ಗುರುವಾರ , ಮೇ 13, 2021
40 °C

ಮೌಲ್ಯಯುತ ಸಾಹಿತ್ಯವೇ ಅರ್ಥಪೂರ್ಣ: ಡಾ.ಬಿದರಕುಂದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಡಗೇರಿ: ಮೌಲ್ಯಯುತ ಸಾಹಿತ್ಯವೇ ಅರ್ಥಪೂರ್ಣವಾಗಿ ರುತ್ತದೆ ಎಂದು ಹಿರಿಯ ಸಾಹಿತಿ ವಿಮರ್ಶಕ ಡಾ. ಶಾಮಸುಂದರ ಬಿದರಕುಂದಿ ಎಂದು ಅಭಿಪ್ರಾಯಪಟ್ಟರು.ಕುಂದಗೋಳ ತಾಲ್ಲೂಕು ಮಟ್ಟದ ದ್ವೀತಿಯ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪುಸ್ತಕ ರೂಪದಲ್ಲಿ ಬಂದ ಸಾಹಿತ್ಯವನ್ನು ನೋಡಿ ಸಾಹಿತ್ಯ ಯುಗ ಎಂದು ಬಣ್ಣಿಸುತ್ತೇವೆ. ಆದರೆ ಸಾಹಿತ್ಯ ಮೊದಲಿನಿಂದಲೂ ಜನ ಮನದಲ್ಲಿ ಇದೆ ಎಂದು ತಿಳಿಸಿದರು.ಆಧುನಿಕತೆಯ ಪರಿಣಾಮದಿಂದ  ಸಮಾಜದಲ್ಲಿ ಸಾಂಸ್ಕೃತಿಕ ಮೌಲ್ಯಗಳು ಮರೆಯಾಗುತ್ತಿವೆ.  ಆದ್ದರಿಂದ ಇಂದಿನ ಯುವ ಪೀಳಿಗೆಯಲ್ಲಿ ಹೊಸ ಆಲೋಚನೆಗಳನ್ನು ಹುಟ್ಟುಹಾಕಿ ಹೊಸ  ಸಾಹಿತ್ಯ ರಚನೆಗೆ ಪೂರಕವಾದ ವಾತಾವರಣ ಸೃಷ್ಟಿಸುವ ಅಗತ್ಯವಿದೆ ಎಂದು ಅವರು ಹೇಳಿದರು.ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ನಿಕಟ ಪೂರ್ವ ಅಧ್ಯಕ್ಷ ಮೋಹನ ನಾಗಮ್ಮನವರ ಮಾತನಾಡಿ, ಜನಮನ ದಲ್ಲಿ  ವೈಚಾರಿಕತೆ ಜೀವಂತವಾಗಿರಬೇಕು. ಗ್ರಾಮ ಭಾರತದತ್ತ ಜನ ಮರಳಬೇಕು.  ಜನ ಪ್ರತಿನಿಧಿ, ಅಧಿಕಾರಿಗಳು  ಕಡ್ಡಾಯವಾಗಿ ಗ್ರಾಮ ವಾಸ್ತವ್ಯ ಮಾಡಬೇಕು. ಅಂದಾಗ ಮಾತ್ರ ಜನರ ಸಮಸ್ಯೆಗಳನ್ನು ಅರಿತುಕೊಳ್ಳಲು ಸಾಧ್ಯ ಎಂದರು.ಕ.ಸಾ.ಪ  ಜಿಲ್ಲಾ ಘಟಕದ ಅಧ್ಯಕ್ಷ ಲಿಂಗರಾಜ ಅಂಗಡಿ,  ಪ್ರತಿ ತಾಲ್ಲೂಕಿಗೆ ಒಂದು ಸಾಹಿತ್ಯ  ಭವನ ನಿರ್ಮಾಣ ಮಾಡುವ ಅಗತ್ಯವಿದೆ ಎಂದು ಹೇಳಿದರು.ಜಿ.ಪಂ. ಸದಸ್ಯರಾದ ವೆಂಕನಗೌಡ ಹಿರೇಗೌಡ್ರ,  ನಿರ್ಮಲಾ ಉಪ್ಪಿನ ಮಮತಾಜ್ ಬಿ. ನದಾಫ,  ತಾ.ಪಂ. ಅಧ್ಯಕ್ಷೆ ಅಂಬವ್ವ ಪಾಟೀಲ,  ಗ್ರಾ. ಪಂ. ಅಧ್ಯಕ್ಷೆ ಗೀತಾ ಸುತಾರ ಯಲ್ಲಮ್ಮ,  ಜಿ.ಡಿ.  ಘೋರ್ಪಡೆ ಎಸ್.ಎನ್.  ಕೆಳದಿಮಠ , ಎ.ಬಿ. ಉಪ್ಪಿನ ಪಾಲ್ಗೊಂಡಿದ್ದರು.`ಶಿಕ್ಷಣದ ವ್ಯಾಪಾರೀಕರಣ ಸಲ್ಲ'

ಗುಡಗೇರಿ:
  ಸಮಕಾಲಿನ ಸಮಸ್ಯೆಗಳ  ಅರಿವು ಇಲ್ಲದ ಲೇಖಕ ಸಾಹಿತ್ಯದಲ್ಲಿ ಬದಲಾವಣೆ ತರಲಾರ ಎಂದು  ಸಮ್ಮೇಳನದ  ಅಧ್ಯಕ್ಷ ಸತೀಶ ಕುಲಕರ್ಣಿ ಹೇಳಿದರು.ಕುಂದಗೋಳ ತಾಲ್ಲೂಕು ಮಟ್ಟದ ದ್ವೀತಿಯ ಸಾಹಿತ್ಯ ಸಮ್ಮೇಳನದಲ್ಲಿ  ಅವರು ಮಾತನಾಡಿದರು. ಸುತ್ತಲಿನ ಸಮಸ್ಯೆಗಳನ್ನು  ತೀಕ್ಷ್ಣ  ದೃಷ್ಟಿಯಿಂದ ನೋಡಿದರೆ ಸಮಸ್ಯೆಯ ಅರಿವಾಗುತ್ತದೆ. ಈ ಮೂಲಕ ಸಾಹಿತ್ಯವೂ ಹೊರಬರುತ್ತದೆ ಎಂದು ಅಭಿಪ್ರಾಯಪಟ್ಟರು.ಇಂಗ್ಲಿಷ್ ಹಾಗೂ  ಕನ್ನಡ ಕಲಿಕೆಯು ನಗರ ಹಾಗೂ ಗ್ರಾಮಗಳ ನಡುವಿನ ಅಂತರ ಹೆಚ್ಚಿಸಿದೆ. ಇಂಗ್ಲಿಷ್ ಕಲಿತರೆ ಮಾತ್ರ ಉದ್ಯೋಗ ಲಭಿಸಲು ಸಾಧ್ಯ. ವಾಸಕ್ಕೆ ನಗರವೇ ಸೂಕ್ತವಾದ ಸ್ಥಳ ಎನ್ನುವ ಭಾವನೆ ಬೆಳೆಯುತ್ತಿದೆ. ಇದು ಉತ್ತಮ ಬೆಳವಣಿಗೆ ಅಲ್ಲ ಎಂದು ಅಭಿಪ್ರಾಯಪಟ್ಟರು.ಈಗ ಶಿಕ್ಷಣ ವ್ಯಾಪಾರೀಕರಣವಾಗುತ್ತಿದೆ ಇದನ್ನು ತಡೆಯಬೇಕು.  ಕನ್ನಡ ಶಾಲೆಗಳು ಮುಚ್ಚುತಿರುವ ಬಗ್ಗೆ ಎಚ್ಚರವಹಿಸಬೇಕು ಎಂದು ಹೇಳಿದರು.ಧ್ವಜಾರೋಹಣ:  ಗುಡಗೇರಿ ಗ್ರಾಮದಲ್ಲಿ ದ್ವೀತಿಯ  ತಾಲ್ಲೂಕು  ಸಾಹಿತ್ಯ ಸಮ್ಮೆಳನ ಅದ್ದೂರಿಯಾಗಿ ಆರಂಭ ಗೊಂಡಿತು. ಬೆಳಿಗ್ಗೆ ಗ್ರಾಮದೇವತಾ ಮಹಾದ್ವಾರ ಬಳಿ  ರಾಷ್ಟ್ರಧ್ವಜಾರೋಹಣ ನೆರವೇರಿಸುವ ಮೂಲಕ ಅಕ್ಷರ ಜಾತ್ರೆಗೆ ಚಾಲನೆ ನೀಡಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.