ಸೋಮವಾರ, ಮಾರ್ಚ್ 1, 2021
29 °C

ಯೆಮನ್‌ನಲ್ಲಿ ಕಾರ್‌ ಬಾಂಬ್ ಸ್ಫೋಟ: 8 ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯೆಮನ್‌ನಲ್ಲಿ ಕಾರ್‌ ಬಾಂಬ್ ಸ್ಫೋಟ: 8 ಬಲಿ

ಸನಾ (ಐಎಎನ್‌ಎಸ್‌):  ದಕ್ಷಿಣ ಯೆಮನ್‌ನ ಆ್ಯಡೆನ್‌ನಲ್ಲಿ ಭಾನುವಾರ ನಡೆದ ಕಾರ್‌ ಬಾಂಬ್‌ ಸ್ಫೋಟದಲ್ಲಿ ಕನಿಷ್ಠ 8 ಮಂದಿ ಬಲಿಯಾಗಿದ್ದಾರೆ ಎಂದು ಕ್ಷಿನುವಾ ಸುದ್ದಿಸಂಸ್ಥೆ ವರದಿ ಮಾಡಿದೆ.ಸ್ಫೋಟಕಗಳನ್ನು ತುಂಬಿಕೊಂಡ  ಕಾರೊಂದನ್ನು ಆ್ಯಡೆನ್‌ನ ಭದ್ರತಾ ಮುಖ್ಯಸ್ಥ  ಬ್ರಿಗೇಡಿಯರ್‌ ಶಲಾಲ್‌ ಆಲಿ ಸಾಯಿದಾ ನಿವಾಸದ ಗೇಟಿನ ಬಳಿ ಸ್ಫೋಟಿಸಲಾಯಿತು. ಘಟನೆಯಲ್ಲಿ 8 ಮಂದಿ ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ  ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ. ಸ್ಫೋಟದ ಬೆನ್ನಲ್ಲೇ ಭದ್ರತಾ ಸಿಬ್ಬಂದಿ ಮತ್ತು ದಾಳಿಕೋರರ ನಡುವೆ ಗುಂಡಿನ ಚಕಮಕಿ ನಡೆಯಿತು ಎಂದೂ ವರದಿ ಹೇಳಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.