‘ನಮ್ಮ ಮನೆಮುಂದೆ ಕಸ ಇಲ್ಲದಿದ್ದರೆ ಸಾಕು. ಬೇರೆಯವರ ಮನೆಮುಂದೆ ಹೇಗಾದರೂ ಇರಲಿ’ ಎನ್ನುವವರೇ ನಮ್ಮ ನಡುವೆ ಹೆಚ್ಚು. ಬೇರೆಯವರ ಮನೆಯಷ್ಟೇ ಅಲ್ಲದೆ ಇಡೀ ಬಡಾವಣೆ ಸ್ವಚ್ಛವಾಗಿರಲಿ ಎಂದು ಕೆಲಸ ಮಾಡುತ್ತಿದ್ದಾರೆ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ನಿವೃತ್ತ ಯೋಧ ಅಶೋಕ್ ಪ್ಯಾಟಿ.ಇವರು ಕೆಲಸದಲ್ಲಷ್ಟೆ ಶಿಸ್ತಿನ ಸಿಪಾಯಿಯಲ್ಲ. ತಾವು ವಾಸಿಸುವ ಇಡೀ ಪ್ರದೇಶ ನಿರ್ಮಲ ವಾತಾವರಣದಿಂದ ಕೂಡಿರಬೇಕು ಎಂದು ಬಯಸುತ್ತಾರೆ.

ಅದಕ್ಕಾಗಿ ತಮ್ಮ ವೈಯಕ್ತಿಕ ಕೆಲಸಗಳನ್ನು ಮರೆತು, ಪ್ರತಿದಿನ ಬೆಳಿಗ್ಗೆ 7.30 ಗಂಟೆಗೆ ಬೈಕ್ ಏರಿ ಹೊರಡುತ್ತಾರೆ. ಬಿಬಿಎಂಪಿ ಕಸದ ವಾಹನ ಹಿಂದೆ, ಇವರು ಅದರ ಮುಂದೆ. ವಿಶಲ್ ಊದುತ್ತಾ ಅಶೋಕ್ ಮನೆಮನೆ ಮುಂದೆ ಸಾಗುತ್ತಾರೆ. ‘ಬೇಗ ಬನ್ನಿ... ಕಸದ ಗಾಡಿ ಬಂದಿದೆ ಬೇಗಬನ್ನಿ’ ಎಂದು ಏರುಧ್ವನಿಯಲ್ಲಿ ಕೂಗುತ್ತಿದ್ದಂತೆ ನಾಲ್ಕು ವರ್ಷದ ಮಕ್ಕಳಿಂದ ಹಿಡಿದು 65 ವರ್ಷದ ವೃದ್ಧರೂ ಕಸವನ್ನು ತಂದು ಬಿಬಿಎಂಪಿ ಕಸದ ವಾಹನಕ್ಕೆ ಹಾಕಿ ಹೋಗುತ್ತಾರೆ.

ಯಲಹಂಕದ ವಾರ್ಡ್ ಸಂಖ್ಯೆ–2ರ ವ್ಯಾಪ್ತಿಯ ಹಾರೋಹಳ್ಳಿ ಗ್ರಾಮದ ಮನೆಗಳ ಬಳಿ ಹಾಗೂ ರಸ್ತೆಗಳಲ್ಲಿ ಈಗ ಕಸ ಕಾಣುತ್ತಿಲ್ಲ. ಮೊದಲಿಗೆ ಅಶೋಕ್ ಮನವಿಗೆ ಜನ ಅಷ್ಟಾಗಿ ಸ್ಪಂದಿಸಲಿಲ್ಲ. ಈಗ ತ್ಯಾಜ್ಯ ವಿಲೇವಾರಿ ಸಮಸ್ಯೆ ಬಗ್ಗೆ ಅರಿವಾಗಿ, ಅಶೋಕ್ ವಿಶಲ್ ಊದುವ ಮೊದಲೇ ಕಸದಬುಟ್ಟಿ ಹಿಡಿದುಕೊಂಡು ವಾಹನಕ್ಕಾಗಿ ಕಾಯುತ್ತಾರೆ.

‘ಹಾರೋಹಳ್ಳಿ ಗ್ರಾಮದಲ್ಲಿ ಸುಮಾರು 200 ಮನೆಗಳಿವೆ. ನಾನು ಗ್ರಾಮಕ್ಕೆ ಬಂದಾಗ ಮೊದಲು ನನ್ನ ಕಣ್ಣಿಗೆ ಬಿದ್ದ ದೃಶ್ಯವೆಂದರೆ ರಸ್ತೆಯ ಇಕ್ಕೆಲಗಳಲ್ಲಿ ಹಲವು ತಿಂಗಳುಗಳಿಂದ ಬಿದ್ದಿರುವ ಕಸದ ರಾಶಿಯ ದುರ್ನಾತ, ನೆರೆಯ ಮನೆಯವರು ಕಟ್ಟಿ ಬಿಸಾಡಿರುವ ಪ್ಲಾಸ್ಟಿಕ್ ಕವರ್ಗಳು ಹಾಗೂ ತ್ಯಾಜ್ಯ ವಸ್ತುಗಳ ಹುಡುಕಾಟಕ್ಕೆ ಬೀದಿನಾಯಿಗಳ ಕಿತ್ತಾಟ. ಇದರ ನಡುವೆ ಸಾರ್ವಜನಿಕರ ಓಡಾಟ. ಅನೇಕ ದಿನಗಳಿಂದ ಈ ದೃಶ್ಯಗಳನ್ನು ನೋಡಿ ನೋಡಿ, ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂಬ ಚಿಂತನೆ ನಡೆಸಿದೆ’ ಎಂದು ಅಶೋಕ್ ಪ್ಯಾಟಿ ಮಾತು ಆರಂಭಿಸಿದರು.

ಮೊದಲಿಗೆ ಬಿಬಿಎಂಪಿ ಜಂಟಿ ಆಯುಕ್ತರಿಗೆ ಕರೆಮಾಡಿ, ಸಮಸ್ಯೆಯ ಬಗ್ಗೆ ದೂರು ಸಲ್ಲಿಸಿದೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಅವರು, ಮರುದಿನವೇ ಬಿವಿಜಿ ತಂಡದೊಂದಿಗೆ ಒಂದು ಕಸದ ವಾಹನವನ್ನು ನಮ್ಮ ಗ್ರಾಮಕ್ಕೆ ಕಳುಹಿಸಿಕೊಟ್ಟರು. ಅವರು ಅನೇಕ ದಿನಗಳಿಂದ ಬಿದ್ದಿದ್ದ ಕಸದ ರಾಶಿಯನ್ನು ತೆಗೆದುಕೊಂಡು ಹೋದರಾದರೂ ಎರಡು ಮೂರು ದಿನಗಳ ನಂತರ ಮತ್ತೆ ಕಸದ ರಾಶಿ ತುಂಬಲಾರಂಭಿಸಿತು. ನಂತರ ಸ್ವಚ್ಛತೆಗಾಗಿ ಜನರ ಮನಪರಿವರ್ತನೆ ಮಾಡಲು ಮನೆಮನೆ ಅಭಿಯಾನ ಕೈಗೊಂಡೆ.

‘ನಮ್ಮ ಊರಿನ ಕಿಶೋರರನ್ನು ಕರೆದುಕೊಂಡು ಮೊದಲು ನಮ್ಮ ಓಣಿಯಲ್ಲಿರುವ ಸುಮಾರು 40 ಮನೆಗಳಿಗೆ ಭೇಟಿ ನೀಡಿ, ಅತ್ಯಂತ ನಮ್ರತೆಯಿಂದ ಅಲ್ಲಿನ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡೆ. ದಯಮಾಡಿ ಇನ್ನುಮುಂದೆ ಕಸವನ್ನು ರಸ್ತೆಬದಿಯಲ್ಲಿ ಸುರಿಯಬೇಡಿ. ಬಿಬಿಎಂಪಿಯಿಂದ ಕಸದ ವಾಹನ ನಿಮ್ಮ ಮನೆಬಾಗಿಲಿಗೆ ಬರುವ ವ್ಯವಸ್ಥೆಯಾಗಿದೆ ಎಂದು ತಿಳಿಸಿದೆ. ಅಂದಿನಿಂದ ಜನರು ಸಕಾರಾತ್ಮಕವಾಗಿ ಸ್ಪಂದಿಸಿದರು’ ಎಂದು ಅಶೋಕ್ ಪ್ಯಾಟಿ ವಿವರಿಸಿದರು.

‘ನಮ್ಮ ಓಣಿ ಮಾತ್ರ ಸ್ವಚ್ಛವಾಗಿದ್ದರೆ ಸಾಕೆ? ಇಡೀ ಗ್ರಾಮದ ಎಲ್ಲಾ ಬೀದಿಗಳು ಕಸಮುಕ್ತವಾಗಬೇಕೆಂದು ಚಿಂತನೆ ಮಾಡಿ, ಮತ್ತೆ ನಾನು ಕಿಶೋರ್ ಅವರನ್ನು ಕರೆದುಕೊಂಡು, ಗ್ರಾಮದ ಉಳಿದ ಎಲ್ಲಾ ಮನೆಗಳಿಗೂ ತೆರಳಿ, ಜಾಗೃತಿ ಮೂಡಿಸಲಾರಂಭಿಸಿದೆ. ಇಡೀ ಗ್ರಾಮದ ಜನರು ನನ್ನ ಕಾರ್ಯಕ್ಕೆ ಸಹಕಾರ ನೀಡಿದರು. ಮೊದಲು 15 ನಿಮಿಷಗಳಲ್ಲಿ ಮುಗಿಯುತ್ತಿದ್ದ ಸ್ವಚ್ಛತಾ ಕಾರ್ಯ, ನಂತರದ ದಿನಗಳಲ್ಲಿ ಇಡೀ ಗ್ರಾಮಕ್ಕೆ ವ್ಯಾಪಿಸಿ, ಬೆಳಗ್ಗೆ 7.30ರಿಂದ 8.45ರವರೆಗೆ ನಡೆಯುತ್ತಿದೆ’ ಎಂದರು.

ಜನ ಜಾಗೃತಿ ಮೂಡಿಸಿದ ನಂತರ ಆದ ಬೆಳವಣಿಗೆಯ ಕುರಿತು ಅವರು ಹೇಳುವುದು ಇಷ್ಟು: ‘ಕಳೆದ ಎರಡು ತಿಂಗಳಿಂದ ಸ್ವಚ್ಛತಾ ಕಾರ್ಯವು ನಿರಂತರವಾಗಿ ನಡೆಯುತ್ತಿದ್ದು, ಸದ್ಯಕ್ಕೆ ಜನರು ಒಣಕಸ–ಹಸಿಕಸ ಎಂಬ ವಿಂಗಡಣೆಯನ್ನೇನೂ ಮಾಡುತ್ತಿಲ್ಲ. ಜನರಲ್ಲಿ ಮೊದಲು ಸ್ವಚ್ಛತಾ ಪ್ರಜ್ಞೆ ಸಂಪೂರ್ಣವಾಗಿ ಮೂಡಬೇಕು. ನಂತರ ಕಸ ವಿಂಗಡಿಸುವ ಕುರಿತು ಜಾಗೃತಿ ಮೂಡಿಸುವ ಯೋಚನೆಯಿದೆ. ಎಲ್ಲಿಯವರೆಗೆ ಜನರು ಸ್ವ–ಇಚ್ಛೆಯಿಂದ ತಾವಾಗಿಯೇ ವಾಹನಕ್ಕೆ ಕಸ ಹಾಕುತ್ತಾರೆಯೋ, ನಮ್ಮ ಗ್ರಾಮ ಸಂಪೂರ್ಣವಾಗಿ ಕಸಮುಕ್ತ ಗ್ರಾಮವಾಗುತ್ತದೆಯೋ ಆಗ ಪಕ್ಕದ ಗ್ರಾಮಕ್ಕೆ ನನ್ನ ಸೇವೆ ವರ್ಗಾವಣೆಯಾಗುತ್ತದೆ.

‘ಮೊದಲು ಮನೆಯಲ್ಲಿ ಸಂಗ್ರಹವಾಗುತ್ತಿದ್ದ ಕಸವನ್ನು ಎಲ್ಲಿ ವಿಲೇವಾರಿ ಮಾಡಬೇಕೆಂಬುದೇ ದೊಡ್ಡ ಚಿಂತೆಯಾಗಿತ್ತು. ಆದರೆ ಅಶೋಕ್ ಪ್ಯಾಟಿಯವರು ಕಸವನ್ನು ಗಾಡಿಗೆ ಹಾಕುವ ಬಗ್ಗೆ ಜಾಗೃತಿ ಮೂಡಿಸಿದ ನಂತರ ಮನೆ ಮುಂದೆಯೇ ಕಸದ ಗಾಡಿ ಬಂದು ಕಸವನ್ನು ತೆಗೆದುಕೊಂಡು ಹೋಗುತ್ತಿರುವುದರಿಂದ ತುಂಬಾ ಅನುಕೂಲವಾಗಿದೆ. ಇದರಿಂದ ಮನೆಯ ಸುತ್ತಮುತ್ತಲಿನ ವಾತಾವರಣ ಸುಂದರವಾಗಿರುವುದರ ಜೊತೆಗೆ ಸೊಳ್ಳೆಗಳ ಕಾಟವೂ ತಪ್ಪಿದೆ’ ಎಂದು ಶಿಕ್ಷಕ ಶೇಷಾದ್ರಿ ಹೇಳಿದರು.

ಮೊದಲೆಲ್ಲ ಜನರು ರಸ್ತೆ ಮತ್ತು ಮನೆಗಳ ಸುತ್ತಮುತ್ತ ಕಸ ಹಾಕುತ್ತಿದ್ದರು. ಇದರಿಂದ ಪ್ಲಾಸ್ಟಿಕ್ ಕವರ್ಗಳು ಎಲ್ಲೆಂದರಲ್ಲಿ ಹರಡುತ್ತಿದ್ದವು. ಅಶೋಕ್ ಅವರು ಗಾಡಿಗೆ ಕಸ ಹಾಕಬೇಕೆಂದು ಜಾಗೃತಿ ಮೂಡಿಸಿದ ನಂತರ, ಈಗ ಎಲ್ಲರೂ ತಪ್ಪದೆ ಕಸವನ್ನು ಗಾಡಿಗೆ ಹಾಕುತ್ತಿದ್ದಾರೆ. ಇದರಿಂದ ರಸ್ತೆಗಳು ಹಾಗೂ ಮನೆಯ ಸುತ್ತಲಿನ ವಾತಾವರಣ ಸ್ವಚ್ಛವಾಗಿದೆ. ಪ್ರತಿ ಗ್ರಾಮದಲ್ಲಿ ಇಂಥವರೊಬ್ಬರಿದ್ದರೆ ಎಲ್ಲ ಗ್ರಾಮಗಳು ಸ್ವಚ್ಛ ಗ್ರಾಮಗಳಾಗುತ್ತವೆ ಎಂದು ಸ್ಥಳೀಯ ನಿವಾಸಿ ಜಯಮ್ಮ ಸಂತಸ ವ್ಯಕ್ತಪಡಿಸಿದರು.

ಬೆಂಗಳೂರು ನಗರದಲ್ಲಿ ತ್ಯಾಜ್ಯ ವಿಲೇವಾರಿಗೆ ಜಾಗವಿಲ್ಲದೆ ಸಮಸ್ಯೆ ಇಷ್ಟೊಂದು ಬಿಗಡಾಯಿಸಿ, ಎಷ್ಟೋ ಬಡಾವಣೆಗಳಲ್ಲಿ ತ್ಯಾಜ್ಯ ಸರಿಯಾಗಿ ವಿಲೇವಾರಿಯಾಗದೆ ಕೊಳೆತು ನಾರುತ್ತಿದೆ. ಆದರೆ ಹಾರೋಹಳ್ಳಿಯಲ್ಲಿ ಮಾತ್ರ ಆ ಸಮಸ್ಯೆ ಇಲ್ಲ. ಅಶೋಕ್ ಪ್ಯಾಟಿ ಜನರಲ್ಲಿ ಜಾಗೃತಿ ಮೂಡಿಸಿ, ಸಮಯಕ್ಕೆ ಸರಿಯಾಗಿ ಕಸ ವಿಲೇವಾರಿಯಾಗುವಂತೆ ನೋಡಿಕೊಳ್ಳುವ ಮೂಲಕ ಗ್ರಾಮವನ್ನು ಸುಂದರವಾಗಿಟ್ಟುಕೊಳ್ಳಲು ಕಾರಣರಾಗಿದ್ದಾರೆ. ಅಶೋಕ್ ಪ್ಯಾಟಿಯವರ ದೂರವಾಣಿ ಸಂಖ್ಯೆ–9480808033.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.