ರಸ್ತೆ ತುಂಬ ಬರೀ ದೂಳು

7

ರಸ್ತೆ ತುಂಬ ಬರೀ ದೂಳು

Published:
Updated:

ಯಳಂದೂರು: ಪಟ್ಟಣದಿಂದ ಬಿ.ಅರ್.ಹಿಲ್ಸ್‌ಗೆ ತೆರಳುವ ರಸ್ತೆ ಕಾಮಗಾರಿ ಆಮೆಗತಿಯಲ್ಲಿ ನಡೆಯು ತ್ತಿದ್ದು, ಸಾರ್ವಜನಿಕರು ಹಾಗೂ ವ್ಯಾಪಾರಿಗಳು ನಿತ್ಯ ದೂಳು ಕುಡಿಯುವ ಸ್ಥಿತಿ ನಿರ್ಮಾಣವಾಗಿದೆ. ಪಟ್ಟಣದ ದೊಡ್ಡ ಅಂಗಡಿ ಬೀದಿ ಹಾಗೂ ಬಳೇಪೇಟೆಯಲ್ಲಿ ಕಾಮಗಾರಿ ಆರಂಭವಾಗಿ 6 ತಿಂಗಳು ಕಳೆದಿವೆ. ರಸ್ತೆಗೆ ಮೆಟ್ಲಿಂಗ್ ಮಾಡುವ ಉದ್ದೇಶದಿಂದ ಕೇವಲ ಕಲ್ಲು- ಮಣ್ಣು ಮಾತ್ರ ಸುರಿಯಲಾಗಿದೆ.ಬಳೇಪೇಟೆಯ ಸರ್ಕಲ್‌ನಿಂದ ಹೊಸಕೆರೆವರೆಗೆ ಕಲ್ಲು- ಮಣ್ಣು ಸುರಿಯಲಾಗಿದೆ. ಇಲ್ಲಿನ ರಸ್ತೆಯಲ್ಲಿ ವಾಹನಗಳ ಒಡಾಟ ಅಧಿಕವಾಗಿರುವುದರಿಂದ ನಿತ್ಯ ದೂಳಿನ ಅಭಿಷೇಕ ವಾಗುತ್ತದೆ. ವ್ಯಾಪಾರ ಮಾಡಲು ತೊಂದರೆಯಾಗಿದೆ ಎಂದು ಬಳೇ ಪೇಟೆ ಪುಟ್ಟಸ್ವಾಮಿ ಅವರು ದೂರಿದ್ದಾರೆ. ಕಾಮಗಾರಿಯು ಈ ಹಂತದಲ್ಲಿ ನಿತ್ಯ ನೀರು ಹಾಕುವ ಜವಾಬ್ದಾರಿ ಹೊತ್ತಿರುವ ಗುತ್ತಿಗೆದಾರರು ಅದನ್ನು ಮರೆತಿದ್ದಾರೆ.ಮಳೆಗಾಲದಲ್ಲಿ ಬಳೇಪೇಟೆ ಯಲ್ಲಿ ಹಳ್ಳವನ್ನು ತೋಡಿ ತೊಂದರೆ ನೀಡಿದ್ದ ಲೊಕೋಪ ಯೋಗಿ ಇಲಾಖೆ ಈಗ ದೂಳು ಕುಡಿಸಿ ಸಾರ್ವಜನಿಕರಿಗೆ ಮತ್ತಷ್ಟು ತೊಂದರೆ ನೀಡುತ್ತಿದೆ ಎಂಬುದು ಅಲಂಕಾರ್ ಶ್ರೀಕಂಠ ಅವರ ದೂರಾಗಿದೆ. ಕೇವಲ ಮೀಟರ್ ಲೆಕ್ಕದಲ್ಲಿ ರಸ್ತೆ ಕಾಮಗಾರಿಯ ಡಾಂಬರೀಕರಣ ನಡೆಸಲಾಗಿದೆ. ಆದಷ್ಟು ಬೇಗ ಪೂರ್ಣ ಗೊಳಿಸಿ ಸಾರ್ವಜನಿಕರಿಗೆ ಆಗುತ್ತಿ ರುವ ಕಿರಿಕಿರಿ ತಪ್ಪಿಸಲು ಕ್ರಮ ಕೈಗೊಳ್ಳಬೇಕು ಎಂಬುದು  ನಾಗರಿಕರ ಬಯಕೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry