ಯೂತ್ ವಾಲಿಬಾಲ್;ಕ್ವಾರ್ಟರ್‌ಫೈನಲ್‌ಗೆ ರಾಜ್ಯ ತಂಡ

7

ಯೂತ್ ವಾಲಿಬಾಲ್;ಕ್ವಾರ್ಟರ್‌ಫೈನಲ್‌ಗೆ ರಾಜ್ಯ ತಂಡ

Published:
Updated:ಮೊರದಾಬಾದ್:  ಕರ್ನಾಟಕ ತಂಡದವರು ಉತ್ತರ ಪ್ರದೇಶದ ಮೊರದಾಬಾದ್‌ನಲ್ಲಿ ನಡೆಯತ್ತಿರುವ ಹದಿಮೂರನೇ ರಾಷ್ಟ್ರೀಯ ಯೂತ್ ವಾಲಿಬಾಲ್ ಚಾಂಪಿಯನ್‌ಷಿಪ್‌ನ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದರು.ಲೀಗ್ ವ್ಯವಹಾರ ಮುಗಿಸಿದ ಕರ್ನಾಟಕ ತಂಡದವರು ತಮ್ಮ ಗುಂಪಿನಲ್ಲಿ ಅಗ್ರಸ್ಥಾನ ಪಡೆದರು.ಮಂಗಳವಾರ ನಡೆದ ಬಾಲಕರ ವಿಭಾಗದ ಲೀಗ್ ಮೂರನೇ ಪಂದ್ಯದಲ್ಲಿ ಕರ್ನಾಟಕ 25-6, 25-18, 25-17 (3-0) ರಲ್ಲಿ ಚತ್ತೀಸ್‌ಗಡ ಮೇಲೆ ಗೆಲುವು ಸಾಧಿಸಿತು.ಮೊದಲ ಸೆಟ್‌ನಲ್ಲಿ ಸುಲಭ ಗೆಲುವು ಪಡೆದ ಕರ್ನಾಟಕ ತಂಡ ಮುಂದಿನ ಎರಡು ಸೆಟ್‌ಗಳಲ್ಲಿ ಕೊಂಚ ಪ್ರತಿರೋಧ ಎದುರಿಸಬೇಕಾಯಿತು.ಬಾಲಕಿಯರ ವಿಭಾಗದ ಲೀಗ್ ನಾಲ್ಕನೇ ಪಂದ್ಯದಲ್ಲಿ ಕರ್ನಾಟಕ 25-8, 25-4, 25-2 ರಲ್ಲಿ ಜಾರ್ಖಂಡ್ ತಂಡವನ್ನು ಮಣಿಸಿತು. ಈ ವಿಭಾಗದಲ್ಲಿ ಕರ್ನಾಟಕದ ಆಟಗಾರ್ತಿಯರಿಗೆ ಪ್ರಬಲ ಪೈಪೋಟಿ ಎದುರಾಗಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry