ಗುರುವಾರ , ಮೇ 13, 2021
24 °C

ರಥಯಾತ್ರೆಗೆ ಆರ್ಎಸ್ಎಸ್ ಬೆಂಬಲ: ಅಡ್ವಾಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ನಾಗಪುರ, (ಐಎಎನ್ಎಸ್ ): ~ಸ್ವಚ್ಛ ರಾಜಕಾರಣ ಮಾಡುವ ಮತ್ತು ಉತ್ತಮ ಸರ್ಕಾರ ನಡೆಸುವ~ ಗುರಿ ಹೊಂದಿರುವ ತಮ್ಮ ಉದ್ದೇಶಿತ ~ಭ್ರಷ್ಟಾಚಾರ ವಿರೋಧಿ ರಥಯಾತ್ರೆ~ಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್  ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಅಡ್ವಾಣಿ ಅವರು ಹೇಳಿದ್ದಾರೆ.

ತಮ್ಮ ಉದ್ದೇಶಿತ ಭ್ರಷ್ಟಾಚಾರ ವಿರೋಧಿ ರಥಯಾತ್ರೆಯ ಕುರಿತಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಇತರ ನೇತಾರರೊಂದಿಗೆ ಮಾತುಕತೆ ನಡೆಸಿದ ನಂತರ ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಯಾತ್ರೆಯ ಯಶಸ್ಸಿಗೆ ಶ್ರಮಿಸುವಂತೆಯೂ ಭಾಗವತ್ ಅವರು ತಮ್ಮ ಸಂಘಟನೆಯಾದ ಆರ್ಎಸ್ಎಸ್ ಕಾರ್ಯಕರ್ತರಿಗೆ ಸೂಚಿಸಿದ್ದಾರೆ ಎಂದೂ ತಿಳಿಸಿದರು.

ತಮ್ಮ ಉದ್ದೇಶಿತ ಭ್ರಷ್ಟಾಚಾರ ವಿರೋಧಿ ರಥಯಾತ್ರೆಗೆ ~ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್  ಅವರ  ಆಶಿರ್ವಾದ ಕೋರಲು, ಜೊತೆಗೆ ಈಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿ ಈಗ ಚೇತರಿಸಿಕೊಳ್ಳುತ್ತಿರುವ  ಬಿಜೆಪಿಯ ರಾಷ್ಟ್ರಿಯ ಅಧ್ಯಕ್ಷ  ನಿತಿನ್ ಗಡ್ಕರಿ ಅವರನ್ನೂ ಗಡ್ಕರಿ  ಕಾಣಲು ತಾವು ಇಲ್ಲಿಗೆ ಬಂದಿದ್ದಾಗಿ  ಅವರು ವಿವರ ನೀಡಿದರು.

ತಮ್ಮ ಉದ್ದೇಶಿತ ~ಭ್ರಷ್ಟಾಚಾರ ವಿರೋಧಿ ರಥಯಾತ್ರೆ~ಯು ದೇಶಾದ್ಯಂತ ಸಂಚರಿಸಲಿದೆ ಎಂದ ಅಡ್ವಾಣಿ ಅವರು, ಎಲ್ಲಾ ಪ್ರಮುಖ ಪಟ್ಟಣಗಳನ್ನು ಮುಟ್ಟುವ ಉದ್ದೇಶ ತಮ್ಮದು ಎಂದು ಹೇಳಿಕೊಂಡಿದ್ದಾರೆ. ಇದಲ್ಲದೇ ಈಶಾನ್ಯ ರಾಜ್ಯಗಳಿಗೂ ಭೇಟಿಕೊಡುವ ಉದ್ದೇಶವಿದೆ ಎಂದು ಅವರು ಹೇಳಿದರು. 

ಸದ್ಯಕ್ಕೆ ಅಕ್ಟೋಬರ್ 11 ರಿಂದ ~ಭ್ರಷ್ಟಾಚಾರ ವಿರೋಧಿ ರಥಯಾತ್ರೆ~ ನಡೆಸಲು ಉದ್ದೇಶಿಸಲಾಗಿದೆ. ಯಾತ್ರೆ ಆರಂಭಿಸುವ ದಿನವನ್ನು ಗಡ್ಕರಿ ಅವರು  ಅಧಿಕೃತವಾಗಿ ದೆಹಲಿಯಲ್ಲಿ ಘೋಷಿಸಲಿದ್ದಾರೆ ಎಂದೂ ತಿಳಿಸಿದರು.

 ಅಕ್ಟೋಬರ್ 11 ವಿದ್ಯಾರ್ಥಿ ಚಳುವಳಿ ಹುಟ್ಟುಹಾಕಿದ ಜಯಪ್ರಕಾಶ್ ನಾರಾಯಣ್ ಅವರ ಜನ್ಮದಿನ. 1974ರ ಈ ಜೆಪಿ ಚಳುವಳಿಯ ದೆಸೆಯಿಂದಾಗಿ ತುರ್ತು ಪರಿಸ್ಥಿತಿ ಘೋಷಿಸಿದ್ದ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು 1977ರ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲು ಕಾಣಬೇಕಾಯಿತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.