ಭಾನುವಾರ, ಏಪ್ರಿಲ್ 18, 2021
29 °C

ರಸ್ತೆ ಅಪಘಾತ: ಇಬ್ಬರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಪರಿಚಿತ ವಾಹನವೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ದೇವನಹಳ್ಳಿ ಸಂಚಾರ ಠಾಣೆ ವ್ಯಾಪ್ತಿಯ ವಿಜಿಪುರ ರಸ್ತೆಯಲ್ಲಿ ಬುಧವಾರ ರಾತ್ರಿ ನಡೆದಿದೆ. ವಿಜಿಪುರದ ಚೇತನ್ (30) ಮತ್ತು ಸುರೇಶ (32) ಮೃತಪಟ್ಟವರು. ಸ್ವಂತ ಉದ್ಯೋಗ ಮಾಡಿಕೊಂಡಿದ್ದ ಅವರು ಕಾರಿನಲ್ಲಿ ರಾತ್ರಿ 12 ಗಂಟೆ ಸುಮಾರಿಗೆ ಮನೆಗೆ ಹೋಗುವಾಗ ವಿಜಿಪುರದ ಐಟಿಐ ಕಾಲೇಜಿನೆ ಎದುರು ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆಯಿತು.

ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಸಾವನ್ನಪ್ಪಿದರು. ಚೇತನ್ ಅವರು ಕಾರು ಚಾಲನೆ ಮಾಡುತ್ತಿದ್ದರು. ಸುರೇಶ ಅವರು ವಾಹನದ ಮುಂದಿನ ಸೀಟಿನಲ್ಲಿ ಕುಳಿತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕಾರಿಗೆ ಡಿಕ್ಕಿ ಹೊಡೆದ ಅಪರಿಚಿತ ವಾಹನದ ಚಾಲಕ ವಾಹನ ಸಮೇತ ಪರಾರಿಯಾಗಿದ್ದಾನೆ. ಪ್ರಕರಣ  ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ದೇವನಹಳ್ಳಿ ಸಂಚಾರ ಠಾಣೆಯ ಪೊಲೀಸರು ತಿಳಿಸಿದ್ದಾರೆ.

 

ನವಜಾತ ಶಿಶುವಿನ ಶವ ಪತ್ತೆ: ಜಗಜೀವನ್‌ರಾಂನಗರದ ಗೋರಿಪಾಳ್ಯದಲ್ಲಿ ನವಜಾತ ಗಂಡು ಮಗುವಿನ ಶವ ಗುರುವಾರ ಪತ್ತೆಯಾಗಿದೆ. ದುಷ್ಕರ್ಮಿಗಳು     ಚೀಲವೊಂದರಲ್ಲಿ ಮಗುವಿನ ಶವ ತುಂಬಿ ಖಾಲಿ ನಿವೇಶನದಲ್ಲಿ. ಎಸೆದು ಪರಾರಿಯಾಗಿದ್ದಾರೆ. ಬೆಳಿಗ್ಗೆ ಇದನ್ನು ಗಮನಿಸಿದ ಸಾರ್ವಜನಿಕರು ಮಾಹಿತಿ ನೀಡಿದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಜಗಜೀವನ್‌ರಾಂನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.

 

ಕೊಳಾಯಿ ಕಳ್ಳನ ಬಂಧನ: ಜಯದೇವ ಹೃದ್ರೋಗ   ಆಸ್ಪತ್ರೆಯ  ಶೌಚಾಲಯಗಳಲ್ಲಿ ಕೊಳಾಯಿಗಳನ್ನು ಕಳವು ಮಾಡಿ ಮಾರಾಟ ಮಾಡುತ್ತಿದ್ದ ಹುಣಸೂರಿನ ಮಸ್ತಾನ್ ಷರೀಫ್     (41) ಎಂಬಾತನನ್ನು ಬಂಧಿಸಿರುವ ತಿಲಕ್‌ನಗರ ಪೊಲೀಸರು ಎಂಬತ್ತು ಸಾವಿರ ರೂಪಾಯಿ ಮೌಲ್ಯದ ಕೊಳಾಯಿಗಳು ಮತ್ತು ಮತ್ತಿತರ ವಸ್ತುಗಳನ್ನು     ವಶಪಡಿಸಿಕೊಂಡಿದ್ದಾರೆ.  ನಮಸ್ತಾನ್ ಕೊಳಾಯಿ ರಿಪೇರಿ ಕೆಲಸ ಮಾಡುತ್ತಿದ್ದ.

 

ಶಿವಾಜಿನಗರದಲ್ಲಿರವ ತನ್ನ ಸಹೋದರಿ ಮನೆಗೆ ಆಗಾಗ್ಗೆ ಬರುತ್ತಿದ್ದ ಆತ ಆಸ್ಪತ್ರೆಗೆ ಹೋಗಿ ಅಲ್ಲಿನ ಶೌಚಾಲಯಗಳಲ್ಲಿ ಕೊಳಾಯಿಗಳನ್ನು ಕಳವು ಮಾಡಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

 

ಬಂಧನ:ಗೃಹೋಪಯೋಗಿ ಅಡುಗೆ ಅನಿಲ ಸಿಲಿಂಡರ್ ಗಳಲ್ಲಿನ ಅನಿಲವನ್ನು ಅಕ್ರಮವಾಗಿ ಆಟೊ ರಿಕ್ಷಾಗಳಿಗೆ ತುಂಬುತ್ತಿದ್ದ ಎಂಟು ಮಂದಿ ಆರೋಪಿಗಳನ್ನು ಬಂಧಿಸಿರುವ ಕೇಂದ್ರ ಅಪರಾಧ ವಿಭಾಗದ ಪೊಲೀಸರು 2.50 ಲಕ್ಷ ರೂಪಾಯಿ ಮೌಲ್ಯದ 44 ಸಿಲಿಂಡರ್‌ಗಳನ್ನು  ವಶಪಡಿಸಿಕೊಂಡಿದ್ದಾರೆ.

 

ಸಾರಾಯಿಪಾಳ್ಯದ ಅಬ್ದುಲ್ ರವೂಪ್ (37), ಸಯ್ಯದ್ ಹಮೀದ್ (31), ನಾಗವಾರದ ಅಬ್ದುಲ್ ನಹೀಂ (20), ಹೆಗ್ಗಡೆನಗರದ ಜಾವೀದ್ (25), ಚೋಳನಾಯಕನಹಳ್ಳಿಯ ಮುರಳಿ ಮೋಹನ್      (29), ವೆಂಕಟೇಶ್ (45), ಚಿಕ್ಕಜಾಲದ ಸಂತೋಷ (22) ಮತ್ತು ಗೋವಿಂದಪುರದ ಶಬ್ಬೀರ್ (38)    ಬಂಧಿತರು.

 

 ಆರೋಪಿಗಳು ಇಂಡೇನ್, ಭಾರತ್ ಮತ್ತು ಎಚ್.ಪಿ ಕಂಪೆನಿಯ ಅಡುಗೆ ಅನಿಲ ಸಿಲಿಂಡರ್‌ಗಳನ್ನು   ಶೇಖರಿಸಿಟ್ಟುಕೊಂಡು ಅವುಗಳಲ್ಲಿನ ಅನಿಲವನ್ನು   ಆಟೊಗಳಿಗೆ ತುಂಬುತ್ತಿದ್ದರು. ಈ ಬಗ್ಗೆ ಮಾಹಿತಿ ಕಲೆ ಹಾಕಿ   ಅವರನ್ನು ಬಂಧಿಸಿ, 2.50 ಲಕ್ಷ ರೂಪಾಯಿ ಮೌಲ್ಯದ 44 ಅಡುಗೆ ಅನಿಲ ಸಿಲಿಂಡರ್‌ಗಳು, ನಗದು ಮತ್ತು ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು ಎಂದು ಪೊಲೀಸರು   ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.