ರಸಗೊಬ್ಬರ ಕಂಪೆನಿ ವಿರುದ್ಧ ಪ್ರತಿಭಟನೆ

ಶನಿವಾರ, ಮೇ 25, 2019
22 °C

ರಸಗೊಬ್ಬರ ಕಂಪೆನಿ ವಿರುದ್ಧ ಪ್ರತಿಭಟನೆ

Published:
Updated:

ರಾಯಬಾಗ: ನಕಲಿ ಗೊಬ್ಬರ ತಯಾರಿಸಿ ಮಾರಾಟ ಮಾಡುತ್ತಿದೆ ಎಂದು ಆರೋಪಿಸಿ ಘಟಪ್ರಭಾ ಫರ್ಟಿಲೈಜರ್ಸ್ ಕಂಪೆನಿ  ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸುವಂತೆ ಒತ್ತಾಯಿಸಿ ತಾಲ್ಲೂಕಿನ ದಲಿತ ರೈತ ಹೋರಾಟ ಸಮಿತಿ ಸದಸ್ಯರು ಗುರು ವಾರ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಕಂಪೆನಿಯು ಸರಿಯಾದ ರಾಸಾಯನಿಕ ಬಳಸದೆ ರಸಗೊಬ್ಬರ ತಯಾರಿಸುತ್ತಿದು ಇದರಿಂದ ರೈತರ ಜಮೀನುಗಳು ಫಲವತ್ತತೆ ಕಳೆದು ಕೊಳ್ಳುತ್ತಿವೆ.  ವೈಜ್ಞಾನಿಕವಾಗಿ ಹಾಗೂ ಸರ್ಕಾರ ನಿಗದಿ ಪಡಿಸಿದ ಪ್ರಮಾಣದಲ್ಲಿ  ಮಿಶ್ರಣ ಮಾಡುತ್ತಿಲ್ಲ ಎಂದು ಪ್ರತಿಭಟನಾ ಕಾರರು ಕಂಪೆನಿ ವಿರುದ್ಧ ಆರೋಪಿಸಿ ಮನವಿ ನೀಡಿದರು.   ಕಂಪೆನಿಯ ಭಾರಿ ವಾಹನಗಳು ಹೆಚ್ಚಿನ ಪ್ರಮಾಣದಲ್ಲಿ  ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸುತ್ತವೆ. ಇದರಿಂದ ಶಾಲಾ ಕಾಲೇಜು ವಿದ್ಯಾರ್ಥಿ ಗಳಿಗೆ  ಸಂಚಾರದ ತೊಂದರೆಯಾಗು ತ್ತಿದೆ. ಕಾರಣ ತಕ್ಷಣ ಭಾರಿ ವಾಹನಗಳ ಸಂಚಾರ ನಿಲ್ಲಿಸಬೇಕು, ಅದೇ ರೀತಿ ಕೋಟ್ಯಂತರ ಮೌಲ್ಯದ ನಕಲಿ ಗೊಬ್ಬರ ಉಗ್ರಾಣದಲ್ಲಿ ಸಂಗ್ರಹವಿದ್ದು, ಅದನ್ನು ವಿಧಿ ವಿಜ್ಞಾನ ತಜ್ಞರಿಂದ ತನಿಖೆ ಯಾಗುವವರೆಗೆ ವಿಲೇವಾರಿ ಮಾಡತ ಕ್ಕದ್ದಲ್ಲ ಎಂದು ಮನವಿಯಲ್ಲಿ ತಾಲ್ಲೂಕು ಆಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.ಮನವಿ ಸ್ವೀಕರಿಸಿ ತಹಶೀಲ್ದಾರ ಶಿವಾನಂದ ಸಾಗರ ಫರ್ಟಿಲೈಜಸ್ ಕಂಪೆನಿಗೆ ಪೊಲೀಸರೊಂದಿಗೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಕೈಕೊಳ್ಳುವುದಾಗಿ ಹೇಳಿದರು.ರೈತ ಹೋರಾಟ ಸಮಿತಿಯ ರಾಜು ತಳವಾರ, ಮಹೇಶ ಕೊರವಿ, ಮಹಾ ವೀರ ಐಹೊಳೆ, ರಾಜು ಶಿರಗಾವಿ ಹಾಗೂ ಜಲೀಲ್ ಮೋಮಿನ್ ನೇತೃತ್ವ ವಹಿಸಿದ್ದರು.ಮಹಾವೀರ ಐಹೊಳೆ, ಮಹೇಶಿ ಕೊರವಿ, ರಾಜು ಶಿರಗಾವಿ, ರಾಜು ತಳವಾರ, ಈರಪ್ಪ ಕಂಬಳೆ, ರವಿ.ಕಂಬಳೆ, ಬಿ.ಕೆ.ಮಾಂಗ, ಎಸ್. ಎಂ.ಕಾಂಬಳೆ, ಜ್ಯೋತಿ ಚಂಬಾ ರ  ಸೇರಿದಂತೆ ತಾಲ್ಲೂಕಿನ  ದಲಿತ ರೈತ ಹೋರಾಟ ಸಮಿತಿಯ ಕಾರ್ಯಕರ್ತರು  ಭಾಗವಹಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry