ಶುಕ್ರವಾರ, ಮೇ 14, 2021
31 °C

ಯೋಧನ ಸ್ಮಾರಕ ನವೀಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತ ಹುತಾತ್ಮ ಯೋಧ ಅಬ್ದುಲ್ ಹಮೀದ್ ಅವರ ಸ್ಮಾರಕವನ್ನು ಫ್ಲಾಗ್ಸ್ ಆಫ್ ಹಾನರ್ ಪ್ರತಿಷ್ಠಾನವು ನವೀಕರಿಸಿದೆ.ಯೋಧನ ಹುಟ್ಟೂರಾದ ಉತ್ತರ ಪ್ರದೇಶದ ಘಾಜಿಪುರ್ ಜಿಲ್ಲೆಯ ದಾಮುಪುರದಲ್ಲಿದ್ದ ಸ್ಮಾರಕವು ಸಂಪೂರ್ಣವಾಗಿ ಹಾಳಾಗಿತ್ತು.ಹಮೀದ್ ಅವರ 46ನೇ ಪುಣ್ಯಸ್ಮರಣೆಯ ದಿನವಾದ ಸೆಪ್ಟೆಂಬರ್ 10ರೊಳಗೆ ಪುನರ್ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸುವ ಭರವಸೆಯನ್ನು ಪ್ರತಿಷ್ಠಾನ ನೀಡಿತ್ತು.ಅದರಂತೆ ಹಮೀದ್ ಅವರ ಹೊಸ ಪ್ರತಿಮೆ, ನವೀಕೃತ ಸ್ಮಾರಕ ಗೋಪುರ, ಆವರಣದ ಗೋಡೆಗಳ ದುರಸ್ತಿ, ಒಂದು ಎಕರೆ ವಿಸ್ತೀರ್ಣದ ಉದ್ಯಾನದ ನವೀಕರಣ ಕಾರ್ಯವನ್ನು ಸಂಸ್ಥೆ ಪೂರ್ಣಗೊಳಿಸಿದೆ.

ಇದಕ್ಕೆ ಯೋಧರ ಕುಟುಂಬ ಪ್ರತಿಷ್ಠಾನಕ್ಕೆ ವಂದನೆ ಸಲ್ಲಿಸಿದೆ.ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಷ್ಠಾನದ ಸ್ಥಾಪಕರಾದ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, `ದೇಶದ ಹೆಮ್ಮೆಯ ಪುತ್ರರಲ್ಲಿ ಒಬ್ಬರಾದ ಹಮೀದ್ ಅವರ ಸ್ಮಾರಕವನ್ನು ನವೀಕರಿಸಲು ನೆರವಾಗಿದ್ದಕ್ಕೆ ಹೆಮ್ಮೆ ಎನಿಸಿದೆ. ಈ ಸ್ಮಾರಕ ಯುವ ಜನತೆಗೆ ನಾಯಕತ್ವ ಹಾಗೂ ಸಾಹಸ ಮನೋಭಾವ ಬೆಳೆಸಿಕೊಳ್ಳಲು ಪ್ರೇರಣೆ ನೀಡಲಿ ಎಂಬುದು ನನ್ನ ಆಶಯ~ ಎಂದರು.`ಸ್ಮಾರಕದ ಗೋಡೆಗಳು ಬಿರುಕು ಬಿಟ್ಟಿದ್ದರೆ, ಪ್ರತಿಮೆ ಮಸುಕಾಗಿತ್ತು. ಪರಿಣಾಮವಾಗಿ ಇಡೀ ಸ್ಮಾರಕ ಕಳೆಗುಂದಿತ್ತು.ಆ ಕಾರಣಕ್ಕೆ ಸ್ಮಾರಕವನ್ನು ನವೀಕರಿಸಲು ನಿರ್ಧರಿಸಲಾಯಿತು. ಪುಣ್ಯತಿಥಿ ಸಂದರ್ಭದ ಹೊತ್ತಿಗೆ ನವೀಕರಣ ಕಾರ್ಯ ಪೂರ್ಣಗೊಂಡಿರುವುದು ತೃಪ್ತಿ ತಂದಿದೆ~ ಎಂದು ಹೇಳಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.