ರಫಿ ಗಾಯನ ಸಂಜೆ...

7

ರಫಿ ಗಾಯನ ಸಂಜೆ...

Published:
Updated:
ರಫಿ ಗಾಯನ ಸಂಜೆ...

30 ವರ್ಷಗಳ ಹಿಂದೆ ಕಣ್ಮರೆಯಾದ ಹಿನ್ನೆಲೆ ಗಾಯಕ ಮೊಹಮ್ಮದ್ ರಫಿ ದೈತ್ಯ ಪ್ರತಿಭೆ. ಪ್ರೇಮ, ವಿರಹ, ವಿಷಾದ, ದುಗಡ, ಸಂತಸ ಎಲ್ಲ ಭಾವಗಳನ್ನೂ ತಮ್ಮ ಧ್ವನಿಯ ಏರಿಳಿತದಿಂದಲೇ ಬಿಂಬಿಸುತ್ತಿದ್ದ ಮಹಾನ್ ಗಾಯನ.ಅಸಂಖ್ಯಾತ ಹಿಂದಿ ಚಿತ್ರಗಳಿಗೆ ಹಾಡಿದ್ದ ರಫಿ ಉರ್ದು, ಭೋಜಪುರಿ, ಮರಾಠಿ, ಬಗಾಲಿ, ಗುಜರಾತಿ, ಕೊಂಕಣಿ, ಕನ್ನಡ (ನೀನೆಲ್ಲಿ ನಡೆವೆ ದೂರ) ಸಿನಿಮಾಗಳಲ್ಲೂ ಹಾಡಿದ್ದರು. ಖವ್ವಾಲಿ, ಗಝಲ್, ಭಜನ್... ಹೀಗೆ ಎಲ್ಲ ಪ್ರಕಾರದ ಸಂಗೀತವೂ ಅವರಲ್ಲಿ ಅಂತರ್ಗತವಾಗಿತ್ತು.ನೌಶಾದ್, ಓ.ಪಿ. ನಯ್ಯರ್, ಶಂಕರ್ ಜೈಕಿಶನ್, ಎಸ್.ಡಿ. ಬರ್ಮನ್ ಅವರಂತಹ ಸಂಗೀತ ನಿರ್ದೇಶಕರ ಅಚ್ಚುಮೆಚ್ಚಿನ ಗಾಯಕರಾಗಿದ್ದರು ರಫಿ. ನಟ ಶಮ್ಮಿ ಕಪೂರ್, ರಾಜೇಂದ್ರ ಕುಮಾರ್ ಚಿತ್ರಗಳ ಕಾಯಂ ಗಾಯಕರಾಗಿದ್ದ ಅವರು 50-60ರ ದಶಕದಲ್ಲಿ ಅಕ್ಷರಶಃ ಹಿಂದಿ ಚಿತ್ರರಂಗವನ್ನು ತಮ್ಮ ಸಂಗೀತ ಮಾಧುರ್ಯದಿಂದ ಆಳಿದ್ದರು.ಸಂಗೀತದ ಹುಚ್ಚು ಹೊತ್ತುಕೊಂಡು, ಹಿಂದಿ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗಾಗಿ ದೂರದ ಲಾಹೋರ್‌ನಿಂದ 1944ರಲ್ಲಿ ಮುಂಬೈಗೆ ಬಂದಿದ್ದರು ರಫಿ. ಉಸ್ತಾದ್ ಬಡೆ ಗುಲಾಮ್ ಅಲಿ ಖಾನ್, ಉಸ್ತಾದ್ ಅಬ್ದುಲ್ ವಹೀದ್ ಖಾನ್ ಅವರಿಂದ ಶಾಸ್ತ್ರೀಯ ಸಂಗೀತವನ್ನೂ ಕಲಿತರು. 1924ರಲ್ಲಿ ಹುಟ್ಟಿದ್ದ ರಫಿ 56ರ ನಡುವಯಸ್ಸಿನಲ್ಲಿ 1980ರಲ್ಲಿ ಹೃದಯಾಘಾತದಿಂದ ಕಣ್ಮುಚ್ಚಿದರು. `ರಫಿ ಇಲ್ಲದೇ ನಾನು ಅಪೂರ್ಣ~ ಎಂದು ಶಮ್ಮಿ ಕಪೂರ್ ಹೇಳಿದ್ದ ಮಾತು ಹಿಂದಿ ಚಿತ್ರರಂಗದಲ್ಲಿ ಈ ಮಹಾನ್ ಗಾಯಕನ ಮಹತ್ವ ಮತ್ತು ಸ್ಥಾನವನ್ನು ನಿರ್ಧರಿಸುವಂತಿದೆ. ಕೂನೂರಿನ ಬೆಲ್ಲಾ ವಿಸ್ತಾ ಹೋಮ್‌ಸ್ಟೇ ಶುಕ್ರವಾರ `ರಿ ಲವ್ ಮೊಹಮ್ಮದ್ ರಫಿ~ ಎಂಬ ರಫಿ ಸಂಗೀತ ಸಂಜೆ ಏರ್ಪಡಿಸಿದೆ.ಗಾಯಕರಾದ ಅನಿಲ್ ಬಾಜಪೈ ಮತ್ತು ಹಮೀದ್ ಖಾನ್ ಅಂದು ರಫಿ ಅವರ 36 ಅತಿ ಜನಪ್ರಿಯ ಗೀತೆಗಳನ್ನು ಹಾಡಲಿದ್ದಾರೆ.

ಸ್ಥಳ: ಚೌಡಯ್ಯ ಸ್ಮಾರಕ ಭವನ, ವೈಯಾಲಿ ಕಾವಲ್. ಸಂಜೆ 6.30. ಟಿಕೆಟ್‌ಗಾಗಿ 098841 00071, www.buzzintown.com

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry