ಬುಧವಾರ, ಜೂನ್ 16, 2021
22 °C

ಯೋಗೇಂದ್ರ ನಾಮಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಡಗಾಂವ್‌ (ಐಎಎನ್‌ಎಸ್‌): ಆಮ್‌ ಆದ್ಮಿ ಪಕ್ಷದ ಮುಖಂಡ ಯೋಗೇಂದ್ರ ಯಾದವ್‌ ಗುಡ­ಗಾಂವ್‌  ಲೋಕಸಭಾ ಕ್ಷೇತ್ರದಿಂದ ಗುರುವಾರ ನಾಮಪತ್ರ ಸಲ್ಲಿಸಿದರು. ಹರಿಯಾಣದಲ್ಲಿ ಎರಡು ಎಕರೆ ಜಮೀನು,  ₨ ಎರಡು ಸಾವಿರ ನಗದು ಮಾತ್ರ ತನ್ನಲ್ಲಿ ಇದೆ ಎಂದು ಪ್ರಮಾಣ­ಪತ್ರದಲ್ಲಿ ಹೇಳಿದ್ದಾರೆ.ಆದರೆ ಅವರು ಹಣಕಾಸು ಸಂಸ್ಥೆ­ಗಳಲ್ಲಿ ₨13,87,505 ಠೇವಣಿ ಇರಿಸಿದ್ದಾರೆ. ತಮ್ಮ ಚರ ಮತ್ತು ಸ್ಥಿರ ಆಸ್ತಿಯ ಮೌಲ್ಯ ₨ 81,43,023 ಎಂದು ಹೇಳಿದ್ದಾರೆ.ಎರಡು ಎಕರೆ ಜಮೀನಿನ ಈಗಿನ ಮೌಲ್ಯ ಅಂದಾಜು ₨ 90 ಲಕ್ಷ ಎಂದು ಅವರು ತಿಳಿಸಿದ್ದಾರೆ.ಪಕ್ಷದ ಚಿಹ್ನೆಯಾದ ಪೊರಕೆಯನ್ನು ಹಿಡಿದ ಕಾರ್ಯಕರ್ತರೊಂದಿಗೆ ಮೆರವಣಿಗೆ­ಯಲ್ಲಿ ಸಾಗಿ ಯಾದವ್‌  ಅವರು ನಾಮಪತ್ರ ಸಲ್ಲಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.