ಬೆಂಗಳೂರು: ‘ರಫ್ತು ವಹಿವಾಟು ಉತ್ತೇಜಿಸಲು ವಾಣಿಜ್ಯ ಸಚಿವಾಲಯವು ಹಲವಾರು ಉತ್ತೇಜನಾ ಕ್ರಮಗಳನ್ನು ಕೈಗೊಂಡಿದೆ’ ಎಂದು ವಿದೇಶಿ ವ್ಯಾಪಾರದ ಹೆಚ್ಚುವರಿ ಮಹಾ ನಿರ್ದೇಶಕ ವಿಜಯ್ ಕುಮಾರ್ ಹೇಳಿದರು.

ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ವಿದೇಶಿ ವ್ಯಾಪಾರ ನೀತಿ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡುತ್ತಿದ್ದರು.

‘ಎರಡು ವರ್ಷಗಳಲ್ಲಿ ದೇಶಿ ರಫ್ತು ವಹಿವಾಟು ಗಣನೀಯವಾಗಿ ಕಡಿಮೆಯಾಗಿದೆ. ರಫ್ತು ವಹಿವಾಟಿನಿಂದ ಆಗುವ ಪ್ರಯೋಜನಗಳನ್ನು ಉದ್ಯಮಿಗಳಿಗೆ ಪರಿಚಯಿಸಲು ವಾಣಿಜ್ಯ ಸಚಿವಾಲಯವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಹಲವಾರು ನಿಯಮಗಳನ್ನು ಸಡಿಲಿಸಲಾಗಿದೆ. ವಿಳಂಬ ತಪ್ಪಿಸಲಾಗಿದೆ.

ವಿದೇಶ ವ್ಯಾಪಾರದ ಮಹಾ ನಿರ್ದೇಶನಾಲಯದ ಬೆಂಗಳೂರು ಕಚೇರಿಯು ಹುಬ್ಬಳ್ಳಿ, ಚಿಕ್ಕಮಗಳೂರು, ಮಂಗಳೂರಿನಲ್ಲಿ ರಫ್ತು ಉತ್ತೇಜನಾ ಕಾರ್ಯಕ್ರಮಗಳ ಬಗ್ಗೆ ಉದ್ದಿಮೆದಾರರಿಗೆ ಮಾಹಿತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು. ‘ನಿರ್ಯಾತ ಬಂಧು’ ಯೋಜನೆಯ ರೂಪು ರೇಷೆಗಳನ್ನೂ ಅವರು ಪರಿಚಯಿಸಿದರು.

‘ರಫ್ತುದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಇಲಾಖೆ ಅಗತ್ಯ ಸಹಕಾರ ನೀಡಲಿದೆ’ ಎಂದೂ ತಿಳಿಸಿದರು.

‘ಕಾಸಿಯಾ’ ಅಧ್ಯಕ್ಷ ಎ.ಪದ್ಮನಾಭ ಅವರು ಮಾತನಾಡಿ, ‘ಇಂತಹ ಕಾರ್ಯಕ್ರಮಗಳಿಂದ ರಫ್ತುದಾರರು ಮತ್ತು ಇಲಾಖೆ ಮಧ್ಯೆ ಇರುವ ಅಂತರ ಕಡಿಮೆಯಾಗುವುದು’ ಎಂದರು.

‘ಸಣ್ಣ ಕೈಗಾರಿಕೆಗಳು ಜಾಗತಿಕವಾಗಿ ಮುಕ್ತ ಮಾರುಕಟ್ಟೆ ಎದುರಿಸಲು ರಫ್ತು ಉತ್ತೇಜನಾ ಕ್ರಮಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ’ ಎಂದರು.
ರಫ್ತುದಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಆರ್.ರಾಜು ಮನವಿ ಸಲ್ಲಿಸಿದರು.

ವಿದೇಶ ವ್ಯಾಪಾರ ನೀತಿಯ ಸಹಾಯಕ ಮಹಾ ನಿರ್ದೇಶಕ ಮೊಹಮ್ಮದ್ ಮೊಹಿನ್ ಅಫಾಕ್, ‘ಕಾಸಿಯಾ’ದ ಗೌರವ ಕಾರ್ಯದರ್ಶಿ ಬಿ.ಪ್ರವೀಣ್ ಮಾತನಾಡಿದರು. ಸಭೆಯಲ್ಲಿ ಹಾಜರಿದ್ದ ರಫ್ತುದಾರರು ತಮ್ಮ ಅನೇಕ ಅನುಮಾನಗಳಿಗೆ ಸ್ಪಷ್ಟನೆ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.