ಶುಕ್ರವಾರ, ಜೂನ್ 18, 2021
22 °C

ರಸಪ್ರಶ್ನೆ ಸ್ಪರ್ಧೆ ರಾಜ್ಯಮಟ್ಟಕ್ಕೆ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೊಡ್ಡಬಳ್ಳಾಪುರ: ನಗರದ ಅರಳು­ಮಲ್ಲಿಗೆ ಬಾಗಿಲು ಸರ್ಕಾರಿ ಪ್ರೌಢ ಶಾಲೆಯಲ್ಲಿ ಪ್ರೌಢ ಶಾಲಾ ವಿದ್ಯಾ­ರ್ಥಿ­­ಗಳಿಗಾಗಿ ನಡೆದ  ಜಿಲ್ಲಾ ಮಟ್ಟದ ವಿಜ್ಞಾನ ರಸ ಪ್ರಶ್ನೆ ಸ್ಪರ್ಧೆಯಲ್ಲಿ 2 ತಂಡ ರಾಜ್ಯಮಟ್ಟಕ್ಕೆ ಆಯ್ಕೆ­ಯಾಗಿವೆ.ದೇವನಹಳ್ಳಿ ತಾಲ್ಲೂಕಿನ ಬಚ್ಚ­ಹಳ್ಳಿ ಗ್ರಾಮದ ಸರ್ಕಾರಿ ಪ್ರೌಢ­ಶಾಲೆ ವಿದ್ಯಾ­ರ್ಥಿ­ಗಳಾದ ಮೋಹನ್‌­­ಕುಮಾರ್, ಮಾನಸ ಮತ್ತು ದೇವ­ನಹಳ್ಳಿ ಪಟ್ಟಣದ ಸರ್ಕಾರಿ ಪ್ರೌಢ­ಶಾಲೆಯ ವಿದ್ಯಾರ್ಥಿ­ನಿಯರಾದ ಬಿ.ಎಂ.ಅಮೂಲ್ಯ, ಎಸ್.ವಿ. ಲಾವಣ್ಯ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆ­ಯಾಗಿರುವ ವಿದ್ಯಾರ್ಥಿಗಳು.ಬಹುಮಾನ ವಿತರಣಾ ಕಾರ್ಯ­ಕ್ರಮದಲ್ಲಿ ಅರಳುಮಲ್ಲಿಗೆ ಬಾಗಿಲು ಸರ್ಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕಿ ತಿಪ್ಪಮ್ಮ, ನಾಗರಾಜ್, ನಾಗಪ್ಪಗೌಡ, ಎಂ.ಬಿ.ಪ್ರಕಾಶ್, ಎಚ್.ವಿ.ಮುನಿ­ರಾಜು, ಎಚ್.ಎನ್.ಪ್ರಕಾಶ್, ಎಚ್.ವಿ.­ನಾರಾ­ಯಣಪ್ಪ  ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.