ಬೆಂಗಳೂರು: ಬೆಂಗಳೂರು- ನಿಜಾಮುದ್ದೀನ್ ನಡುವೆ ಸಂಚರಿಸುವ `ರಾಜಧಾನಿ ಎಕ್ಸ್ಪ್ರೆಸ್~ ರೈಲಿಗೆ (ರೈಲು ಸಂಖ್ಯೆ-12493/12494) ನೂತನ ಎಲ್ಎಚ್ಬಿ ಬೋಗಿಗಳನ್ನು ಅಳವಡಿಸಿ ಮೇಲ್ದರ್ಜೆಗೇರಿಸಲಾಗಿದೆ.

`ಈ ಬೋಗಿಗಳು ಪ್ರಯಾಣಿಕರಿಗೆ ಹೆಚ್ಚು ಸುರಕ್ಷಿತ. ಬೆಂಕಿ ಅನಾಹುತ ತಡೆ ಗುಣಮಟ್ಟವನ್ನು ಹೊಂದಿರುವ ಈ ಬೋಗಿಗಳು ಚಳಿಗಾಲ ಹಾಗೂ ಬೇಸಿಗೆಯಲ್ಲಿ ಪ್ರಯಾಣಿಕರಿಗೆ ಹಿತಾನುಭವ ನೀಡುತ್ತವೆ. ಜರ್ಮನಿ ತಂತ್ರಜ್ಞಾನ ಬಳಸಿಕೊಂಡು ನಿರ್ಮಿಸಲಾಗಿರುವ ಈ ಬೋಗಿಗಳಲ್ಲಿ ಶೇ 15ರಷ್ಟು ಹೆಚ್ಚು ಪ್ರಯಾಣಿಕರು ಪ್ರಯಾಣಿಸಬಹುದು. ಎಲ್ಎಚ್ಬಿ ಬೋಗಿಗೆ ರೂ 2.50 ಕೋಟಿ ವೆಚ್ಚ ಮಾಡಲಾಗಿದೆ~ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ನೂತನ ಬೋಗಿಗಳನ್ನು ಹೊಂದಿದ ರೈಲು ನಗರ ರೈಲು ನಿಲ್ದಾಣದಿಂದ ಶುಕ್ರವಾರ ಮೊದಲ ಪ್ರಯಾಣ ಆರಂಭಿಸಿತು. ಈ ರೈಲು ಮಂಗಳವಾರ, ಶುಕ್ರವಾರ ಹಾಗೂ ಶನಿವಾರ ಬೆಂಗಳೂರಿನಿಂದ, ಬುಧವಾರ, ಗುರುವಾರ ಹಾಗೂ ಭಾನುವಾರ ನಿಜಾಮುದ್ದೀನ್ನಿಂದ ಹೊರಡಲಿದೆ.

ರಾಜಧಾನಿ ಎಕ್ಸ್ಪ್ರೆಸ್ ರೈಲು ನಿರ್ವಹಣೆ ಹಾಗೂ ಸೇವೆಯ ಬಗ್ಗೆ ಈ ಹಿಂದೆ ದೂರುಗಳು ಕೇಳಿ ಬಂದಿದ್ದವು. ಹೊಸ ಬೋಗಿ ಅಳವಡಿಕೆಯಿಂದ ಈ ಸಮಸ್ಯೆಗಳು ಬಗೆಹರಿಯಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.