ಭಾನುವಾರ, ಮೇ 16, 2021
23 °C

ರಾಜಕೀಯ ಹಿತಾಸಕ್ತಿ: ಸಿಬಲ್ ವಿಷಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ):  ಶಿಕ್ಷಣ ಸುಧಾರಣೆಗೆ ಸಂಬಂಧಿಸಿದ ಹಲವು ಮಸೂದೆಗಳು ಸಂಸತ್ತಿನ ಅಂಗೀಕಾರಕ್ಕೆ ಕಾಯುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಕಪಿಲ್ ಸಿಬಲ್, `ರಾಜಕೀಯ ಹಿತಾಸಕ್ತಿ~ಗಳು ರಾಷ್ಟ್ರೀಯ ಹಿತಾಸಕ್ತಿ ಮೇಲೆ ಹಿಡಿತ ಸಾಧಿಸುತ್ತಿವೆ ಎಂದಿದ್ದಾರೆ.ಭಾರತೀಯ ಉದ್ದಿಮೆಗಳ ಒಕ್ಕೂಟದ (ಸಿಐಐ) ಸಮಾರಂಭವನ್ನುದ್ದೇಶಿಸಿ ಬುಧವಾರ ಮಾತನಾಡಿದ ಅವರು, `ರಾಜಕೀಯ ಇಚ್ಛಾಶಕ್ತಿ ಇದ್ದರೆ ಎಲ್ಲವೂ ಸಾಧ್ಯ. ಆದರೆ ಭಾರತದ ಹಿತಾಸಕ್ತಿಯ ಮೇಲೆ ರಾಜಕೀಯಪಕ್ಷಗಳ ಹಿತಾಸಕ್ತಿಗಳು ಹಿಡಿತ ಸಾಧಿಸುತ್ತಿವೆ~ ಎಂದು ವಿಷಾದಿಸಿದರು.ವಿದೇಶಿ ವಿಶ್ವವಿದ್ಯಾಲಯಗಳಿಗೆ ಕ್ಯಾಂಪಸ್ ತೆರೆಯಲು ಅನುಮತಿ ನೀಡುವ ಮಸೂದೆ, ಉನ್ನತ ವಿದ್ಯಾಭ್ಯಾಸ ಹಾಗೂ ಸಂಶೋಧನೆಗಾಗಿನ ರಾಷ್ಟ್ರೀಯ ಆಯೋಗ (ಎನ್‌ಸಿಎಚ್‌ಇಆರ್) ಸ್ಥಾಪನೆ ಕುರಿತ ಮಸೂದೆ ಹಾಗೂ ಶಿಕ್ಷಣದಲ್ಲಿನ ಅವ್ಯವಹಾರಗಳನ್ನು ತಡೆಯುವಲ್ಲಿನ ಮಸೂದೆಗಳು ಸಂಸತ್‌ನಲ್ಲಿ ಅಂಗೀಕಾರಕ್ಕಾಗಿ ಬಾಕಿ ಉಳಿದಿವೆ.`ಒಂದು ವರ್ಷ ಅಧ್ಯಯನ ನಡೆಸಿ ನಾನು ಈ ಮಸೂದೆಗಳನ್ನು ರಚಿಸ್ದ್ದಿದೆ. ಸ್ಥಾಯಿ ಸಮಿತಿ ಅನುಮತಿ ನೀಡಿದ್ದರೂ ಕಳೆದ ಎರಡು ವರ್ಷಗಳಿಂದ ಇವು ಅಂಗೀಕಾರಗೊಳ್ಳದೆ ಬಾಕಿ ಉಳಿದಿವೆ~ ಎಂದ ಸಿಬಲ್, ಶಿಕ್ಷಣ ಹಾಗೂ ಆರೋಗ್ಯ ಎರಡೂ ಕ್ಷೇತ್ರಗಳು ರಾಜಕೀಯ ಕಾರ್ಯಸೂಚಿಗಳಿಗಿಂತ ಮೇಲಿರಬೇಕು ಎಂದು ಅಭಿಪ್ರಾಯಪಟ್ಟರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.