ಗುರುವಾರ , ಫೆಬ್ರವರಿ 25, 2021
29 °C

ರಜನಿಕಾಂತ್‌ ಟ್ವಿಟರ್‌ ಖಾತೆ ‘ಹ್ಯಾಕ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಜನಿಕಾಂತ್‌ ಟ್ವಿಟರ್‌ ಖಾತೆ ‘ಹ್ಯಾಕ್‌’

ಚೆನ್ನೈ (ಪಿಟಿಐ):  ಖ್ಯಾತ ತಮಿಳು ನಟ ರಜನಿಕಾಂತ್‌ ಅವರ ಟ್ವಿಟರ್‌ ಖಾತೆಯನ್ನು ಹ್ಯಾಕ್‌ ಮಾಡಲಾಗಿತ್ತು. ಆದರೆ, ನಂತರ ಸರಿಪಡಿಸಲಾಗಿದೆ ಎಂದು ರಜನಿಕಾಂತ್‌ ಪುತ್ರಿ ಐಶ್ವರ್ಯ ಹೇಳಿದ್ದಾರೆ.‘ಅಪ್ಪನ ಖಾತೆಯನ್ನು ಹ್ಯಾಕ್‌ ಮಾಡಲಾಗಿತ್ತು. ಈಗ ಅದನ್ನು ಸರಿಪಡಿಸಲಾಗಿದೆ. ಎಲ್ಲರಿಗೂ ಧನ್ಯವಾದಗಳು’ ಎಂದು ಐಶ್ವರ್ಯ ಟ್ವೀಟ್‌ ಮಾಡಿದ್ದಾರೆ.  ಐಶ್ವರ್ಯ ಅವರ ಟ್ವೀಟ್‌ ಅನ್ನೇ ಅವರ ಸಹೋದರಿ ಸೌಂದರ್ಯ ರಜನಿಕಾಂತ್‌ ಅವರು ಮರು ಟ್ವೀಟ್‌ ಮಾಡಿದ್ದಾರೆ.‘ಕಬಾಲಿ’ ಚಲನಚಿತ್ರದ ನಟ, ರಜನಿಕಾಂತ್‌ ಅವರ ಟ್ವಿಟರ್‌ ಖಾತೆಯನ್ನು ಮಂಗಳವಾರ ಹ್ಯಾಕ್‌ ಮಾಡಲಾಗಿತ್ತು. ಈ ಕುರಿತು ಪೊಲೀಸರಿಗೆ ಯಾವುದೇ ದೂರು ನೀಡಿರಲಿಲ್ಲ ಎಂದು ನಟನ ನಿಕಟವರ್ತಿಗಳು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.