ಬುಧವಾರ, ಏಪ್ರಿಲ್ 21, 2021
24 °C

ಯುಗಮಾನೋತ್ಸವಕ್ಕೆ ಸಂಭ್ರಮದ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಳೆಹೊನ್ನೂರು: ಇಲ್ಲಿನ ರಂಭಾಪುರಿ ಪೀಠದಲ್ಲಿ ಮಾ.22 ರವರೆಗೆ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋತ್ಸವಕ್ಕೆ ಬುಧವಾರ ವಿದ್ಯುಕ್ತ ಚಾಲನೆ ದೊರೆಯಿತು.ಬುಧವಾರ ಮುಂಜಾನೆ ಭದ್ರಾ ನದಿಯ ತಟದಲ್ಲಿ ವೀರಸೋಮೇಶ್ವರ ಶಿವಾಚಾರ್ಯರು 108 ಕಲಶಗಳಿಗೆ ಪೂಜೆ ಸಲ್ಲಿಸುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಸಂಭ್ರಮದ ಚಾಲನೆ ನೀಡಿದರು. ನಂತರ ಭದ್ರಾನದಿ ತೀರದಿಂದ ಶ್ರೀಗಳ ಸಾನಿಧ್ಯದಲ್ಲಿ ವಿವಿಧ ವಾದ್ಯಗೋಷ್ಠಿಗಳು, ವೀರಗಾಸೆ, ಪೀಠದ ಆನೆ ಲಕ್ಷ್ಮಿ ಹಾಗೂ ಪೂರ್ಣಕುಂಭ ಹೊತ್ತ ಸುಮಂಗಲೆಯರೊಂದಿಗೆ ವೈದಿಕ ವೃಂದ ಅಗ್ರೋದಕವನ್ನು ಪಟ್ಟಣದಿಂದ ವೈಭವದ ಮೆರವಣಿಗೆಯಲ್ಲಿ ಹೊತ್ತು ಪೀಠಕ್ಕೆ ತಂದರು.ಪೀಠದ ವೀರಭದ್ರಸ್ವಾಮಿ ದೇವಾಲಯದ ಆವರಣದಲ್ಲಿ ಕಲಶಗಳನ್ನು ಪ್ರತಿಷ್ಠಾಪಿಸಿ ತಿಪಟೂರಿನ ಚಂದ್ರಶೇಖರಸ್ವಾಮಿ ಮುಂದಾಳತ್ವದಲ್ಲಿ ಗಣಪತಿ ಹೋಮ, ರುದ್ರಹೋಮ ನಡೆಸಲಾಯಿತು. ನಂತರ ಭದ್ರಾ ತೀರದಿಂದ ತಂದ ಅಗ್ರೋಕಗಳನ್ನು ಪೀಠದ ರೇಣುಕಾಚಾರ್ಯ, ಕ್ಷೇತ್ರನಾಥ ವೀರಭದ್ರಸ್ವಾಮಿ ಹಾೂ ಶಕ್ತಿಮಾತೆ ಚೌಡೇಶ್ವರಿಗೆ ಮಹಾ ಅಭಿಷೇಕ ನಡೆಸಲಾಯಿತು. ಇದಕ್ಕೂ ಮುನ್ನ ಧ್ವಜಾರೋಹಣ, ಹರಿದ್ರಾಲೇಪನ, ಕುಂಕುಮೋತ್ಸವ ಮಂಗಲ ಸಮಾರಂಭ ನಡೆಯಿತು.ಪೂಜಾ ಸಂದರ್ಭದಲ್ಲಿ ಯಡಿಯೂರು, ಯಸಳೂರು, ನುಗ್ಗೇಹಳ್ಳಿ, ಮಳಲಿ, ಹಲಗೂರು, ಹೂಲಿ ಸೇರಿಂದತೆ ವಿವಿಧ ಪೀಠಗಳ ಶಿವಾಚಾರ್ಯರು ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.