ಶನಿವಾರ, ಮಾರ್ಚ್ 25, 2023
26 °C

ರಷ್ಯಾ ಜತೆ ವಾಣಿಜ್ಯ: 4 ಪಟ್ಟು ವೃದ್ಧಿ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಮುಂದಿನ 5 ವರ್ಷಗಳಲ್ಲಿ ರಷ್ಯಾದ ಜೊತೆಗಿನ ವಾಣಿಜ್ಯ ಬಾಂಧವ್ಯವು ನಾಲ್ಕು ಪಟ್ಟುಗಳಷ್ಟು ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಭಾರತ ಅಂದಾಜು ಮಾಡಿದೆ.



2015ರ ಹೊತ್ತಿಗೆ ರಷ್ಯಾದ ಜೊತೆ 20 ಶತಕೋಟಿ ಡಾಲರ್‌ಗಳಷ್ಟು (ಅಂದಾಜು 1,00,000 ಕೋಟಿಗಳಷ್ಟು ವಹಿವಾಟು ನಡೆಯಲಿದೆ ಎಂದು ವಾಣಿಜ್ಯ  ಸಚಿವ ಆನಂದ ಶರ್ಮಾ ಸೋಮವಾರ ಇಲ್ಲಿ ಹೇಳಿದರು.  ಭಾರತ - ರಷ್ಯಾ ವ್ಯಾಪಾರ ಮತ್ತು ಬಂಡವಾಳ ಹೂಡಿಕೆ ವೇದಿಕೆಯ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

 

ಈ ಗುರಿ ಸಾಧಿಸಲು ಉಭಯ ದೇಶಗಳ ಸರ್ಕಾರಗಳು ಮತ್ತು ಉದ್ಯಮಿಗಳು ಸೂಕ್ತ ರೀತಿಯಲ್ಲಿ ಪ್ರಯತ್ನಿಸಬೇಕು. ಮಾಹಿತಿ ತಂತ್ರಜ್ಞಾನ, ದೂರಸಂಪರ್ಕ, ಮತ್ತಿತರ ರಂಗಗಳಲ್ಲಿ  ಬಾಂಧವ್ಯ ವೃದ್ಧಿಗೆ ಅವಕಾಶಗಳು ಇವೆ ಎಂದು ಶರ್ಮಾ ನುಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.