ಭಾನುವಾರ, ಜೂನ್ 13, 2021
25 °C

ಯಶವಂತಪುರ ಎಕ್ಸ್‌ಪ್ರೆಸ್‌: ಸಂಚಾರ ಮುಂದುವರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ:  ಯಶವಂತಪುರ–ಮಿರಜ್‌–ಯಶವಂತಪುರ ಎಕ್ಸ್‌ಪ್ರೆಸ್‌ ರೈಲು ಸಂಚಾರವನ್ನು ಜುಲೈ 1ರವರೆಗೆ ಮುಂದುವರಿಸಿ­ರುವುದಾಗಿ ನೈರುತ್ಯ ರೈಲ್ವೆ ಪ್ರಕಟಣೆ­ಯಲ್ಲಿ ತಿಳಿಸಿದೆ.ವಾರಕ್ಕೆ ಎರಡು ಬಾರಿ ಸಂಚರಿ­ಸುವ ಈ ರೈಲು (06517) ನೂತನ ವೇಳಾಪಟ್ಟಿಯಂತೆ ಯಶವಂತಪುರ­ದಿಂದ   ಪ್ರತಿ ಸೋಮವಾರ ಹಾಗೂ ಗುರುವಾರದಂದು ರಾತ್ರಿ 8.40ಕ್ಕೆ ಹೊರಟು ತುಮಕೂರು, ಅರಸೀಕೆರೆ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಕುಡಚಿ ಮಾರ್ಗವಾಗಿ ಮರುದಿನ ಬೆಳಿಗ್ಗೆ 10.15ಕ್ಕೆ ಮಿರಜ್‌  ತಲುಪಲಿದೆ.ಮಿರಜ್‌ನಿಂದ ಪ್ರತಿ ಮಂಗಳವಾರ ಹಾಗೂ ಶುಕ್ರವಾರದಂದು ಸಂಜೆ 4.45ಕ್ಕೆ ಹೊರಡುವ ರೈಲು (06518)  ಮರುದಿನ ಬೆಳಿಗ್ಗೆ 6.20ಕ್ಕೆ ಯಶವಂತಪುರ ತಲುಪಲಿದೆ. ಈ ರೈಲು ಒಟ್ಟು ಎರಡು ಹವಾನಿಯಂತ್ರಿತ ಬೋಗಿ, ಎಂಟು ದ್ವಿತೀಯ ದರ್ಜೆ ಸ್ಲೀಪರ್ ಬೋಗಿ, ಆರು ಸಾಮಾನ್ಯ ದರ್ಜೆ ಬೋಗಿ ಹಾಗೂ ಎರಡು ದ್ವಿತೀಯ ದರ್ಜೆ ಲಗೇಜ್‌ ಕಮ್‌ ಬ್ರೇಕ್‌ ವ್ಯಾನ್‌ಗಳನ್ನು ಹೊಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.