ಗುರುವಾರ , ಏಪ್ರಿಲ್ 15, 2021
21 °C

ಯೋಜನೆ ಸದ್ಬಳಕೆ ಯಾವಾಗ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಯೋಜನೆಯ ಸಿಡಿಟಿಪಿ, ಪಾಲಿಟೆಕ್ನಿಕ್ ಮುಖಾಂತರ ಸಮುದಾಯ ಅಭಿವೃದ್ಧಿ ಯೋಜನೆಯಲ್ಲಿ ಉಚಿತ ತರಬೇತಿಗಳನ್ನು ನೀಡುತ್ತಿತ್ತು.ಇತ್ತೀಚಿನ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಿ ರಾಜ್ಯ ಸರ್ಕಾರಕ್ಕೆ ಇದನ್ನು ವಹಿಸಿದೆ. ಆದರೆ ಸಂಬಂಧಪಟ್ಟ ಇಲಾಖೆಯಾದ ತಾಂತ್ರಿಕ ಶಿಕ್ಷಣ ಇಲಾಖೆ ಇವತ್ತಿನವರೆಗೂ ಅನುದಾನ ನೀಡಿಲ್ಲ.   ಕರ್ನಾಟಕದ ಎಲ್ಲಾ ಪಾಲಿಟೆಕ್ನಿಕ್‌ಗಳು ಈ ಅನುದಾನದ ಸಮಸ್ಯೆ ಎದುರಿಸುತ್ತಿವೆ. ಜೊತೆಯಲ್ಲಿ ಇದನ್ನು ನಂಬಿ ಬಡ ವಿದ್ಯಾರ್ಥಿಗಳು ಪಾಲಿಟೆಕ್ನಿಕ್‌ಗಳಿಗೆ ಭೇಟಿ ಮಾಡಿ ಕೇಳಿದರೆ `ನಮಗೆ ಅನುದಾನ ಬಂದಿಲ್ಲ ಸಂಬಳ ನೀಡಿಲ್ಲ ನಮಗೆ ಅನುದಾನ ಬಂದ ತಕ್ಷಣ ಇಲ್ಲೂ ಉಚಿತ ತರಬೇತಿ ಪ್ರಾರಂಭ ಮಾಡುತ್ತೇವೆ~ ಎಂದು ಹೇಳಿಕೆ ನೀಡಿದ್ದಾರೆ. ಈ ಯೋಜನೆಗೆ ಸಂಬಂಧಪಟ್ಟ ರಾಜ್ಯದ ಮುಖ್ಯಮಂತ್ರಿ, ಹಣಕಾಸು ಇಲಾಖೆ ಅಧಿಕಾರಿಗಳು, ತಾಂತ್ರಿಕ ಶಿಕ್ಷಣ ಇಲಾಖೆಯವರು ಗಮನಹರಿಸಿ ಅನುದಾನ ಬಿಡುಗಡೆ ಮಾಡಿದರೆ ಬಡ ವಿದ್ಯಾರ್ಥಿಗಳು, ನಿರುದ್ಯೋಗಿ, ಮಹಿಳೆಯರಿಗೆಅನುಕೂಲವಾಗುತ್ತದೆ.ಈ ಯೋಜನೆಯಲ್ಲಿ ಟೈಲರಿಂಗ್ ತರಬೇತಿ, ಬ್ಯೂಟಿಷಿಯನ್ ತರಬೇತಿ, ಮೊಬೈಲ್ ತರಬೇತಿ, ಕಂಪ್ಯೂಟರ್ ರಿಪೇರಿ, ಗೃಹೋಪಯೋಗಿ ರಿಪೇರಿ ತರಬೇತಿ ಪಡೆದು ಸ್ವಉದ್ಯೋಗ ಮಾಡುತ್ತಿದ್ದಾರೆ. ಇಂತಹ ಯೋಜನೆ ಈಗ ಕುಂಠಿತಗೊಂಡಿದೆ.ಸಂಬಂಧಪಟ್ಟ ಇಲಾಖೆ ಅನುದಾನ ಬಿಡುಗಡೆ ಮಾಡಿ ಎಂದು ಎಲ್ಲಾ ಮಹಿಳೆಯರ ಪರವಾಗಿ, ನಿರುದ್ಯೋಗಿ ಯುವಕ/ ಯುವತಿಯರ ಪರವಾಗಿ ಪ್ರಾರ್ಥಿಸಿಕೊಳ್ಳುತ್ತೇವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.