ಬುಧವಾರ, ಜನವರಿ 22, 2020
24 °C

ಯಶವಂತಪುರ–ಮೀರಜ್‌ ರೈಲು ಸಂಚಾರ ವಿಸ್ತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಯಶವಂತಪುರ–ಮೀರಜ್‌ (ನಂ. 06517/06518) ವಿಶೇಷ ರೈಲು ಸಂಚಾರವನ್ನು ಇದೇ 23ರಿಂದ ಜನವರಿ 1ರವರೆಗೆ (ಎರಡು ಕಡೆಯಿಂದ ತಲಾ ಐದು ಸಂಚಾರ) ವಿಸ್ತರಿಸಲಾಗಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.ಈ ರೈಲು ಭಾನುವಾರ, ಮಂಗಳವಾರ ಹಾಗೂ ಗುರುವಾರದಂದು ರಾತ್ರಿ 8.40ಕ್ಕೆ ಯಶವಂತಪುರದಿಂದ ಹೊರಟು ಮರುದಿನ ಬೆಳಿಗ್ಗೆ 10.05ಕ್ಕೆ ಮೀರಜ್ ತಲುಪಲಿದೆ.  ಮೀರಜ್‌ನಿಂದ ಸೋಮವಾರ, ಬುಧವಾರ ಹಾಗೂ ಶುಕ್ರವಾರದಂದು ಮಧ್ಯಾಹ್ನ 4.45ಕ್ಕೆ ಹೊರಟು ಮರುದಿನ ಬೆಳಿಗ್ಗೆ 6.20ಕ್ಕೆ ಯಶವಂತಪುರ  ಸೇರಲಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)