ಭಾನುವಾರ, ಜೂನ್ 13, 2021
26 °C

ಯಶಸ್ಸು ಕಾಣದ ಕಿರು ಹಣಕಾಸು ಕ್ಷೇತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಬಡವರ ಆರ್ಥಿಕ ಸಬಲೀ­ಕರಣವೇ ಕಿರು ಹಣಕಾಸು ಕ್ಷೇತ್ರದ ಮೂಲ ಧ್ಯೇಯವಾದರೂ ಕೆಲವು ನ್ಯೂನತೆ­ಗಳಿಂದ ಈವರೆಗೂ ಅದು ಯಶಸ್ಸು ಕಂಡಿಲ್ಲ ಎಂದು ಮೈಸೂರಿನ ಗಂಗೂ­ಬಾಯಿ ಹಾನಗಲ್‌ ಸಂಗೀತ ವಿಶ್ವವಿದ್ಯಾಲಯದ ಕುಲಸಚಿವ ಡಾ.ಸಿದ್ದೇಗೌಡ ಇಲ್ಲಿ ಶನಿವಾರ ಹೇಳಿದರು.



ಗುರುಶ್ರೀ ವಾಣಿಜ್ಯ ಹಾಗೂ ಸಮಾಜ ಅಧ್ಯಯನ ಕಾಲೇಜು ವತಿ­ಯಿಂದ ಹಮ್ಮಿಕೊಂಡಿದ್ದ ‘ಸುಸ್ಥಿರ ಸಮಾಜದ ಅಭಿವೃದ್ಧಿಯಲ್ಲಿ ಕಿರು ಹಣಕಾಸಿನ ಪಾತ್ರ’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು. ಬಡವರನ್ನು ಆರ್ಥಿಕವಾಗಿ ಸಬಲ­ಗೊ­ಳಿಸಲು ಸಾಂಘಿಕ ಶ್ರಮದ ಅಗತ್ಯ­ವಿದೆ. ಇದಕ್ಕೆ ಪೂರಕವಾದ ವಾತಾ­ವರಣ­ವನ್ನು ಸಮಾಜ ಸೇವಾ ಕ್ಷೇತ್ರ ಒದಗಿಸಬೇಕು ಎಂದು ಸಲಹೆ ಮಾಡಿದರು.



ಕೃಷಿ, ಕೈಗಾರಿಕೆ, ಹಣಕಾಸು ಕ್ಷೇತ್ರ­ಗಳಲ್ಲಿ ಸಾಮಾಜಿಕ ಸೇವೆಯ ಅಗತ್ಯ­ವಿದೆ. ಕಿರು ಹಣಕಾಸು ವಲಯ ಭಾರತದ ಆರ್ಥಿಕತೆಯಲ್ಲಿ ಹೇಗೆ ಪ್ರಮುಖ ಪಾತ್ರ ವಹಿಸುತ್ತದೋ ಹಾಗೆಯೇ ವ್ಯವಸ್ಥೆಯನ್ನು ಸರಿದಾರಿಗೆ ತರುವಲ್ಲೂ ಬಹುಮುಖ್ಯ ಪಾತ್ರ ವಹಿ­ಸು­ತ್ತಿದೆ. ಲೇವಾದೇವಿದಾರರು, ಗಿರವಿ ಅಂಗಡಿಯವರ ಕಪಿಮುಷ್ಟಿಯಿಂದ ಬಡ­ವರು, ರೈತರು, ಮಹಿಳೆಯರು, ಕೂಲಿ ಕಾರ್ಮಿಕರು  ಬಿಡುಗಡೆ ಹೊಂದಲು ಕಿರು ಹಣಕಾಸು ನೆರವಾಗಿತ್ತು.



ಆದರೆ ಇಂದು ಅಧಿಕ ಬಡ್ಡಿ, ಸರಿಯಾದ ಸಾಲ ಮರು­ಪಾವತಿ­ಯಾ­ಗದೆ ಸಾಕಷ್ಟು ಬಿಕ್ಕಟ್ಟು ಎದುರಿಸುತ್ತಿದೆ. ಹಣಕಾಸು ವಲಯದಿಂದ ಸಾಲ ಪಡೆದ ರೈತರು ಸಾಲ ತೀರಿಸಲಾಗದೆ ಆತ್ಮ­ಹತ್ಯೆಗೆ ಶರಣಾಗುತ್ತಿದ್ದಾರೆ. ಹಾಗಾಗಿ ಕಿರು ಹಣಕಾಸು ವಲಯ ಎದುರಿಸು­ತ್ತಿರುವ ಸಮಸ್ಯೆಗಳಿಗೆ ಪರಿಹಾರ ಹುಡುಕ­ಬೇಕಿದೆ ಎಂದು ಹೇಳಿದರು.



ಸಿದ್ದಗಂಗಾ ಮಠದ ಡಾ.ಶಿವ­ಕುಮಾರ ಸ್ವಾಮೀಜಿ ಸಾನಿಧ್ಯ ವಹಿ­ಸಿದ್ದರು. ಕಾಲೇಜು ಪ್ರಾಂಶುಪಾಲ ಪ್ರೊ.­ಟಿ.­ಗಂಗಾಧರಯ್ಯ, ಗುರುಶ್ರೀ ಎಜು­ಕೇಶನ್‌ ಟ್ರಸ್ಟ್ ಅಧ್ಯಕ್ಷ ಪ್ರೊ.­ಜಿ.­ಎಸ್‌.ಬಸವರಾಜು, ಪ್ರೊ.ಶಂಕರಯ್ಯ, ಡಾ.ಪರಶುರಾಮ್‌ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.