ಸೋಮವಾರ, ಮಾರ್ಚ್ 1, 2021
30 °C

ಯಕ್ಷಗಾನ ಕಲಾವಿದರನ್ನು ಗೌರವಿಸಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಕ್ಷಗಾನ ಕಲಾವಿದರನ್ನು ಗೌರವಿಸಲು ಸಲಹೆ

ಉಡುಪಿ:‘ಯಾವ ಫಲಾಪೇಕ್ಷೆ ಇಲ್ಲದೆ ಯಕ್ಷಗಾನ ಕ್ಷೇತ್ರದಲ್ಲಿ ನಿರಂತರವಾಗಿ ದುಡಿಯುತ್ತಿರುವವರನ್ನು ಗುರುತಿಸಿ ಸನ್ಮಾನಿಸುವ ಕೆಲಸವನ್ನು ಸಂಘ– ಸಂಸ್ಥೆಗಳು ಮಾಡಬೇಕು’ ಎಂದು ಪರ್ಯಾಯ ಕಾಣಿಯೂರು ಮಠದ ವಿದ್ಯಾವಲ್ಲಭ ಸ್ವಾಮೀಜಿ ಹೇಳಿದರು.ಶ್ರೀಮಿತ್ರ ಯಕ್ಷಗಾನ ಮಂಡಳಿ ಸರಳೇ ಬೆಟ್ಟು, ಮಿತ್ರ ಕಲಾನಿಕೇತನ ಟ್ರಸ್ಟ್‌ ಮತ್ತು ರಸಿಕ ರತ್ನ ವಿಟ್ಲ ಜೋಶಿ ಪ್ರತಿ ಷ್ಠಾನ ನಗರದ ರಾಜಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಯಕ್ಷ ವೈಭವ ಮತ್ತು 31ನೆ ವಾರ್ಷಿಕೋತ್ಸವ ಸಂಭ್ರ ಮ ಕಾರ್ಯಕ್ರಮದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.ಪ್ರಶಸ್ತಿ ನೀಡಲಾಗುತ್ತದೆ ಎಂದು ಗೊತ್ತಾದರೆ ಸಾಕು ನಮಗೇ ಕೊಡಿ ಎಂದು ಕೇಳುವವರು ಇದ್ದಾರೆ. ಆದರೆ ಕೆಲವರು ಯಾವುದೇ ಪ್ರಶಸ್ತಿ ಸನ್ಮಾನಕ್ಕೆ ಆಸೆ ಪಡದೆ ತಮ್ಮಷ್ಟಕ್ಕೆ ತಾವು ಕೆಲಸ ಮಾಡುತ್ತಿರುತ್ತಾರೆ. ಅವರ ಸಾಧನೆ ಹೊರ ಜಗತ್ತಿಗೆ ಗೊತ್ತಾಗುವುದೇ ಇಲ್ಲ. ಇಂತಹ ವ್ಯಕ್ತಿಗಳನ್ನು ಗುರುತಿಸುವ ಕೆಲಸ ಆಗಬೇಕು. ಆಗ ಪ್ರಶಸ್ತಿಯ ಮೌಲ್ಯವೂ ಹೆಚ್ಚಾಗುತ್ತದೆ ಎಂದು ಅವರು ಹೇಳಿದರು.ಡಾ.ಕೃಷ್ಣಮೂರ್ತಿ ನಿಟಿಲಾಪುರ ಅವರಿಗೆ ಕಲಾ ಸಾಧಕ ಪುರಸ್ಕಾರ ನೀಡಿ ಗೌರವಿಸಲಾಯಿತು. ಹವ್ಯಾಸಿ ಯಕ್ಷಗಾನ ಕಲಾವಿದ ಶೀನಪ್ಪ ಸುವರ್ಣ ಅವರಿಗೆ ಬೈಕಾಡಿ ಕೃಷ್ಣಯ್ಯ ಸ್ಮಾರಕ ‘ಯಕ್ಷಶ್ರೀ’ ಪ್ರಶಸ್ತಿ, ಚಂಡೆ ವಾದಕ ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ ಅವರಿಗೆ ಅಲೆವೂರು ಮಾಧವ ಶೆಣೈ ಸ್ಮಾರಕ ‘ಯಕ್ಷ ಮಿತ್ರಶ್ರೀ’ ಪ್ರಶಸ್ತಿ, ಹವ್ಯಾಸಿ ಯಕ್ಷಗಾನ ಕಲಾವಿದ ಕೃಷ್ಣಯ್ಯ ಆಚಾರ್ಯ ಅವರಿಗೆ ಗೋರ್ಪಾಡಿ ವಿಠಲ ಪಾಟೀಲ್‌ ಸ್ಮಾರಕ ‘ಯಕ್ಷ ಕಲಾಶ್ರೀ’ ಪ್ರಶಸ್ತಿ,ಯು. ಸೋಮಪ್ಪ ದೇವಾಡಿಗ ಅವರಿಗೆ ಕಪ್ಪೆಟ್ಟುಮೇಲ್ಮನೆ ಕೆ.ನಾರಾಯಣ ಶೆಟ್ಟಿ ಸ್ಮಾರಕ ‘ಮಿತ್ರ ಕಲಾಶ್ರೀ’ ಪ್ರಶಸ್ತಿ, ಆರ್ಗೋಡು ಸದಾನಂದ ಶೆಣೈ ಅವರಿಗೆ ಪರ್ಕಳ ಮಂಜುನಾಥ ಶೆಣೈ ಸ್ಮಾರಕ ‘ಮಿತ್ರಶ್ರೀ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.ಭುವನ ಪ್ರಸಾದ್‌ ಹೆಗ್ಡೆ ಸ್ವಾಗತಿಸಿದರು. ಪ್ರೊ.ಎಸ್‌.ವಿ. ಉದಯ ಕುಮಾರ್‌ ಶೆಟ್ಟಿ ಅಭಿನಂದನಾ ಭಾಷಣ ಮಾಡಿ ದರು. ಪಟ್ಲದ ವಿಟ್ಲಜೋಶಿ ಪ್ರತಿ ಷ್ಠಾನದ ಡಾ. ಹರೀಶ್‌ ಜೋಶಿ, ಮಣಿ ಪಾಲ್‌ ಟೆಕ್ನಾಲಜಿಸ್‌ನ ಹಿರಿಯ ಮಹಾ ಪ್ರಬಂಧಕ ಬಿ. ನರಹರಿ, ತೊಟ್ಟಂನ ಗಜಾನನ ಯಕ್ಷಕಲಾ ಸಂಘದ ಯು. ದುಗ್ಗಪ್ಪ, ಎಚ್‌. ಪ್ರಕಾಶ್‌ ಶಾನುಭಾಗ್‌ ಮತ್ತಿತರರು ಇತರರು ಕಾರ್ಯ ಕ್ರಮದಲ್ಲಿ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.