ಮಂಗಳವಾರ, ಜನವರಿ 21, 2020
29 °C

ರಣಜಿ: ಕುಸಿತ ಕಂಡ ಮುಂಬೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂದೋರ್ (ಪಿಟಿಐ/ಐಎಎನ್‌ಎಸ್): ಮುಂಬೈ ತಂಡ ಸೋಮವಾರ ಇಲ್ಲಿ ಆರಂಭವಾದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಮಧ್ಯಪ್ರದೇಶದ ವಿರುದ್ಧ ಕುಸಿತ ಕಂಡಿದೆ.ಮಧ್ಯಪ್ರದೇಶ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ 192 ರನ್‌ಗಳಿಗೆ ನಿಯಂತ್ರಿಸಿದ ಮುಂಬೈ ಬಳಿಕ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದು, ಮೊದಲ ದಿನದಾಟದ ಅಂತ್ಯಕ್ಕೆ 5 ವಿಕೆಟ್‌ಗೆ 70 ರನ್ ಮಾತ್ರ ಗಳಿಸಿತು.ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ತಮಿಳುನಾಡು ವಿರುದ್ಧದ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ಮಹಾರಾಷ್ಟ್ರ 84 ಓವರ್‌ಗಳಲ್ಲಿ 4 ವಿಕೆಟ್‌ಗೆ 204 ರನ್ ಪೇರಿಸಿದೆ.ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಇನ್ನೊಂದು ಕ್ವಾರ್ಟರ್ ಫೈನಲ್ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ರಾಜಸ್ತಾನ ಆತಿಥೇಯ ಹೈದರಾಬಾದ್ ವಿರುದ್ಧ 5    ವಿಕೆಟ್‌ಗೆ 220 ರನ್ ಕಲೆಹಾಕಿದೆ.ಸಂಕ್ಷಿಪ್ತ ಸ್ಕೋರ್: ಮಧ್ಯಪ್ರದೇಶ: ಮೊದಲ ಇನಿಂಗ್ಸ್ 55.1 ಓವರ್‌ಗಳಲ್ಲಿ 192 (ಉದಿತ್ ಬಿರ್ಲಾ 63, ಮೋನಿಶ್ 33, ಧವಳ್ ಕುಲಕರ್ಣಿ 74ಕ್ಕೆ 5, ಕ್ಷೇಮಲ್ ವೆಂಗಾವ್ಕರ್ 29ಕ್ಕೆ 3). ಮುಂಬೈ: ಮೊದಲ ಇನಿಂಗ್ಸ್ 33 ಓವರ್‌ಗಳಲ್ಲಿ 5 ವಿಕೆಟ್‌ಗೆ 70 (ಕೌಸ್ತುಭ್ ಪವಾರ್ 30, ಮುರ್ತಜಾ ಅಲಿ 2ಕ್ಕೆ2, ಸುಧೀಂದ್ರ 14ಕ್ಕೆ2).

ಮಹಾರಾಷ್ಟ್ರ: 84 ಓವರ್‌ಗಳಲ್ಲಿ 4 ವಿಕೆಟ್‌ಗೆ 204 (ಹರ್ಷದ್ ಖಡಿವಾಲೆ 61, ಚಿರಾಗ್ ಖುರಾನಾ 44, ದಿಲಿಪ್ ಅಟಿತ್ಕರ್ ಬ್ಯಾಟಿಂಗ್ 50, ಆಶಿಕ್ ಶ್ರೀನಿವಾಸ್ 64ಕ್ಕೆ 2). ತಮಿಳುನಾಡು ವಿರುದ್ಧದ ಪಂದ್ಯ

ರಾಜಸ್ತಾನ: 90 ಓವರ್‌ಗಳಲ್ಲಿ 5 ವಿಕೆಟ್‌ಗೆ 220 (ಪುನೀತ್ ಯಾದವ್ 33, ಆಕಾಶ್ ಚೋಪ್ರಾ ಬ್ಯಾಟಿಂಗ್ 82, ದಿಶಾಂತ್ ಯಾಗ್ನಿಕ್ ಬ್ಯಾಟಿಂಗ್ 60). ಹೈದರಾಬಾದ್ ವಿರುದ್ಧದ ಪಂದ್ಯ

ಪ್ರತಿಕ್ರಿಯಿಸಿ (+)