ಬುಧವಾರ, ಜೂನ್ 23, 2021
30 °C

ಯುವಕನ ಬಂಧನ: ಗೃಹ ಸಚಿವಾಲಯಕ್ಕೆ ನೋಟಿಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್‌): ಭಯೋತ್ಪಾದನೆ ಚಟುವಟಿಕೆ­ಯಲ್ಲಿ ತೊಡಗಿರುವ ಸುಳ್ಳು ಆರೋಪದ ಮೇಲೆ ಯುವಕ­ನನ್ನು ಬಂಧಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ), ದೆಹಲಿ ಪೊಲೀ­ಸರು ಮತ್ತು ಕೇಂದ್ರ ಗೃಹ ಸಚಿವಾಲಯಕ್ಕೆ ಸೋಮವಾರ ನೋಟಿಸ್‌ ನೀಡಿದೆ.ಹಳೇ ದೆಹಲಿ ಪ್ರದೇಶದಲ್ಲಿ 1998ರ ಫೆಬ್ರುವರಿಯಲ್ಲಿ ಮೊಹಮ್ಮದ್‌ ಅಮೀರ್‌ ಎಂಬ 18 ವರ್ಷದ ಯುವಕನನ್ನು ಭಯೋ­ತ್ಪಾದನಾ ಚಟುವಟಿಕೆಯಲ್ಲಿ ತೊಡಗಿರುವ ಆಪಾ­ದನೆ ಮೇಲೆ ದೆಹಲಿ ಪೊಲೀಸರು ಬಂಧಿಸಿದ್ದರು. 14 ವರ್ಷಗಳ ಕಾಲ ಸೆರೆಯಲ್ಲಿದ್ದ ಆತನನ್ನು 2012ರ ಜನವರಿಯಲ್ಲಿ ಬಿಡುಗಡೆ ಮಾಡಲಾಯಿತು.‘ಕಾನೂನುಬಾಹಿರವಾಗಿ ಬಂಧನದಲ್ಲಿ ಇರಿಸಿ ಯುವಕನ ಬದು­­ಕನ್ನು ನಾಶ ಮಾಡಲಾಯಿತು. ಬಡತನದಿಂದ ಆತನ ತಂದೆ ಸಾವ­ನ್ನಪ್ಪಿ­ದರು. ಅವರ ಕುಟುಂಬದ ಮೇಲೆ ಹೇರಿದ ಸಾಮಾ­ಜಿಕ ಬಹಿಷ್ಕಾರದ ಆಘಾತಕ್ಕೆ ಒಳಗಾದ ಆತನ ತಾಯಿ ಪಾರ್ಶ್ವಯು ಪೀಡಿತ­ರಾಗಿ, ಅವರ ಮಿದುಳು ನಿಷ್ಕ್ರಿ­ಯ­ಗೊಂಡಿದೆ. ಈ ಪ್ರಕರ­ಣವು ಪೊಲೀಸರ ಕಾರ್ಯ­ವೈಖರಿ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಮಾನವ ಹಕ್ಕು­ಗಳನ್ನು ಉಲ್ಲಂಘಿಸಲಾಗಿದೆ’ ಎಂದು ನೋಟಿಸ್‌ನಲ್ಲಿ ಉಲ್ಲೇಕಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.