ನವದೆಹಲಿ (ಐಎಎನ್ಎಸ್): ಭಗವದ್ಗೀತೆಯನ್ನು ನಿಷೇಧಿಸಬೇಕೆಂಬ ಅರ್ಜಿಯನ್ನು ರಷ್ಯಾ ದೇಶದ ಕೋರ್ಟ್ ತಳ್ಳಿ ಹಾಕಿದೆ. ಈ ಮೂಲಕ ಅಲ್ಲಿನ ಹಿಂದೂಗಳಿಗೆ ಬಹು ದೊಡ್ಡ ಕಾನೂನು ಹೋರಾಟದಲ್ಲಿ ಜಯ ದೊರೆತಂತಾಗಿದೆ.

ರಷ್ಯಾದ ಸಂಪ್ರದಾಯವಾದಿ ಕ್ರೈಸ್ತರ ಗುಂಪೊಂದು ಕಳೆದ ವರ್ಷ ಜೂನ್ನಲ್ಲಿ ಭಗವದ್ಗೀತೆಯು ಸಾಮಾಜಿಕ ವೈಷಮ್ಯಕ್ಕೆ ಕಾರಣವಾಗುತ್ತದೆ ಮತ್ತು ದ್ವೇಷ ಭಾವನೆಯನ್ನು ಕೆರಳಿಸುತ್ತದೆ ಹಾಗಾಗಿ ಭಗವದ್ಗೀತೆಯ ಭಾಷಾಂತರ ಪ್ರತಿಯನ್ನು ನಿಷೇಧಿಸಬೇಕೆಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.

ಡಿಸೆಂಬರ್ನಲ್ಲಿ ವಿಚಾರಣೆ ನಡೆಸಿದ ಕೆಳ ಹಂತದ ನ್ಯಾಯಾಲಯವು ಅರ್ಜಿಯನ್ನು ವಜಾ ಮಾಡಿತು.
ಇದನ್ನು ಪ್ರಶ್ನಿಸಿ ಮೇಲಿನ ನ್ಯಾಯಾಲಯದಲ್ಲಿ ಪಾಸಿಕ್ಯುಷನ್ ಅರ್ಜಿ ಸಲ್ಲಿಸಿತ್ತು. ಕೆಳ ಹಂತದ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿರುವ ಕೋರ್ಟ್ ಇಲ್ಲಿನ ಹಿಂದೂಗಳು ನಿಟ್ಟುಸಿರು ಬಿಡುವಂತೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.