ಗುರುವಾರ , ಮೇ 19, 2022
23 °C

ರಾಜಘಾಟ್‌ನಲ್ಲಿ ತೆಲಂಗಾಣ ತಂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಪ್ರತ್ಯೇಕ ತೆಲಂಗಾಣ ರಾಜ್ಯಕ್ಕೆ ಒತ್ತಾಯಿಸುತ್ತಿರುವ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್‌ಎಸ್) ಮುಖಂಡ ಕೆ.ಚಂದ್ರಶೇಖರ ರಾವ್ ಅವರು, ಕೇಂದ್ರ ಸರ್ಕಾರದ ಮೇಲೆ ಇನ್ನಷ್ಟು ಒತ್ತಡ ಹೇರುವ ತಂತ್ರ ಅನುಸರಿಸಿದ್ದು, ಭಾನುವಾರ ಇಲ್ಲಿನ ರಾಜಘಾಟ್‌ನಲ್ಲಿ ಮಹಾತ್ಮಾ ಗಾಂಧಿ ಸಮಾಧಿ ಮುಂಭಾಗದಲ್ಲಿ ತಮ್ಮ ಬೆಂಬಲಿಗರ ಜತೆ ಸತ್ಯಾಗ್ರಹ ನಡೆಸಿದರು.ತೆಲಂಗಾಣ ಜಂಟಿ ಕ್ರಿಯಾ ಸಮಿತಿ ಮುಖ್ಯಸ್ಥ ಕೋದಂಡರಾಂ ಹಾಗೂ ಇತರ ಸದಸ್ಯರೂ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು. ಪ್ರತ್ಯೇಕ ತೆಲಂಗಾಣ ಸಮಸ್ಯೆಯನ್ನು ರಾಷ್ಟ್ರಮಟ್ಟದಲ್ಲಿ ಎಲ್ಲರಿಗೂ ಮನವರಿಕೆ ಮಾಡಿಕೊಡುವ ಯತ್ನ ಇದಾಗಿದ್ದು, ಸಮಸ್ಯೆ ಕುರಿತು ಸರ್ಕಾರ ಇನ್ನಷ್ಟು ಸಮಾಲೋಚನೆ ನಡೆಸುವ ಅಗತ್ಯ ಇಲ್ಲ ಎಂದೂ ಹೇಳಿದ್ದಾರೆ.ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ತನ್ನ ಸ್ಪಷ್ಟ ನಿಲುವು ವ್ಯಕ್ತಪಡಿಸಬೇಕು ಎಂದೂ ಅವರು ಆಗ್ರಹಿಸಿದ್ದಾರೆ.ಗಾಂಧಿ ಜಯಂತಿ ಪ್ರಯುಕ್ತ ರಾಷ್ಟ್ರಪಿತನ ಸಮಾಧಿ ಸ್ಥಳದಲ್ಲಿ ಕೆಲವು ಗಂಟೆಗಳ ಕಾಲ ಸತ್ಯಾಗ್ರಹ ನಡೆಸಿದರು. ಶುಕ್ರವಾರದಿಂದ ಇಲ್ಲಿ ಬೀಡು ಬಿಟ್ಟಿರುವ ರಾವ್, ತಮ್ಮ ಬೇಡಿಕೆ ಈಡೇರಿಸುವಂತೆ ಹಾಗೂ ತೆಲಂಗಾಣ ಭಾಗದಲ್ಲಿನ ಸಮಸ್ಯೆಗಳನ್ನು ಶೀಘ್ರವೇ ಪರಿಹರಿಸುವಂತೆ ಪ್ರಧಾನಿ ಮನಮೋಹನ್ ಸಿಂಗ್, ಕೇಂದ್ರದ ಹಿರಿಯ ಸಚಿವರನ್ನು ಭೇಟಿ ಮಾಡಿ ಒತ್ತಾಯಿಸುವುದಾಗಿ ತಿಳಿಸಿದರು. ಪ್ರತ್ಯೇಕ ರಾಜ್ಯ ರಚನೆ ಸಂಬಂಧ ಸೂಕ್ತ ನಿರ್ಧಾರ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ಇನ್ನೆಷ್ಟು ಸಮಯ ಬೇಕು ಎಂದೂ ರಾವ್ ಪ್ರಶ್ನಿಸಿದರು. ಹೈದರಾಬಾದ್ ವರದಿ: ಆಂಧ್ರ ಪ್ರದೇಶ ವಿಧಾನ ಸಭೆಯ ಉಪ ಸಭಾಧ್ಯಕ್ಷರ ಕಚೇರಿಯಲ್ಲಿ ಧರಣಿ ನಡೆಸಿ ತಾವು ನೀಡಿರುವ ರಾಜೀನಾಮೆಯನ್ನು ಅಂಗೀಕರಿಸುವಂತೆ ಆಗ್ರಹಿಸಿ, ಪ್ರತಿಭಟನೆ ನಡೆಸುತ್ತಿದ್ದ ನಾಲ್ವರು ಶಾಸಕರನ್ನು ಪೊಲೀಸರು ಶನಿವಾರ ಮಧ್ಯರಾತ್ರಿ ಬಲವಂತವಾಗಿ ಹೊರಹಾಕಿದರು.ಶೀಘ್ರವೇ ಪರಿಹಾರ- ಆಜಾದ್: ಪ್ರತ್ಯೇಕ ತೆಲಂಗಾಣ ರಾಜ್ಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಶೀಘ್ರವೇ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ಕಾಂಗ್ರೆಸ್ ಪಕ್ಷದ ಆಂಧ್ರ ಪ್ರದೇಶ ಉಸ್ತುವಾರಿ ಗುಲಾಂ ನಬಿ ಆಜಾದ್ ಭಾನುವಾರ ಇಲ್ಲಿ ತಿಳಿಸಿದರು.  ಆಂಧ್ರ ಪ್ರದೇಶದ ಮೂರು ಪ್ರಮುಖ ಪ್ರಾಂತ್ಯಗಳಾದ ತೆಲಂಗಾಣ, ಕರಾವಳಿ ಆಂಧ್ರ ಮತ್ತು ರಾಯಲಸೀಮಾ ಪ್ರದೇಶದ ಜನಪ್ರತಿನಿಧಿಳು ಹಾಗೂ ರಾಷ್ಟ್ರಮಟ್ಟದಲ್ಲಿಯೂ ಸಮಾಲೋಚನೆ ನಡೆಸಿದ ನಂತರ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದರು.ಈ ಎಲ್ಲಾ ಶಾಸಕರೂ ಶನಿವಾರ ಮಧ್ಯಾಹ್ನದಿಂದ ಉಪ ಸಭಾಧ್ಯಕ್ಷರ ಕಚೇರಿಯಲ್ಲಿ ಸೇರಿ ಬಾಗಿಲು ಹಾಕಿ ಕೊಂಡು ಪ್ರತಿಭಟನೆ ನಡೆಸುತ್ತಿದ್ದರು.ಅವರನ್ನು ಬೆಂಬಲಿಸಿ ಅಪಾರ ಸಂಖ್ಯೆಯ ಬೆಂಬಲಿಗರು, ವಕೀಲರೂ ವಿಧಾನ ಸಭೆಯ ಹೊರಗೆ ಜಮಾಯಿಸಿದ್ದರು.

ಶಾಸಕರು ಕಚೇರಿಯ ಒಳಗೆ ಒಂಬತ್ತು ಗಂಟೆ ಪ್ರತಿಭಟನೆ ನಡೆಸಿದ ಮೇಲೆ, ಬಾಗಿಲು ಮುರಿದು ಒಳನುಗ್ಗಿದ ಪೊಲೀಸರು ನಾಲ್ವರು ಶಾಸಕರನ್ನೂ ದೈಹಿಕವಾಗಿ ಎತ್ತಿಕೊಂಡು ಹೊರಹಾಕಿದರು.ಶೀಘ್ರವೇ ಪರಿಹಾರ- ಆಜಾದ್: ಪ್ರತ್ಯೇಕ ತೆಲಂಗಾಣ ರಾಜ್ಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಶೀಘ್ರವೇ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ಕಾಂಗ್ರೆಸ್ ಪಕ್ಷದ ಆಂಧ್ರ ಪ್ರದೇಶ ಉಸ್ತುವಾರಿ ಗುಲಾಂ ನಬಿ ಆಜಾದ್ ಭಾನುವಾರ ಇಲ್ಲಿ ತಿಳಿಸಿದರು.ಆಂಧ್ರ ಪ್ರದೇಶದ ಮೂರು ಪ್ರಮುಖ ಪ್ರಾಂತ್ಯಗಳಾದ ತೆಲಂಗಾಣ, ಕರಾವಳಿ ಆಂಧ್ರ ಮತ್ತು ರಾಯಲಸೀಮಾ ಪ್ರದೇಶದ ಜನಪ್ರತಿನಿಧಿಳು ಹಾಗೂ ರಾಷ್ಟ್ರಮಟ್ಟದಲ್ಲಿಯೂ ಸಮಾಲೋಚನೆ ನಡೆಸಿದ ನಂತರ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದರು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.