ಭಾನುವಾರ, ಜೂನ್ 13, 2021
24 °C

ಮೋದಿ ಹೆಸರಲ್ಲಿ ಕೊಳೆತ ಮಾವು ಮಾರಾಟ: ಬಿದರಿ ವ್ಯಂಗ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ:  ‘ಬಿಜೆಪಿ ಎಂಬ ಬಿದಿರಿನ ಬುಟ್ಟಿಯಲ್ಲಿ ಇರುವ ಮಾವಿನ­­ಹಣ್ಣುಗಳಲ್ಲಿ ಶೇ 75ರಷ್ಟು ಕೊಳೆತು ನಾರುತ್ತಿವೆ, ಶೇ 25 ಹಣ್ಣು­ಗಳು ಮಾತ್ರ ಅಲ್ಪಸ್ವಲ್ಪ ಚೆನ್ನಾಗಿವೆ. ಕೊಳೆತ ಹಣ್ಣಿನ ವಾಸನೆ ಬಾರದಂತೆ ಪ್ಲಾಸ್ಟಿಕ್‌ ಪೇಪರ್‌ನಿಂದ ಸುತ್ತಿ, ಸುಂದರ­ವಾಗಿ ಪ್ಯಾಕ್‌ ಮಾಡಿ ಅದರ ಮೇಲೆ ನರೇಂದ್ರ ಮೋದಿ ಎಂಬ ಒಂದೇ ಒಂದು ಗುಜರಾತ್‌ ಹಣ್ಣು ಇಟ್ಟು ಚುನಾ­ವಣೆ ಎಂಬ ಮಾರುಕಟ್ಟೆಯಲ್ಲಿ ಇಡೀ ಬುಟ್ಟಿಯನ್ನು ಮಾರಾಟ ಮಾಡಲು ಬಿಜೆಪಿ ಹವಣಿಸುತ್ತಿದೆ’ಹೀಗೆಂದು ರಾಜ್ಯ ಬಿಜೆಪಿ ನಾಯಕ­ರನ್ನು ಕೊಳೆತ ಮಾವಿನಹಣ್ಣಿಗೆ ಹೋಲಿ­ಸಿ­ದವರು ಬಾಗಲಕೋಟೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸರ್ವಜನಶಕ್ತಿ ಪಕ್ಷದ ಅಧ್ಯಕ್ಷ ಶಂಕರ ಬಿದರಿ.ರಾಜ್ಯದಲ್ಲಿ ಐದು ವರ್ಷಗಳ ಕಾಲ ಬಿಜೆಪಿ ಮುಖಂಡರು ಭ್ರಷ್ಟಾಚಾರ, ಅನೈತಿಕತೆ, ಸ್ವಜನ ಪಕ್ಷಪಾತ, ಅವ್ಯವ­ಹಾರ­ದಿಂದ ಕೂಡಿದ ಆಡಳಿತ ನೀಡಿ­ರುವ ಉದಾಹರಣೆ ಇರುವುದರಿಂದ ಆ ಪಕ್ಷದ ಅಭ್ಯರ್ಥಿಗಳು ಲೋಕಸಭೆ ಚುನಾ­ವಣೆಯಲ್ಲಿ ‘ಮೋದಿ ಹವಾ’­ದಿಂದ ಗೆಲ್ಲಲು ಸಾಧ್ಯವಿಲ್ಲ ಎಂದು ನಗರ­ದಲ್ಲಿ ಗುರುವಾರ ಪತ್ರಿಕಾ­ಗೋಷ್ಠಿಯಲ್ಲಿ ಹೇಳಿದರು.‘ಈ ಚುನಾವಣೆಯಲ್ಲಿ ಜನತೆ ನನಗೆ ಬೆಂಬಲ ನೀಡಿದರೆ ದೇಶದಲ್ಲೇ ಮಾದರಿ ಸಂಸದನಾಗಿ ಕಾರ್ಯ ನಿರ್ವ­ಹಿ­ಸುತ್ತೇನೆ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.