಜನವರಿ 22, 2020
18 °C

ಮೋದಿ ಪರ ಹೇಳಿಕೆ: ಪ್ರತಿಕ್ರಿಯೆಗೆ ಜೆಡಿಯು ನಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸಲಾಗುತ್ತದೆ ಎಂಬ ಪಕ್ಷದ ಅಧ್ಯಕ್ಷ ನಿತಿನ್ ಗಡ್ಕರಿ ಹೇಳಿಕೆಗೆ ಪ್ರತಿಕ್ರಿಯಿಸಲು ಎನ್‌ಡಿಎ ಮಿತ್ರಪಕ್ಷ ಜೆಡಿಯು ನಿರಾಕರಿಸಿದೆ.`2014ರ ಲೋಕಸಭಾ ಚುನಾವಣೆ ಇನ್ನೂ ದೂರವಿದೆ. ಈ ಅವಧಿಯಲ್ಲಿ ಗಂಗೆಯಲ್ಲಿ ಸಾಕಷ್ಟು ನೀರು ಹರಿದು ಹೋಗುತ್ತದೆ. ಮುಂದೆ ಏನಾಗುತ್ತದೋ ನೋಡೋಣ~ ಎಂದು ಪಕ್ಷದ ಅಧ್ಯಕ್ಷ ಶರದ್ ಯಾದವ್ ಸೋಮವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.ಮೋದಿ ಅವರನ್ನು ಪ್ರಧಾನಿಯನ್ನಾಗಿ ಬಿಂಬಿಸಲು ನಿಮ್ಮ ಪಕ್ಷಕ್ಕೆ ತಕರಾರು ಇಲ್ಲವೇ ಎಂಬ ಪ್ರಶ್ನೆಗೆ, `ನಾನು ನೀಡಿದ ಪ್ರತಿಕ್ರಿಯೆಯಲ್ಲಿಯೇ ಎಲ್ಲವೂ ಅಡಗಿದೆ~ ಎಂದು ಅವರು ಅರ್ಥಗರ್ಭಿತವಾಗಿ ಹೇಳಿದರು.`ಯಾರೋ ನೀಡಿದ ಹೇಳಿಕೆಗೆ ನಾವು ಪ್ರತಿಕ್ರಿಯೆ ನೀಡಬೇಕಾಗಿಲ್ಲ. ಇದು ಅವರ ಪಕ್ಷಕ್ಕೆ ಸಂಬಂಧಪಟ್ಟ ವಿಷಯ. ನೀವು ಈ ಬಗ್ಗೆ ಬಿಜೆಪಿಯನ್ನೇ ಕೇಳುವುದು ಒಳಿತು~ ಎಂದರು.ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಮೋದಿ ಅವರ ನಡುವಿನ ವೈಷಮ್ಯ ಸಾರ್ವಜನಿಕವಾಗಿ ಅನೇಕ ಬಾರಿ ಪ್ರಕಟಗೊಂಡಿದೆ. ನಿತೀಶ್ ಅವರೂ ಪ್ರಧಾನಿ ಹುದ್ದೆ ಆಕಾಂಕ್ಷಿಗಳ ಪಟ್ಟಿಯಲ್ಲಿ ಇದ್ದಾರೆ.

 

ಪ್ರತಿಕ್ರಿಯಿಸಿ (+)