ಮ್ಯಾನ್ಮಾರ್: 70 ರಾಜಕೀಯ ಕೈದಿಗಳ ಬಿಡುಗಡೆ

7

ಮ್ಯಾನ್ಮಾರ್: 70 ರಾಜಕೀಯ ಕೈದಿಗಳ ಬಿಡುಗಡೆ

Published:
Updated:

ಬ್ಯಾಂಕಾಕ್, (ಎಎಫ್‌ಪಿ): ಮ್ಯಾನ್ಮಾರ್‌ನ ಹೊಸ ಆಡಳಿತ ನೀಡಿರುವ ಕ್ಷಮಾದಾನದ ಅನ್ವಯ, 70 ರಾಜಕೀಯ ಕೈದಿಗಳನ್ನು ಬುಧವಾರ ಬಿಡುಗಡೆ ಮಾಡಲಾಗಿದೆ ಎಂದು ಥಾಯ್ಲೆಂಡ್ ಮೂಲದ ಸಂಘಟನೆ ಹೇಳಿದೆ.ಬಿಡುಗಡೆಯಾಗುವ ಕೈದಿಗಳ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು `ಯುದ್ಧ ಕೈದಿಗಳಿಗಾಗಿನ ಸಂಸ್ಥೆ `ಅಸಿಸ್ಟೆನ್ಸ್ ಅಸೋಸಿಯೇಷನ್ ಫಾರ್ ಪೊಲಿಟಿಕಲ್ ಪ್ರಿಸನರ್ಸ್‌~ ನ ಅಂಗ್ ಕೆಯಿಂಗ್ ಮಿನ್ ಹೇಳಿದ್ದಾರೆ.ಮ್ಯಾನ್ಮಾರ್‌ನಲ್ಲಿ ಪ್ರಜಾಪ್ರಭುತ್ವ ಪರ ಹೋರಾಡಿ ಶಿಕ್ಷೆಗೆ ಗುರಿಯಾಗಿರುವ ಪತ್ರಕರ್ತರು, ಸನ್ಯಾಸಿಗಳು, ವಕೀಲರು ಸೇರಿಸುಮಾರು 2,000 ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡುವ ಅಂದಾಜಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry