ಸಾಲುಸಾಲು ಹೋಟೆಲ್, ರೆಸ್ಟೋರೆಂಟ್ಗಳಿರುವ ಚರ್ಚ್ಸ್ಟ್ರೀಟ್ ರಸ್ತೆ ಇನ್ನೇನು ಬ್ರಿಗೇಡ್ ರಸ್ತೆಯನ್ನು ಕೂಡಿಕೊಳ್ಳಬೇಕು; ಅಲ್ಲಿ ಎಡಭಾಗದ ಕೆಳಮಳಿಗೆ ಗಮನ ಸೆಳೆಯುತ್ತದೆ. ಒಂದೊಂದೇ ಮೆಟ್ಟಿಲು ಇಳಿಯುತ್ತಾ ಹೋದಂತೆ ಅತ್ತರಿನ ದಟ್ಟ ಪರಿಮಳ.

ಬರಮಾಡಿಕೊಳ್ಳಲೇ ಅಲ್ಲಿ ಇವೆಯೋ ಎಂಬಂತೆ ಬಗೆಬಗೆಯ ಆಕಾರ, ಬಣ್ಣದ ಬೆಕ್ಕುಗಳು. ಹೊಳಪು ಕಂಗಳ ಬೆಕ್ಕಿನ ಕಣ್ಣುಗಳನ್ನು ಟಿಶ್ಯೂ ಪೇಪರ್ನಿಂದ ಶುಚಿಗೊಳಿಸುವ ಹುಡುಗ ಮಳಿಗೆಯ ಒಳಗೆ ಹೋಗುವಂತೆ ಗ್ರಾಹಕರಿಗೆ ಇಶಾರೆ ನೀಡುತ್ತಾನೆ. ಒಳಗಡೆ ನಿಯತಕಾಲಿಕೆಗಳ ರಾಶಿ.

ಯಾಯಾ ಸೇಠ್ ಎಂಬ ಪುಸ್ತಕಪ್ರಿಯರೊಬ್ಬರು ಈ `ಮ್ಯಾಗಜಿನ್' ಹೆಸರಿನ ಮಾರಾಟ ಮಳಿಗೆಯನ್ನು ಎಂಟು ವರ್ಷಗಳ ಹಿಂದೆ ಪ್ರಾರಂಭಿಸಿದರು. ನಿಯತಕಾಲಿಕೆಗಳು ಮಾತ್ರ ಇಲ್ಲಿ ಕೊಳ್ಳಲು ಲಭ್ಯ. ಪ್ರಪಂಚದ ಎಲ್ಲ ಜನಪ್ರಿಯ ನಿಯತಕಾಲಿಕೆಗಳು ಇಲ್ಲಿವೆ. ಅದರಲ್ಲೂ ಮಕ್ಕಳಿಗೆ ಇಷ್ಟವಾಗುವ ಕಾಮಿಕ್ಸ್ ಪುಸ್ತಕಗಳ ದೊಡ್ಡ ಸಂಗ್ರಹ. ಇದೇ ಈ ಮಳಿಗೆಯ ವಿಶೇಷತೆ. ನಗರಕ್ಕೆ ಭೇಟಿ ನೀಡುವ ವಿದೇಶಿಗರೂ ಇಲ್ಲಿಯ ಗ್ರಾಹಕರೇ. ಅವರಲ್ಲಿ ಅನೇಕರು ತಮ್ಮ ದೇಶದ ನಿಯತಕಾಲಿಕೆಗಳು ಇಲ್ಲಿರುವುದನ್ನು ಕಂಡು ಅಚ್ಚರಿಪಟ್ಟಿದ್ದಿದೆ.

ಅಂದಹಾಗೆ, `ಮ್ಯಾಗಜೀನ್' ಮಳಿಗೆ ತೆರೆದಿರುವುದರ ಹಿಂದೆ ಆಸಕ್ತಿಕರ ಕತೆಯೊಂದಿದೆ. ಯಾಯಾ ಸೇಠ್ ಅವರ ತಂದೆ ಮಹಮದ್ ಹುಸೇನ್ ಸೇಠ್. ಇವರು 1968ರಲ್ಲಿ ಚರ್ಚ್ಸ್ಟ್ರೀಟ್ನಲ್ಲಿ (ಕೆ.ಸಿ.ದಾಸ್ ಪಕ್ಕ) ಪುಟ್ಟ ನಿಯತಕಾಲಿಕೆ ಮಾರಾಟ ಮಳಿಗೆಯೊಂದನ್ನು ತೆರೆದರು. ಅದಕ್ಕೆ `ವೆರೈಟಿ ಬುಕ್ ಹೌಸ್' ಅಂತ ಹೆಸರಿಟ್ಟರು. ಹುಸೇನ್ ಅವರು ಈ ರಸ್ತೆಯಲ್ಲಿ ನಿಯತಕಾಲಿಕೆಗಳ ಮಾರಾಟ ಮಳಿಗೆಯನ್ನೇ ಏಕೆ ತೆರೆದರೂ ಎಂಬ ಪ್ರಶ್ನೆಗೂ ಉತ್ತರವಿದೆ.

60-70ರ ದಶಕದಲ್ಲಿ ಎಂ.ಜಿ. ರಸ್ತೆ, ಚರ್ಚ್ಸ್ಟ್ರೀಟ್ ಪ್ರತಿಷ್ಠಿತರ ಬೀದಿ ಎನಿಸಿಕೊಂಡಿದ್ದವು. ಆಗ ಈ ರಸ್ತೆಯಲ್ಲಿ ವಾಹನ ದಟ್ಟಣೆ, ಜನದಟ್ಟಣೆ ವಿರಳವಾಗಿತ್ತು. ಜಾಗ ತುಂಬಾ ಪ್ರಶಾಂತವಾಗಿತ್ತು. ಶ್ರೀಮಂತರೇ ಹೆಚ್ಚಾಗಿ ಈ ರಸ್ತೆಯಲ್ಲಿ ಓಡಾಡುತ್ತಿದ್ದರು. ಆಗೀಗ ರಸ್ತೆಯ ಮೇಲೆ ಒಂದೊಂದು ಕಾರು ಕಾಣಿಸಿಕೊಳ್ಳುತ್ತಿತ್ತು. ಎಚ್ಎಎಲ್ ಉದ್ಯೋಗಿಯಾಗಿದ್ದ ಹುಸೇನ್ ಈ ಬೀದಿಯನ್ನು ಸೂಕ್ಷ್ಮವಾಗಿ ಗಮನಿಸಿ ಅಲ್ಲೊಂದು ನಿಯತಕಾಲಿಕೆ ಮಳಿಗೆ ತೆಗೆಯುವ ಯೋಚನೆ ಮಾಡಿದರು. ಆಗ ಹುಟ್ಟಿಕೊಂಡಿದ್ದೇ `ವೆರೈಟಿ ಬುಕ್ ಹೌಸ್' ಎಂಬ ನಿಯತಕಾಲಿಕೆಗಳ ಖಜಾನೆ.

ಹುಸೇನ್ `ವೆರೈಟಿ ಬುಕ್ ಹೌಸ್' ತೆರೆದಾಗ ಇಷ್ಟೊಂದು ಬಗೆಯ ನಿಯತಕಾಲಿಕೆಗಳು ಇರಲಿಲ್ಲ. ಆದರೂ ಅವರು ತಮ್ಮ ಅಂಗಡಿಗೆ `ವೆರೈಟಿ ಬುಕ್ ಹೌಸ್' ಎಂದು ಹೆಸರಿಟ್ಟರು. ಅಂದು ಶುರುವಾದ ಈ ಮಳಿಗೆ ಇಂದಿನವರೆಗೂ ನಿಯತಕಾಲಿಕೆ ಪ್ರೇಮಿಗಳ ಅಕ್ಷರ ಪ್ರೀತಿಯನ್ನು ಪೋಷಿಸುತ್ತಾ ಬಂದಿದೆ.

`ವೆರೈಟಿ ಬುಕ್ ಹೌಸ್'ಗೂ ಪತ್ರಿಕೆಗಳಿಗೂ ಒಂದು ನಂಟಿದೆಯಂತೆ. ಅದನ್ನು ಆಗಾಗ ಯಾಯಾ ಸೇಠ್ ಹೇಳುತ್ತಿರುತ್ತಾರೆ. ಹುಸೇನ್ ಅವರು `ವೆರೈಟಿ ಬುಕ್ ಹೌಸ್' ಶುರುಮಾಡಿದಾಗ ಡೆಕ್ಕನ್ ಹೆರಾಲ್ಡ್ ಪತ್ರಿಕೆ ಬೆಲೆ 12 ಪೈಸೆ ಇತ್ತಂತೆ. ತಿಂಗಳ ಬಿಲ್ 5 ರೂಪಾಯಿ 25 ಪೈಸೆ. ಹಾಗೆಯೇ ಫಿಲ್ಮ್ಫೇರ್ ನಿಯತಕಾಲಿಕೆ 15 ಪೈಸೆಗೆ ಸಿಕ್ಕುತ್ತಿತ್ತು. ಫೆಮಿನಾ, ಪ್ರಜಾವಾಣಿ, ಇಲ್ಲಸ್ಟ್ರೇಟೆಡ್ ವೀಕ್ಲಿ, ಟೈಮ್ಸ ಆಫ್ ಇಂಡಿಯಾ, ಇಂಡಿಯನ್ ಎಕ್ಸ್ಪ್ರೆಸ್, ಸಂಯುಕ್ತ ಕರ್ನಾಟಕ ಪತ್ರಿಕೆಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತಿತ್ತು.

ಈ ಮಳಿಗೆ ಬಳಿ ನಿಂತು ನೋಡಿದರೆ ಬ್ರಿಗೇಡ್ ರೋಡ್ ಕಾಣಿಸುತ್ತಿತ್ತಂತೆ. ನಂತರದ ದಿನಗಳಲ್ಲಿ ನಗರಿ ಊಹೆಗೂ ಮೀರಿ ಬೆಳೆಯಿತು. ಎಂ.ಜಿ. ರಸ್ತೆಗೆ ದೊಡ್ಡ ಗ್ಲಾಮರ್ ಬಂತು. ಹಾಗಾಗಿ, ಬ್ರಿಗೇಡ್ ರಸ್ತೆಗೆ ಬರುವ ಜನರು `ವೆರೈಟಿ ಬುಕ್ ಹೌಸ್'ಗೆ ಬರದೇ ಹೋಗಬಹುದು ಎಂದು ಮಗ ಯಾಯಾ ಸೇಠ್ ಆಲೋಚಿಸಿ ಚರ್ಚ್ಸ್ಟೀಟ್ನ ಆ ತುದಿಯಲ್ಲೊಂದು ಮಳಿಗೆ ತೆರೆದರು. ಅದುವೇ `ಮ್ಯಾಗಜಿನ್' ಮಳಿಗೆ. ಇದು `ವೆರೈಟಿ ಬುಕ್ ಹೌಸ್'ನ ಕವಲು.

ಇಲ್ಲಿಗೆ ಭೇಟಿ ನೀಡಿದ ಪ್ರತಿಯೊಬ್ಬರನ್ನು ಇಲ್ಲಿರುವ ತರಹೇವಾರಿ ನಿಯತಕಾಲಿಕೆಗಳು ಆಕರ್ಷಿಸುತ್ತವೆ. ಯುನೈಟೆಡ್ ಕಿಂಗ್ಡಮ್, ಅಮೆರಿಕ, ಜರ್ಮನಿ, ಫ್ರಾನ್ಸ್ ದೇಶದ ಎಲ್ಲ ನಿಯತಕಾಲಿಕೆಗಳು ಇಲ್ಲಿ ಲಭ್ಯ. ಕೆಲವು ನಿಯತಕಾಲಿಕೆಗಳ ಮೇಲೆ ವಿಶೇಷ ರಿಯಾಯಿತಿ ನೀಡುವುದರಿಂದ ಕಾಯಂ ಗ್ರಾಹಕರು ಈ ಮಳಿಗೆಗೆ ಉಂಟು. ಇಲ್ಲಿ 10 ಸಾವಿರಕ್ಕೂ ಅಧಿಕ ಬಗೆಯ ನಿಯತಕಾಲಿಕೆ ಸಿಗುತ್ತವೆ.

ಸೆಲೆಬ್ರಿಟಿಗಳೂ ಗ್ರಾಹಕರು
ವಿದೇಶಿ ಗ್ರಾಹಕರ ಜತೆ ಸೆಲೆಬ್ರಿಟಿಗಳು ಕೂಡ ಇಲ್ಲಿನ ಗಿರಾಕಿಗಳಲ್ಲಿ ಸೇರಿದ್ದಾರೆ. ನಟ ಪುನೀತ್ ರಾಜ್ಕುಮಾರ್ ಹಾಗೂ ಅವರ ಪತ್ನಿ ಆಗಾಗ ಬರುತ್ತಾರೆ. ಹಾಗೆಯೇ ಕಲಾವಿದೆ ವಾಣಿ ಗಣಪತಿ, ನಟ ರವಿಚಂದ್ರನ್, ರಾಮ್ ಕುಮಾರ್ ಬರುತ್ತಾರೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಬೆಂಗಳೂರಿಗೆ ಬಂದಾಗೆಲೆಲ್ಲ ಇಲ್ಲಿಗೆ ತಪ್ಪದೇ ಭೇಟಿ ನೀಡುತ್ತಾರೆ. ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಆಗೆಲ್ಲಾ ಬೌರಿಂಗ್ ಇನ್ಸ್ಟಿಟ್ಯೂಟ್ನಲ್ಲಿ ಟೆನ್ನಿಸ್ ಆಡಿ, ಕೋಷಿಸ್ನಲ್ಲಿ ಕಾಫಿ ಕುಡಿದು ನಿಯತಕಾಲಿಕೆಗಳನ್ನು ಕೊಳ್ಳಲು ಇಲ್ಲಿಗೆ ಬರುತ್ತಿದ್ದರಂತೆ.

ತಾತನಿಂದ ಮೊಮ್ಮಕ್ಕಳವರೆಗೆ ಎಲ್ಲರೂ ಈ `ವೆರೈಟಿ ಬುಕ್ ಹೌಸ್'ನ ಗ್ರಾಹಕರಾಗಿದ್ದು, ಆ ಪ್ರೀತಿಯೇ ಮುಂದೆ `ಮ್ಯಾಗಜಿನ್' ಮಳಿಗೆ ತೆರೆಯಲು ಕಾರಣವಾಗಿದ್ದು. ಈ ಎರಡೂ ಮಳಿಗೆಗಳಲ್ಲಿ ಗ್ರಾಹಕರಿಗೆ ಸಾಕೆನಿಸುವಷ್ಟು ನಿಯತಕಾಲಿಕೆಗಳ ಆಯ್ಕೆ ಇದೆ. ಯುನೈಟೆಡ್ ಕಿಂಗ್ಡಮ್ ಹಾಗೂ ಅಮೆರಿಕದ ಜನಪ್ರಿಯ ನಿಯತಕಾಲಿಕೆಗಳ ಜತೆಗೆ ವಿಜ್ಞಾನ, ಆಸ್ಟ್ರಾನಮಿ, ಫ್ಯಾಷನ್, ಪೆನ್, ವೈನ್, ಏರ್ಕ್ರಾಫ್ಟ್, ಆರ್ಕಿಯಾಲಜಿ, ಮಾಡೆಲಿಂಗ್, ಕಾರು, ಟ್ಯಾಟೂ, ಆಹಾರ ಹೀಗೆ ಸಾವಿರಾರು ವಿಷಯಗಳಿಗೆ ಸಂಬಂಧಿಸಿದ ದೇಶ ವಿದೇಶಗಳ ನಿಯತಕಾಲಿಕೆಗಳು ದೊರಕುತ್ತವೆ.

ಆಹಾರಗಳಿಗೆ ಸಂಬಂಧಿಸಿದ ಇಟಲಿಯ `ಕಾ ಕುಸಿನಾ ಇಟಾಲಿಯನ್', `ಕುಕ್ಸ್ ಇಲ್ಯುಸ್ಟ್ರೇಷನ್', ಗ್ರಾಫಿಕ್ ಡಿಸೈನ್ಗೆ ಸಂಬಂಧಿಸಿದ `ಜುಕ್ಸ್ಟಾಪ್ೋ', `ನೈಫ್', `ಕಾಯಿನ್', `ಹ್ಯಾಂಡ್ಗನ್ಸ್', `ಗನ್ ರಿಲೋಡಿಂಗ್', `ಬಿಯರ್', `ರಾಕ್ ಅಂಡ್ ಜೆಮ್' ಹೀಗೆ ಹಲವು ವಿಧದ ನಿಯತಕಾಲಿಕಗಳು ನಗರದಲ್ಲಿ ಈ ಮಳಿಗೆಯಲ್ಲಿ ಮಾತ್ರ ದೊರೆಯುತ್ತವೆ.

ಪುಸ್ತಕಪ್ರೇಮಿಗಳಿಗೆ ಬರವಿಲ್ಲ
ಗ್ಯಾಡ್ಜೆಟ್ಗಳಿಂದಾಗಿ ಓದುಗರ ಸಂಖ್ಯೆ ಕಡಿಮೆಯಾಗಿದೆ ಎನ್ನುವುದನ್ನು ಯಾಯಾ ಸೇಠ್ ಒಪ್ಪುವುದಿಲ್ಲ. ಕಂಪ್ಯೂಟರ್, ಮೊಬೈಲ್ ಇವುಗಳ ಭರಾಟೆ ನಡುವೆಯೂ ಪುಸ್ತಕ ಪ್ರೇಮಿಗಳು ಉಳಿದುಕೊಂಡಿದ್ದಾರೆ ಎಂಬುದು ಅವರ ಸ್ಪಷ್ಟ ನಂಬಿಕೆ. ಪುಸ್ತಕವನ್ನು ಅಂಗೈಯಲ್ಲಿ ಹಿಡಿದು, ಎದೆಗೊತ್ತಿಕೊಂಡು ನೆಮ್ಮದಿ ಕಾಣುವ ಜನರು ಸಾಕಷ್ಟಿದ್ದಾರೆ. `ನನಗೆ ಪುಸ್ತಕದೊಂದಿಗೆ ರೊಮ್ಯಾನ್ಸ್ ಮಾಡುವುದೆಂದರೆ ತುಂಬಾ ಇಷ್ಟ. ನಿಯತಕಾಲಿಕೆಗಳ ಹಾಳೆಗಳನ್ನು ತೆಗೆಯುವಾಗ ಅದರಿಂದ ಹೊಮ್ಮುವ ವಾಸನೆ ಇದೆಯಲ್ಲಾ ಅದನ್ನು ಆಘ್ರಾಣಿಸುವುದೆಂದರೆ ಇನ್ನೂ ಇಷ್ಟ' ಅಂತ ಅಜ್ಜಿಯೊಬ್ಬರು ಹೇಳಿದ್ದನ್ನು ಸೇಠ್ ನೆನೆಸಿಕೊಳ್ಳುತ್ತಾರೆ.

ಅಂದಹಾಗೆ, ಇಡೀ ದೇಶದಲ್ಲಿಯೇ ಎಲ್ಲೂ ಬಿಕರಿಯಾಗದಷ್ಟು ಇಂಗ್ಲಿಷ್ ನಿಯತಕಾಲಿಕೆಗಳು ಬೆಂಗಳೂರಿನಲ್ಲಿ ಮಾರಾಟವಾಗುತ್ತವೆ ಎನ್ನುತ್ತಾರೆ ಯಾಯಾ ಸೇಠ್. ದೆಹಲಿ, ಮುಂಬೈಯಲ್ಲಿ ಹೆಚ್ಚು ಮಾರಾಟಾವಾಗುವುದು ಹಿಂದಿಯವು. ಈ ಮಳಿಗೆಯಲ್ಲಿ ಕನ್ನಡ, ಹಿಂದಿ, ಬಂಗಾಳಿ ಮತ್ತು ಇಂಗ್ಲಿಷ್ ನಿಯತಕಾಲಿಕೆಗಳು ಲಭ್ಯ. ಇಂಗ್ಲಿಷ್ ಬಿಟ್ಟರೆ ಹೆಚ್ಚು ಮಾರಾಟವಾಗುವುದು ಬಂಗಾಳಿ ನಿಯತಕಾಲಿಕೆಗಳು. ಅತ್ಯಂತ ಕಡಿಮೆ ಮಾರಾಟವಾಗುವ ನಿಯತಕಾಲಿಕೆ ಎಂದರೆ ಅದು ಕನ್ನಡದ್ದೆ.

ವಿದೇಶಿ ಪತ್ರಿಕೆಗಳು ಇಲ್ಲಿ ಸಿಗುತ್ತವೆ. ಯುನೈಟೆಡ್ ಕಿಂಗ್ಡಮ್ನ ಫೈನಾನ್ಶಿಯಲ್ ಟೈಮ್ಸ (ರೂ.130), ಗಲ್ಫ್ ನ್ಯೂಸ್ (ರೂ.40) ಒಂದು ದಿನ ತಡವಾಗಿ ಇಲ್ಲಿಗೆ ಬರುತ್ತವೆ. ಆದರೂ ಇವುಗಳಿಗೆ ಇಲ್ಲಿ ಗ್ರಾಹಕರಿದ್ದಾರೆ. ಮೊದಲೆಲ್ಲಾ ಫ್ರೆಂಚ್, ಜರ್ಮನ್ ಮತ್ತು ಆಸ್ಟ್ರೇಲಿಯಾದ ಪತ್ರಿಕೆಗಳನ್ನು ತರಿಸುತ್ತಿದ್ದರು. ಆದರೆ, ಅವುಗಳ ಬೇಡಿಕೆ ಕಮ್ಮಿಯಾದ್ದರಿಂದ ಈಗ ತರಿಸುತ್ತಿಲ್ಲ.

ಪುಸ್ತಕ ಪ್ರಿಯ ತಾತ
`ವೆರೈಟಿ ಬುಕ್ ಹೌಸ್' ಶುರುವಾದಾಗಿನಿಂದಲೂ ಮಳಿಗೆಗೆ ಒಬ್ಬ ಅಜ್ಜ ಕಾಯಂ ಗಿರಾಕಿ. ಅವರು ಇರುವುದು ರಾಜರಾಜೇಶ್ವರಿ ನಗರದಲ್ಲಿ. ಆಗೆಲ್ಲಾ ಈ ಅಜ್ಜ ರಾಜರಾಜೇಶ್ವರಿ ನಗರದಿಂದ ಇಲ್ಲಿಗೆ ಸೈಕಲ್ ಮೇಲೆ ಬರುತ್ತಿದ್ದರಂತೆ. ಅಲ್ಲಿಂದ ಹೊರಟವರಿಗೆ ಎದುರಾಗುತ್ತಿದ್ದುದು ಅನಿಲ್ ಕುಂಬ್ಳೆ ಸರ್ಕಲ್ನಲ್ಲಿರುವ ಸಿಗ್ನಲ್ ಒಂದೇ! ಅದನ್ನು ದಾಟಿ ಮಳಿಗೆಗೆ ಬಂದು ಬೇಕಿರುವ ಮ್ಯಾಗಜಿನ್ ಕೊಂಡೊಯ್ಯುತ್ತಿದ್ದರಂತೆ. ಅವರ ಪುಸ್ತಕ ಪ್ರೀತಿ ಯಾಯ ಸೇಠ ಅವರನ್ನು ಮೂಕವಿಸ್ಮಿತರನ್ನಾಗಿಸಿದೆ.

ಮಾರ್ಜಾಲ ಪ್ರೀತಿ
ಮ್ಯಾಗಜಿನ್ ಮಳಿಗೆಯಲ್ಲಿ ದೂರದ ಪರ್ಷಿಯಾದ 15 ಬೆಕ್ಕುಗಳು ಇವೆ. ಯಾಯಾ ಸೇಠ್ ಅವರ ಮಾರ್ಜಾಲ ಪ್ರೀತಿ ಬೆಕ್ಕುಗಳ ವಿದೇಶ ಪ್ರಯಾಣಕ್ಕೆ ಕಾರಣ. ಒಡೆಯನ ಪ್ರೀತಿ ಜತೆಗೆ ಇಲ್ಲಿಗೆ ಬರುವ ಗ್ರಾಹಕರ ಪ್ರೀತಿಯಿಂದ ಇವುಗಳು ಬೆಳೆದಿವೆ.

`ರಾಯಲ್ ಕ್ಯಾನನ್' ಎಂಬ ಪೌಷ್ಟಿಕ ಆಹಾರ ಇವುಗಳಿಗೆ ಹೊಟ್ಟೆತುಂಬಿಸುತ್ತದೆ. ಜೊತೆಗೆ ನೀರು ಮತ್ತು ಜನರ ಪ್ರೀತಿ ಇದ್ದೇ ಇದೆ. ಹಾಲು ಇವುಗಳ ದೇಹಕ್ಕೆ ಒಗ್ಗುವುದಿಲ್ಲ. ಇವುಗಳ ಪಾಲಿಗೆ ಅದು ವಿಷವಿದ್ದಂತೆ. ಅದನ್ನು ಕುಡಿದ ಮೊದಲ ದಿನ ಭೇದಿ ಶುರುವಾಗಿ ಎರಡನೇ ದಿನ ಸಾವು ಸಂಭವಿಸುತ್ತದಂತೆ. ಹೀಗಾಗಿ ಇವುಗಳಿಗೆ ಹಾಲು ನಿಷಿದ್ಧ.

ಓದುವ ಹವ್ಯಾಸವಿದ್ದರೆ ನಿಯತಕಾಲಿಕೆಯ ಕಣಜವಾದ ಈ ಮಳಿಗೆಗೆ ಭೇಟಿ ನೀಡಿ. ಮಾಹಿತಿಗೆ: ಯಾಯ ಸೇಠ್ 98452 50720, 98452 50480.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.