ರಸ್ತೆ ಅಭಿವೃದ್ಧಿಗೆ 10 ಕೋಟಿ: ರವಿ
ಚಿಕ್ಕಮಗಳೂರು: ತಾಲ್ಲೂಕಿನ ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಒಳ ಪಡುವ ರಸ್ತೆಗಳ ಅಭಿವೃದ್ಧಿಗೆ 10 ಕೋಟಿ ರೂಪಾಯಿ ವಿಶೇಷ ಅನುದಾ ನವನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದ್ದಾರೆ ಎಂದು ಶಾಸಕ ಸಿ.ಟಿ.ರವಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಮೂಡಿಗೆರೆ ಮತ್ತು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರಕ್ಕೆ ಮುಖ್ಯಮಂತ್ರಿಗಳು ತಲಾ 10ಕೋಟಿ ರೂಪಾಯಿಗಳನ್ನು ನೀಡಿದ್ದಾರೆ ಎಂದು ಹೇಳಿದರು.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಸಖರಾಯ ಪಟ್ಟಣ -ಬಾಣಾ ವರ, ಲಕ್ಯಾ- ಕಳಸಾಪುರ ರಸ್ತೆ, ಈಶ್ವರ ಹಳ್ಳಿ-ಕೆ.ಬಿ.ಹಾಳ್,ನಗರದ ಮಲ್ಲಂ ದೂರು ಸರ್ಕಲ್ನಿಂದ ಚಿತಾ ಗಾರದ ವರೆಗೆ, ಅಗ್ರಹಾರ-ನಾಗೇನಹಳ್ಳಿ ರಸ್ತೆ, ಹುಲಿಕೆರೆ- ಜಾವಗ ಲ್ರಸ್ತೆ, ಕಬ್ಬಳ್ಳಿ-ಮಂಗೇನಹಳ್ಳಿ ರಸ್ತೆ, ಜೋಡಿ ಹೋಚಿಹಳ್ಳಿ-ಜೋಡಿ ಲಿಂಗದ ಹಳ್ಳಿ ಸೇರಿದಂತೆ ಆಯ್ದಗ್ರಾಮಗಳ ಮರು ಡಾಂಬರೀಕರಣಕ್ಕೆ ಈ ಹಣ ಬಳಸಲಾಗುವುದೆಂದು ತಿಳಿಸಿದರು.
ತರೀಕೆರೆ, ಬಿಳಿಕೆರೆ ರಾಜ್ಯ ಹೆದ್ದಾರಿ ರಸ್ತೆಗೆ 1.9ಕೋಟಿ ರೂಪಾಯಿ ಬಿಡುಗಡೆ ಗೊಂಡಿದೆ. ಚಿಕ್ಕಮಗಳೂರಿನಿಂದ ಶಾಂತ ವೇರಿಯವರೆಗೆ ರಸ್ತೆ ಅಭಿವೃದ್ಧಿಗೆ 9ಲಕ್ಷ ವೆಚ್ಚ ಮಾಡಲಾಗುವುದು ಎಂದರು.
ಸುವರ್ಣ ವಿಕಾಸ ರಸ್ತೆ ಯೋಜನೆಯಡಿ 52ಲಕ್ಷರೂಪಾಯಿ ಬಿಡುಗಡೆ ಗೊಂಡಿದೆ. ನೆಲ್ಲೂರು, ಉಂಡೇದಾಸರಹಳ್ಳಿ ರಸ್ತೆಗೆ ಅಂದಾಜು ಪಟ್ಟಿ ತಯಾರಿಸಿ ತಕ್ಷಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಪರಿಶಿಷ್ಟ ಜಾತಿ ಮತ್ತು ಪಂಗಡ ದವರು ವಾಸಿಸುವ ಗ್ರಾಮಗಳ ಅಭಿವೃದ್ಧಿಗೆ ಎಸ್.ಇ.ಪಿ.ಯೋಜನೆಯಡಿ 1.32 ಕೋಟಿ ರೂಪಾಯಿ, ಟಿ.ಎಸ್.ಪಿ. ಯೋಜನೆಯಡಿ 9.13ಲಕ್ಷ ರೂಪಾಯಿ ಬಿಡುಗಡೆಗೊಂಡಿದೆ ಎಂದರು.
ದತ್ತಪೀಠ: ಬಾಬಾಬುಡನ್ಗಿರಿ ದತ್ತಪೀಠದ ಸಮಗ್ರ ಅಭಿವೃದ್ಧಿಗೆ ನೀಲಿನಕ್ಷೆ (ಮಾಸ್ಟರ್ ಪ್ಲಾನ್) ತಯಾ ರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸ ಲಾಗಿದೆ. ಸರ್ಕಾರಿ ಅಥವಾ ಖಾಸಗಿ ಯವರಿಂದ ನೀಲಿ ನಕ್ಷೆ ಪಡೆದು ಕೊಳ್ಳಲಿದ್ದಾರೆ ಎಂದು ಹೇಳಿದರು.
ಸರ್ಕಾರ ನೀಡಿದ 5ಕೋಟಿ ರೂಪಾಯಿ ಹಾಗೂ ಪ್ರವಾಸೋದ್ಯಮ ಇಲಾಖೆಯ 12ಕೋಟಿ ರೂಪಾಯಿ ಸೇರಿದಂತೆ ಒಟ್ಟು 17ಕೋಟಿ ರೂಪಾಯಿ ಅನುದಾನ ಇದೆ. ಕಾಂಕ್ರಿಟ್ ರಸ್ತೆ, ಯಾತ್ರಿನಿವಾಸ, ಸೇರಿದಂತೆ ಗಾಳಿಕೆರೆ, ಮಾಣಿಕ್ಯ ಧಾರದ ಸಹಜ ಸೌಂದರ್ಯಕ್ಕೆ ಧಕ್ಕೆಯಾಗದಂತೆ ಅಭಿವೃದ್ಧಿ ಪಡಿಸಲಾಗುವುದು. ಪರಿಸರ ಪ್ರಿಯರ ಸಲಹೆಗಳನ್ನು ಪಡೆದು ಸಭೆ ನಡೆಸಿ ಪೀಠವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವರಸಿದ್ಧಿ ವೇಣುಗೋಪಾಲ್, ಜಿಲ್ಲಾ ಪಂಚಾಯಿತಿ ಸದಸ್ಯ ಕಲ್ಮರಡಪ್ಪ, ಮಾಜಿ ಸದಸ್ಯ ವೆಂಕಟೇಶ್, ಸಿಡಿಎ ಮಾಜಿ ಅಧ್ಯಕ್ಷ ಕೋಟೆ ರಂಗನಾಥ ಇದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.