ಬುಧವಾರ, ಮೇ 12, 2021
18 °C

ಮೌಂಟ್ ಅಬು: ಮಾಧ್ಯಮ ಸಮ್ಮೇಳನಕ್ಕೆ ಇಂದು ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೌಂಟ್ ಅಬು: ಮಾಧ್ಯಮ ಸಮ್ಮೇಳನಕ್ಕೆ ಇಂದು ಚಾಲನೆ

ಮೌಂಟ್ ಅಬು: ಇಲ್ಲಿನ ಪರ್ವತ ಶ್ರೇಣಿಯ ಸುಂದರ ಪರಿಸರದಲ್ಲಿ ರಾಜಯೋಗ ಶಿಕ್ಷಣ ಮತ್ತು ಸಂಶೋಧನಾ ಪ್ರತಿಷ್ಠಾನ ಹಾಗೂ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿರುವ ಮಾಧ್ಯಮ ಸಮ್ಮೇಳನಕ್ಕೆ ವೇದಿಕೆ ಸಿದ್ಧವಾಗಿದೆ. ಇದೇ 17ರಂದು ಬೆಳಿಗ್ಗೆ 10ಕ್ಕೆ ಸಮ್ಮೇಳನ ಉದ್ಘಾಟನೆಗೊಳ್ಳಲಿದೆ.ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಮಾಧ್ಯಮದವರನ್ನು ಗುರುವಾರ ಸಂಜೆ ಬರಮಾಡಿಕೊಳ್ಳಲಾಯಿತು. ನಾಲ್ಕು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮದಲ್ಲಿ ವಿವಿಧ ವಿಷಯ ತಜ್ಞರು ಉಪನ್ಯಾಸ ನೀಡಲಿದ್ದಾರೆ. 75ನೇ ವಾರ್ಷಿಕೋತ್ಸವದ ಅಂಗವಾಗಿ `ಮಾಧ್ಯಮದ ಹುಟ್ಟು-ಬೆಳವಣಿಗೆ ಹಾಗೂ ಸವಾಲುಗಳು~ ಕುರಿತು ವಸ್ತು ಪ್ರದರ್ಶನ ಆಯೋಜಿಸಲಾಗಿದೆ. ಈ ಪ್ರದರ್ಶನವನ್ನು ಬಿ.ಕೆ. ಓಂ ಪ್ರಕಾಶ ಸ್ವಾಮೀಜಿ ಅವರು ಶುಕ್ರವಾರ ಉದ್ಘಾಟಿಸಿದರು. ಬಿ.ಕೆ. ಉಷಾ ಬೆಹನ್, ಕಮಲಾ ದೀಕ್ಷಿತ್, ಡಾ. ನಿರಂಜನಾ ಬೆಹನ್, ಸಾಂತನು ಬಾಯಿ ಅವರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.