ನೈಪೇತಾವ್, ಮ್ಯಾನ್ಮಾರ್ (ಎಎಫ್‌ಪಿ): ಆಂಗ್ ಸಾನ್ ಸೂಕಿ ಅವರ ನೇತೃತ್ವದ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ (ಎನ್‌ಎಲ್‌ಡಿ) ಪಕ್ಷವು ಬುಧವಾರ ಮ್ಯಾನ್ಮಾರ್ ಆಡಳಿತವನ್ನು ವಹಿಸಿಕೊಂಡಿದೆ. ಈ ಮೂಲಕ ದೇಶದಲ್ಲಿ ಹೊಸ ರಾಜಕೀಯ ಪರ್ವ ಆರಂಭವಾಗಿದೆ.

ಬುಧವಾರ ಇಲ್ಲಿನ ಅಧ್ಯಕ್ಷರ ಅರಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎನ್‌ಎಲ್‌ಡಿ ಪಕ್ಷದ ಹಟಿನ್ ಕೈವ್ ದೇಶದ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಈ ಹಿಂದಿನ ಅಧ್ಯಕ್ಷ ಜನರಲ್ ಥೀನ್‌ಸೀನ್ ಅವರು ಹಟಿನ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ಕಳೆದ ನವೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಎನ್‌ಎಲ್‌ಡಿ ಪಕ್ಷವು ಸ್ಪರ್ಧಿಸಿದ್ದ ಒಟ್ಟು ಸ್ಥಾನಗಳಲ್ಲಿ ಶೇ 80ರಷ್ಟನ್ನು ಗೆದ್ದಿತ್ತು. ಮ್ಯಾನ್ಮಾರ್ ಸಂವಿಧಾನ ಪ್ರಕಾರ ಅಲ್ಲಿನ ಅಧ್ಯಕ್ಷರಾಗುವವರ ಪತಿ/ಪತ್ನಿ ಅಥವಾ ಮಕ್ಕಳು ವಿದೇಶಿ ಪೌರತ್ವ ಹೊಂದಿರಬಾರದು. ಪಕ್ಷದ ಮುಖ್ಯಸ್ಥೆ ಸೂಕಿ ಅವರ ಮಕ್ಕಳು ಬ್ರಿಟನ್ ಪೌರತ್ವ ಹೊಂದಿದ್ದಾರೆ. ಹೀಗಾಗಿ ಸೂಕಿ ದೇಶದ ಅಧ್ಯಕ್ಷರಾಗಲು ಸಾಧ್ಯವಾಗಲಿಲ್ಲ.

ಹೀಗಾಗಿ ಹಟಿನ್ ಕೈವ್ ಮ್ಯಾನ್ಮಾರ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಹಟಿನ್ ಅಧ್ಯಕ್ಷರಾದರೂ ಸೂಕಿ ಅವರೇ ಅಧಿಕಾರವನ್ನು ನಿರ್ವಹಿಸಲಿದ್ದಾರೆ. ವಿದೇಶಾಂಗ ವ್ಯವಹಾರಗಳ ಖಾತೆ ಸೇರಿದಂತೆ ಸೂಕಿ ಹಲವು ಪ್ರಮುಖ ಖಾತೆಗಳ ಚುಕ್ಕಾಣಿ ಹಿಡಿದಿದ್ದಾರೆ.

ಪ್ರಜಾಪ್ರಭುತ್ವವಾದಿ ಪಕ್ಷ ಅಧಿಕಾರ ವಹಿಸಿಕೊಂಡಿದ್ದರೂ ಸೇನೆ ರಾಜಕಾರಣದಿಂದ ಸಂಪೂರ್ಣ ದೂರ ಉಳಿಯುವುದಿಲ್ಲ. ಮ್ಯಾನ್ಮಾರ್‌ನ ಮೇಲ್ಮನೆ ಮತ್ತು ಕೆಳಮನೆಗಳ ಒಟ್ಟು ಸ್ಥಾನಗಳಲ್ಲಿ ಶೇ 25ರಷ್ಟು ಸ್ಥಾನಗಳನ್ನು ಅಲ್ಲಿನ ಸಂವಿಧಾನವು ಸೇನೆಗೆ ಮೀಸಲಿರಿಸಿದೆ. ಅಂತೆಯೇ ಮೂರು ಪ್ರಮುಖ ಖಾತೆಗಳು ಸೇನೆಯ ಪಾಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.