ಶನಿವಾರ, ಮೇ 28, 2022
25 °C

ರಾಜವರ್ಧನ್ ಬಂಡಿಗೆ ಮೊದಲ ಬಹುಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕೋಡಿ:  ತಾಲ್ಲೂಕಿನ ಯಕ್ಸಂಬಿಯ  ಬೀರದೇವರ ಜಾತ್ರಾ ಮಹೋತ್ಸವದ ಅಂಗವಾಗಿ ತೃತೀಯ ರಂಗ ಹಮ್ಮಿಕೊಂಡಿದ್ದ ಬಡಿಗೆ ಬಾರಕೋಲು ರಹಿತ ಅಂತರರಾಜ್ಯಮಟ್ಟದ  ಜೋಡೆತ್ತಿನ ಗಾಡಿ ಶರ್ಯತ್ತಿನಲ್ಲಿ ಪ್ರಥಮ ಸ್ಥಾನ ವಿಜೇತ ಗಾಡಿಗೆ ಶರ್ಯತ್ತು ಕಮಿಟಿ ಪ್ರಕಟಿಸಿದ್ದ 51 ಸಾವಿರ ರೂ.ಗಳ ಬಹುಮಾನವನ್ನು ಇಚಲಕರಂಜಿಯ ರಾಜವರ್ಧನ್ ಸಂಭಾಜಿರಾವ್ ನಾಯಿಕ ಅವರ ಗಾಡಿ ಪಡೆದುಕೊಂಡಿತು.ಚಿದಾನಂದ ಬಾಳು ಖೋತ  ದ್ವಿತೀಯ ಬಹುಮಾನವಾಗಿ ಘೋಷಿಸಿದ್ದ 25 ಸಾವಿರ ರೂ.ಗಳನ್ನು ಇಚಲಕರಂಜಿಯ ರಾಜವರ್ಧನ್ ನಾಯಿಕ ಅವರದ್ದೇ ಇನ್ನೊಂದು ಗಾಡಿಯ ಪಾಲಾದರೆ, ಕೈ.ಅಪ್ಪಾಸಾಬ ಮಾರುತಿ ವಾಳಕೆ ಸ್ಮರಣಾರ್ಥ ವಡಗೋಲದ ವಾಳಕಿ ಬಂಧುಗಳು ಪ್ರಾಯೋಜಿಸಿದ್ದ ತೃತೀಯ ಬಹುಮಾನ 15 ಸಾವಿರ ರೂ.ಗಳನ್ನು ಸಲಾಟಿಯ ದೀಲಿಪ ಸಂಭಾಜಿ ಪವಾರ ಅವರ ಗಾಡಿ ಗೆದ್ದುಕೊಂಡಿತು.ಯಕ್ಸಂಬಾ ಹೊರವಲಯದ ಮಲಿಕವಾಡ ಪರಿಸರದಲ್ಲಿ ನಡೆದ ಭವ್ಯ ಶರ್ಯತ್ತು ವೀಕ್ಷಿಸಲು ಕರ್ನಾಟಕ ಮತ್ತು ಮಹಾರಾಷ್ಟ್ರದ ಮೂಲೆಮೂಲೆಗಳಿಂದ ಶರ್ಯತ್ತು ರಸಿಕರ ಮಹಾಪೂರವೇ ಹರಿದುಬಂದಿತ್ತು. ದೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಸಂಚಾಲಕ ಅಮೀತ ಕೋರೆ ಶರ್ಯತ್ತಿಗೆ ಚಾಲನೆ ನೀಡಿದರು. ಶರ್ಯತ್ತಿನಲ್ಲಿ ಬಡಿಗೆ ಬಾರಕೋಲು ಗಳಿಂದ ಎತ್ತುಗಳನ್ನು ಹಿಂಸಿಸುವುದನ್ನು ನಿಷೇಧಿಸಿದ್ದ ಹಿನ್ನಲೆಯಲ್ಲಿ ಕಮಿಟಿಯು ದಾರಿಯುದ್ದಕ್ಕೂ ವಿಡಿಯೊ ಚಿತ್ರಿಕರಣ ವ್ಯವಸ್ಥೆ ಮಾಡಿತ್ತು.ಸ್ಪರ್ಧೆಯಲ್ಲಿ ಒಟ್ಟು 13 ಗಾಡಿಗಳು ಪಾಲ್ಗೂಂಡಿದ್ದವು.ಮಲಿಕವಾಡ ಹೊರವಲಯದಿಂದ ನಾಗರಾಳ ಕ್ರಾಸ್ ವರೆಗಿನ 9.5 ಕಿ.ಮೀ (ಹೋಗಿ ಬರುವ ಒಟ್ಟು ಅಂತರ) ವನ್ನು ರಾಜವರ್ಧನ ನಾಯಿಕ ಅವರ ಎತ್ತುಗಳು ಕೇವಲ 17 ನಿಮಿಷಗಳಲ್ಲಿ ಕ್ರಮಿಸಿ ಪ್ರಥಮ ಸ್ಥಾನ ಗಳಿಸುವ ಮೂಲಕ ಪ್ರೇಕ್ಷಕರು ಹುಬ್ಬೇರಿ ಸುವಂತೆ ಮಾಡಿದವು. ಅವುಗಳ ಬೆನ್ನ ಹಿಂದೆಯೇ ಬಂದ ಅವರದ್ದೇ ಇನ್ನೊಂದು ಜೋಡಿ ಎತ್ತುಗಳು 18 ನಿಮಿಷಗಳಲ್ಲಿ ಗುರಿ ತಲುಪಿದವು.ತೃತೀಯ ಸ್ಥಾನಕ್ಕಾಗಿ ರಾಯಬಾಗ ತಾಲ್ಲೂಕಿನ ಕಂಕಣವಾಡಿಯ ಮೋಹನರಾವ ದೇಸಾಯಿ ಮತ್ತು ಸಲಾಟಿಯ ದೀಲಿಪ ಪವಾರ ಅವರ ಗಾಡಿಗಳ ಮಧ್ಯೆ ನಡೆದ ತುರುಸಿನ ಸ್ಪರ್ಧೆಯಲ್ಲಿ ಸಲಾಟಿಯ ದಿಲೀಪ ಪವಾರ ಅವರ ಎತ್ತುಗಳು ಕೊನೆಘಳಿಗೆಯಲ್ಲಿ ಜಯದ ಗೆರೆ ತುಳಿದು ಮೂರನೇ ಬಹುಮಾನವನ್ನು ತಂದುಕೊಟ್ಟವು.ವಿಧಾನಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಬಹುಮಾನ ವಿತರಿಸಿದರು. ಡಿಕೆಎಸ್‌ಎಸ್‌ಕೆ ಉಪಾಧ್ಯಕ್ಷ ಅಜೀತ ದೇಸಾಯಿ, ಸಂಚಾಲಕ ಅಮೀತ ಕೋರೆ, ಎಸ್.ಎನ್.ಸಪ್ತಸಾಗರ, ತಾ.ಪಂ ಸದಸ್ಯ ಅಣ್ಣಾಸಾಹೇಬ ಅಪ್ಪಾಸಾಹೇಬ ಇಂಗಳೆ, ಬಾಳಾಸಾಬ ಪಾಟೀಲ  ಉಪಸ್ಥಿತರಿದ್ದರು.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.