ಶುಕ್ರವಾರ, ಮೇ 20, 2022
20 °C

ಯುಕ್ತಾ ಮುಖಿ ಅತ್ತೆ- ಮಾವನಿಗೆ ನಿರೀಕ್ಷಣಾ ಜಾಮೀನು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಮಾಜಿ ವಿಶ್ವ ಸುಂದರಿ ಮತ್ತು ನಟಿ ಯುಕ್ತಾ ಮುಖಿ ಅವರ ಅತ್ತೆ, ಮಾವ, ನಾದಿನಿಯರು ಸದ್ಯ ನಿಟ್ಟುಸಿರು ಬಿಡುವಂತಾಗಿದೆ. ಯುಕ್ತಾ ಮುಖಿ ನೀಡಿದ್ದ ದೂರಿಗೆ ಸಂಬಂಧಿಸಿದಂತೆ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮಿನು ಅರ್ಜಿಗಳನ್ನು ಮಾನ್ಯ ಮಾಡಿರುವ ಸ್ಥಳೀಯ ನ್ಯಾಯಾಲಯ ಜುಲೈ 25ರವರಗೆ ನಿರೀಕ್ಷಣಾ ಜಾಮೀನು ನೀಡಿದೆ.ಯುಕ್ತಾ ಮುಖಿ ಅವರು ಪತಿ ಪ್ರಿನ್ಸ್ ಟುಲಿ ಹಾಗೂ ಕುಟುಂಬ ಸದಸ್ಯರ ವಿರುದ್ಧ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಜುಲೈ 3ರಂದು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು. ತಮಗೆ ಪತಿಯ ಮನೆಯವರು ಹಿಂಸೆ ನೀಡಿದ್ದಾರೆ, ನಂಬಿಕೆ ದ್ರೋಹ ಎಸಗಿದ್ದಾರೆ ಎಂದು ಮಾಜಿ ವಿಶ್ವಸುಂದರಿ ದೂರಿನಲ್ಲಿ ತಿಳಿಸಿದ್ದರು.ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾಯಾಲಯ, ಯುಕ್ತಾ ಮುಖಿ ಅವರ ಮಾವ ಬಚ್ಚಿತರ್ ಸಿಂಗ್ (59), ಅತ್ತೆ ಹರಿಂದರ್ ಕೌರ್ ಟುಲಿ (60), ನಾದಿನಿಯರಾದ ಮನ್‌ಮೀತ್ ಕೌರ್ (32) ಮತ್ತು ಚಂದನ್ ಕೌರ್ (34) ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.ಪ್ರಿನ್ಸ್ ಟುಲಿ ಅವರು ಇನ್ನಷ್ಟೇ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಬೇಕಾಗಿದೆ. ಮಾಜಿ ವಿಶ್ವಸುಂದರಿ 2008ರಲ್ಲಿ ನಾಗಪುರ ಮೂಲದ ಉದ್ಯಮಿ ಪ್ರಿನ್ಸ್ ಟುಲಿ ಅವರನ್ನು ಮದುವೆಯಾಗಿದ್ದರು. ದಂಪತಿಗೆ ಮೂರು ವರ್ಷದ ಪುತ್ರನೊಬ್ಬನಿದ್ದಾನೆ. ಒಂದು ವರ್ಷದಿಂದ ಮಗನು ಮುಖಿ ಅವರ ಪೋಷಕರ ಆಶ್ರಯದಲ್ಲಿದ್ದಾನೆ.ಯುಕ್ತಾ ಮುಖಿ ಅವರು ಅತಿಯಾದ ಸ್ವಚ್ಛತೆಯ ಕಾರಣ ನೀಡಿ ಮಗುವಿನ ಜೊತೆ ಕಾಲ ಕಳೆಯಲು ತಮಗೆ ಅವಕಾಶ ನೀಡುತ್ತಿರಲಿಲ್ಲ ಎಂದು ಟುಲಿ ಕುಟುಂದವರು ಆರೋಪಿಸಿದ್ದಾರೆ. ಸ್ವಚ್ಛತೆಯ ಕಾರಣ ನೀಡುತ್ತಾ ತಮಗೆ ಹಾಗೂ ಹತ್ತಿರದ ಬಂಧುಗಳಿಗೆ ಮಗುವಿನ ಹತ್ತಿರ ಬರಲು ಅವಕಾಶ ನೀಡದೆ, ಎಲ್ಲರಿಗೂ ಅವಮಾನ ಮಾಡುವ ಹೊಸ ವಿಧಾನವನ್ನು ಯುಕ್ತಾ ಮುಖಿ ಅನುಸರಿಸಿದ್ದಾರೆ ಎಂದೂ ಅವರು ದೂರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.