ಸೋಮವಾರ, ಮೇ 10, 2021
28 °C

ರಂಗ್ ತರಂಗ್ ನೃತ್ಯಾರ್ಪಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂತರರಾಷ್ಟ್ರೀಯ ನೃತ್ಯ ದಿನವನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ವಿಶಿಷ್ಟವಾಗಿ ಆಚರಿಸಲು ಯೋಜಿಸಿದೆ. ಏಪ್ರಿಲ್ 25ರಿಂದ 3 ದಿನಗಳ ಕಾಲ ಅಕಾಡೆಮಿ ಆಫ್ ಮ್ಯೂಸಿಕ್ ಸಹಭಾಗಿತ್ವದಲ್ಲಿ ಚೌಡಯ್ಯ ಸ್ಮಾರಕ ಭವನದಲ್ಲಿ `ರಂಗ್ ತರಂಗ್~ ನೃತ್ಯ ಸಂಯೋಜನೆ ಉತ್ಸವ ನಡೆಯಲಿದೆ.ಭರತನಾಟ್ಯವಲ್ಲದೆ ಒಡಿಸ್ಸಿ, ಮಣಿಪುರಿ, ಕೂಚಿಪುಡಿ, ಕಥಕ್, ಕಥಕ್ಕಳಿ, ಮೋಹಿನಿಆಟ್ಟಂ, ಸಮಕಾಲೀನ ನೃತ್ಯ ಹೀಗೆ ಭಾರತದ ವೈವಿಧ್ಯಮಯ ನೃತ್ಯ ಪ್ರಕಾರಗಳ ವರ್ಣರಂಜಿತ ಪ್ರದರ್ಶನ ಏರ್ಪಾಡಾಗಿದೆ.`ರಂಗ್ ತರಂಗ್~ನಲ್ಲಿ ರಂಜನೆಯ ಜೊತೆ ಚಿಂತನೆಯನ್ನೂ ಒದಗಿಸಲಿದೆ. ಬೆಳಗಿನ ವೇಳೆ ಕಾರ್ಯಾಗಾರವನ್ನೂ ಏರ್ಪಡಿಸಿ, ಕಿರಿಯರ ಚಿಂತನೆಗೆ ಆಹಾರ ಒದಗಿಸಲಿದೆ. ಭಿನ್ನ ಶೈಲಿಗಳ ಹೆಸರಾಂತ ಕಲಾವಿದರು ಪ್ರಾತ್ಯಕ್ಷಿಕೆಗಳಲ್ಲಿ ತಮ್ಮತಮ್ಮ ಪ್ರಕಾರದ ನೃತ್ಯಕಲೆಯ ವೈಶಿಷ್ಟ್ಯವನ್ನು ನರ್ತಿಸಿ ವಿಷದೀಕರಿಸಲಿದ್ದಾರೆ. ಕಿರಿಯರು ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಿ, ಜ್ಞಾನಾರ್ಜನೆ ಮಾಡಿಕೊಳ್ಳುತ್ತಾ, ತಮ್ಮ ನೃತ್ಯವನ್ನು ಪರಿಷ್ಕಾರಗೊಳಿಸಿಕೊಳ್ಳಬಹುದು.ಬುಧವಾರ (ಏ.25) ಬೆಳ್ಳಿಗ್ಗೆ 10.30ಕ್ಕೆ ಕಥಕ್ ಕಾರ್ಯಾಗಾರ. 11.40ಕ್ಕೆ ಕೂಚಿಪುಡಿ. ಮಧ್ಯಾಹ್ನ 12.10ಕ್ಕೆ ಒಡಿಸ್ಸಿ. ಸಂಜೆ 6.45ಕ್ಕೆ ನಾಟ್ಯ ಇನ್‌ಸ್ಟಿಟ್ಯೂಟ್‌ನವರಿಂದ ಕಥಕ್ ನತ್ಯ. 7.40ಕ್ಕೆ ಅರುಣಾ ಮೊಹಂತಿ ಅವರಿಂದ ಒಡಿಸ್ಸಿ; 8.50ರಿಂದ ಬೆಳಗಾವಿಯ ರೇಖಾ ಹೆಗ್ಗಡೆ ಅವರಿಂದ ಭರತನಾಟ್ಯ. ಸಂಜೆ 6.15ಕ್ಕೆ ಸಚಿವ ಗೋವಿಂದ ಎಂ. ಕಾರಜೋಳ ಅವರಿಂದ ಉದ್ಘಾಟನೆ.ಅತಿಥಿಗಳು: ಬಸವರಾಜು, ಅಧ್ಯಕ್ಷತೆ: ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ವೈಜಯಂತಿ ಕಾಶಿ  ಗುರುವಾರ (ಏ.26) ಬೆಳ್ಳಿಗ್ಗೆ 10.30ರಿಂದ ಕೂಚಿಪುಡಿ ಕಾರ್ಯಾಗಾರ.  11.40ಕ್ಕೆ ಒಡಿಸ್ಸಿ. ಮಧ್ಯಾಹ್ನ 12.10ಕ್ಕೆ ಮೋಹಿನಿ ಆಟ್ಟಂ.

 

ಸಂಜೆ 6.15ಕ್ಕೆ ಹೈದರಾಬಾದ್‌ನ ಪಿ. ರಾಮಲಿಂಗ ಶಾಸ್ತ್ರಿ ಅವರಿಂದ ಕೂಚಿಪುಡಿ. ರಾತ್ರಿ 7.25ರಿಂದ ಕೇರಳದ ಶ್ಯಾಮಲ ಸುರೇಂದ್ರನ್ ಗುಪ್ತ ತಂಡದವರಿಂದ ಮೋಹಿನಿ ಆಟ್ಟಂ. 8.35ರಿಂದ ಪ್ರೊಬಲ್ ಗುಪ್ತ ತಂಡದವರಿಂದ ಕಥಕ್ಕಳಿ, ಒಡಿಸ್ಸಿ ಮತ್ತು ಯಕ್ಷಗಾನ.ಶುಕ್ರವಾರ (ಏ.27) ಬೆಳಿಗ್ಗೆ 10.30ರಿಂದ ಮಣಿಪುರಿ ನೃತ್ಯಕ್ಕೆ ಸಂಬಂಧಿಸಿದ ಕಾರ್ಯಾಗಾರ. ನಂತರ ಭರತನಾಟ್ಯ. ಮಧ್ಯಾಹ್ನ 12.10ಕ್ಕೆ ಸಮಕಾಲೀನ ನೃತ್ಯ. ಸಂಜೆ 6-30ಕ್ಕೆ ಕೋಲ್ಕತ್ತಾದ ಪ್ರೀತಿ ಪಟೇಲ್‌ರಿಂದ ಮಣಿಪುರಿ ಕಾರ್ಯಕ್ರಮ. ರಾತ್ರಿ 7-25ಕ್ಕೆ ಬೆಂಗಳೂರಿನ ವೆಂಕಟೇಶ ನಾಟ್ಯ ಮಂದಿರದವರಿಂದ ಭರತನಾಟ್ಯ. ನಂತರ ಬೆಂಗಳೂರಿನ ಅಟ್ಟಕಲಾರಿ ತಂಡದಿಂದ ಸಮಕಾಲೀನ ನತ್ಯ. ಸ್ಥಳ: ಚೌಡಯ್ಯ ಸ್ಮಾರಕ ಭವನ, ವೈಯಾಲಿಕಾವಲ್. ಪ್ರವೇಶ ಉಚಿತ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.