ನವದೆಹಲಿ: ಸಂಸತ್ತಿನಲ್ಲಿ ಬುಧವಾರ ಮಂಡನೆ ಆಗಲಿರುವ ರೈಲ್ವೆ ಬಜೆಟ್ನಲ್ಲಿ ರಾಜ್ಯ ಬಹಳಷ್ಟು ನಿರೀಕ್ಷಿಸಿದೆ. ವೆಚ್ಚ ಹಂಚಿಕೆ ಆಧಾರದಲ್ಲಿ ರಾಜ್ಯ ಯೋಜನಾ ವೆಚ್ಚ ಭರಿಸುತ್ತಿರುವುದರಿಂದ ನಿರೀಕ್ಷೆ ಸಹಜವಾಗಿ ಹೆಚ್ಚಿದೆ. ಎಲ್ಲ ಬೇಡಿಕೆ ಮತ್ತು ಪ್ರಸ್ತಾವಗಳಿಗೆ ರೈಲ್ವೆ `ಹಸಿರು ನಿಶಾನೆ~ ತೋರದಿದ್ದರೂ ನಿರಾಸೆ ಮಾಡುವಂತೆ ಕಾಣುತ್ತಿಲ್ಲ.

ರಾಜ್ಯ ಒಂಬತ್ತು ಹೊಸ ಮಾರ್ಗಗಳಿಗೆ ಪ್ರಸ್ತಾವ ಕಳುಹಿಸಿದ್ದು, ಐದು ಮಾರ್ಗಗಳು ರೈಲ್ವೆ ಬಜೆಟ್ನಲ್ಲಿ ಘೋಷಣೆಯಾಗುವ ಸಾಧ್ಯತೆಗಳಿವೆ. 630 ಕೋಟಿ ರೂಪಾಯಿ ಮೊತ್ತದ 97 ಕಿ. ಮೀ. ಉದ್ದದ ಧಾರವಾಡ- ಬೆಳಗಾವಿ, 520 ಕೋಟಿ ವೆಚ್ಚದ 90 ಕಿ.ಮೀ. ಉದ್ದದ ಚಿಕ್ಕಬಳ್ಳಾಪುರ- ಪುಟ್ಟಪರ್ತಿ, 300 ಕೋಟಿ ವೆಚ್ಚದ 53 ಕಿ.ಮೀ. ಉದ್ದದ ಗದಗ- ಹಾವೇರಿ, 1,100 ಕೋಟಿ ವೆಚ್ಚದ 200ಕಿ.ಮೀ. ಉದ್ದದ ಗದಗ-ವಾಡಿ ಹಾಗೂ 400ಕೋಟಿ ವೆಚ್ಚದ 75 ಕಿ.ಮೀ. ಉದ್ದದ ಶ್ರೀನಿವಾಸಪುರ- ಮದನಪಲ್ಲಿ ಮಾರ್ಗಕ್ಕೆ ಒಪ್ಪಿಗೆ ದೊರೆಯುವ ಸಂಭವವಿದೆ.

ಹಿಂದಿನ ರೈಲ್ವೆ ಬಜೆಟ್ನಲ್ಲಿ ಪ್ರಕಟಿಸಲಾಗಿರುವ ಮಧ್ಯ ಕರ್ನಾಟಕದ ಮಹತ್ವದ ಯೋಜನೆಯಾದ ತುಮಕೂರು- ದಾವಣಗೆರೆ ಮತ್ತು ಕುಡುಚಿ- ಬಾಗಲಕೋಟೆ ಮಾರ್ಗಗಳ ಸಮೀಕ್ಷೆ ಕಾರ್ಯ ಅಂತಿಮ ಘಟ್ಟದಲ್ಲಿದ್ದು, ಆರು ತಿಂಗಳಲ್ಲಿ ಕೆಲಸ ಆರಂಭವಾಗಲಿದೆ. ರಾಜ್ಯ ಸರ್ಕಾರ ಭೂಮಿ ಸ್ವಾಧೀನ ಮಾಡಿ ಕೊಡುವುದರ ಮೇಲೆ ಹೊಸ ಮಾರ್ಗದ ಕಾಮಗಾರಿ ವೇಗ ನಿಂತಿದೆ. ಮತ್ತೊಂದು ಪ್ರಮುಖ ಮಾರ್ಗವಾಗಿರುವ ಹೊಸಪೇಟೆ- ವಾಸ್ಕೊ ಮಾರ್ಗದ ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ವಿಶ್ವಸನೀಯ ಮೂಲಗಳು ಹೇಳಿವೆ.

ಇಂದು ರೈಲ್ವೆ ಬಜೆಟ್

ಕೇಂದ್ರ ರೈಲ್ವೆ ಸಚಿವ ದಿನೇಶ್ ತ್ರಿವೇದಿ ಬುಧವಾರ ಮಧ್ಯಾಹ್ನ 12ಕ್ಕೆ ಲೋಕಸಭೆಯಲ್ಲಿ ರೈಲ್ವೆ ಬಜೆಟ್ ಮಂಡಿಸುವರು.

ಹೊಸ ಬಜೆಟ್ನಲ್ಲಿ 24 ಹೊಸ ರೈಲುಗಳಿಗೆ ಬೇಡಿಕೆ ಬಂದಿದ್ದು, ಬೆಂಗಳೂರು- ಅಜ್ಮೇರ್, ಬೆಂಗಳೂರು- ಮಾರಿಕುಪ್ಪಂ, ಬೀದರ್- ಸಿಕಂದರಾಬಾದ್ ಹಾಗೂ ಬೆಂಗಳೂರು- ಅರಸೀಕೆರೆ ಒಳಗೊಂಡಂತೆ 9ರಿಂದ 10 ಹೊಸ ರೈಲುಗಳು ಸಿಗಬಹುದೆಂದು ಭಾವಿಸಲಾಗಿದೆ. ಕಳೆದ ಸಲ 24 ಹೊಸ ರೈಲುಗಳನ್ನು ಪ್ರಕಟಿಸಲಾಗಿದ್ದು, 19 ರೈಲುಗಳನ್ನು ಓಡಿಸಲಾಗುತ್ತಿದೆ.

ಹೊಸ ಬಜೆಟ್ನಲ್ಲಿ 20ಕ್ಕೂ ಹೆಚ್ಚು ರೈಲ್ವೆ ಮೇಲ್ಸೇತುವೆಗಳು ರಾಜ್ಯಕ್ಕೆ ಲಭ್ಯವಾಗುವ ಸೂಚನೆಗಳಿವೆ. ಬೆಂಗಳೂರು- ಮೈಸೂರು ಜೋಡಿ ಮಾರ್ಗಕ್ಕೆ ಸಂಬಂಧಿಸಿದಂತೆ ಪ್ರಸಕ್ತ ಸಾಲಿನಲ್ಲಿ 30 ಕಿ.ಮೀ. ಕಾಮಗಾರಿ ಕೈಗೆತ್ತಿಕೊಳ್ಳುವ ಸಂಭವವಿದೆ. ಬೆಂಗಳೂರು- ರಾಮನಗರ ಮಾರ್ಗದಲ್ಲಿ 220 ಕೋಟಿ ವೆಚ್ಚದ 51ಕಿ.ಮೀ. ಕೆಲಸ ಮುಗಿದಿದೆ.

ಬೆಂಗಳೂರು-ಕೆಂಗೇರಿ ನಡುವೆ ವಿದ್ಯುದೀಕರಣ ಆಗಿದೆ. ಕೆಂಗೇರಿ- ರಾಮನಗರದವರೆಗೆ ವಿದ್ಯುದೀಕರಣ ಪ್ರಗತಿಯಲ್ಲಿದೆ. 520 ಕೋಟಿ ವೆಚ್ಚದ 91 ಕಿ,ಮೀ ಉದ್ದದ ರಾಮನಗರ-ಮೈಸೂರು ಮಾರ್ಗ ಆಗಬೇಕಿದೆ. ಇದರಲ್ಲಿ ಚನ್ನಪಟ್ಟಣ- ಶೆಟ್ಟಿಹಳ್ಳಿ 20ಕಿ.ಮೀ. ಹಾಗೂ ಮದ್ದೂರು-ಎಲಿಯೂರು 10ಕಿ.ಮೀ.ಕಾಮಗಾರಿ ಪೂರ್ಣಗೊಂಡಿದೆ.

ಕಾವೇರಿ ನದಿಗೆ ಅಡ್ಡವಾಗಿ ಎರಡು ದೊಡ್ಡ ಸೇತುವೆಗಳು ನಿರ್ಮಾಣ ಆಗಬೇಕಿದೆ. ಟಿಪ್ಪು `ಶಸ್ತ್ರಾಗಾರ~ ಸ್ಥಳಾಂತರ ಆಗಬೇಕಿದೆ. ಈ ಉದ್ದೇಶಕ್ಕೆ ಜಾಗತಿಕ ಟೆಂಡರ್ ಕರೆಯಲಾಗಿದೆ. ಈ ಜೋಡಿ ಮಾರ್ಗ 2015ರಲ್ಲಿ ಮುಗಿಯಬೇಕಿದೆ. ಅವಧಿಗೆ ಮೊದಲೇ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಮಾರ್ಗಕ್ಕೆ ಅಗತ್ಯವಿರುವ ಶೇ.90ರಷ್ಟು ಭೂಮಿಯನ್ನು ರಾಜ್ಯ ಸರ್ಕಾರ ರೈಲ್ವೆಗೆ ನೀಡಿದೆ. ಒಂದೆರಡು ಕಡೆ ಜಮೀನಿನ ಸಮಸ್ಯೆಗಳಿವೆ. ಅಂದಾಜು 800 ಕೋಟಿ ವೆಚ್ಚದ ಈ ಯೋಜನೆಯ 2/3ರಷ್ಟನ್ನು ರಾಜ್ಯ ಸರ್ಕಾರ ಭರಿಸುತ್ತಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ನೈರುತ್ಯ ರೈಲ್ವೆ ವಲಯದ ಯೋಜನೆಗಳಿಗೆ 2012- 13ನೇ ಸಾಲಿಗೆ ರಾಜ್ಯದಿಂದ 700 ಕೋಟಿ ಕೇಳಲಾಗಿದೆ. ಕಳೆದ ವರ್ಷ ರಾಜ್ಯ 259 ಕೋಟಿ ಘೋಷಣೆ ಮಾಡಿತ್ತು. ಇದರಲ್ಲಿ 116 ಕೋಟಿ ಬಿಡುಗಡೆ ಮಾಡಲಾಗಿದೆ. ರೈಲ್ವೆ 121 ಕೋಟಿ ರೂಪಾಯಿ ಖರ್ಚು ಮಾಡಿದೆ. ಉಳಿದ ಹಣವನ್ನು ಠೇವಣಿ ಮಾಡುವಂತೆ ಕೇಳಲಾಗಿದೆ. ಕಳೆದ ಬಜೆಟ್ನಲ್ಲಿ ಘೋಷಣೆ ಮಾಡಲಾದ `ಹೈಸ್ಪೀಡ್ ರೈಲ್ ಕಾರಿಡಾರ್~ ಕುರಿತು ಅಧ್ಯಯನ ನಡೆಸಲು ಪರಿಣಿತರ ಸಮಿತಿ ರಚಿಸಲಾಗಿದೆ.

`ಬಹು ಉದ್ದೇಶಿತ ಸಮುಚ್ಚಯ~ (ಮಲ್ಟಿ ಫಂಕ್ಷನಲ್ ಕಾಂಪ್ಲೆಕ್ಸ್) ಗೆ ಸಂಬಂಧಿಸಿದಂತೆ ಕೆಲ ಅಡೆತಡೆಗಳಿವೆ. ಆದರ್ಶ ಹೌಸಿಂಗ್ ಹಗರಣದ ಬಳಿಕ ರೈಲ್ವೆ ಜಾಗವನ್ನು ಗುತ್ತಿಗೆ ನೀಡುವುದಕ್ಕೆ ಪ್ರಧಾನಿ ಕಚೇರಿ ಹಿಂದೇಟು ಹಾಕುತ್ತಿದೆ. ವಾಣಿಜ್ಯ ಉದ್ದೇಶಕ್ಕೆ ಸರ್ಕಾರಿ ಭೂಮಿ ಗುತ್ತಿಗೆ ಕೊಡುವುದಕ್ಕೆ ಸಂಪುಟದ ಅನುಮತಿ ಸಿಕ್ಕ ಬಳಿಕ ಎಂಎಫ್ಸಿ ಯೋಜನೆಗಳಿಗೆ ಚಾಲನೆ ಸಿಗಬಹುದು ಎಂದು ಮೂಲಗಳು ವಿವರಿಸಿವೆ.

ನೈರುತ್ಯ ವಲಯದಲ್ಲಿ ರೈಲುಗಳಿಗೆ `ಅಪಘಾತ ತಡೆ ಉಪಕರಣ~ಗಳನ್ನು ಅಳವಡಿಸುವ ಕಾರ್ಯ ಹಂತಹಂತವಾಗಿ ನಡೆಯಲಿದೆ. ರೈಲ್ವೆ ಸುರಕ್ಷತೆ ಕುರಿತು ಡಾ.ಅನಿಲ್ ಕಾಕೋತ್ಕರ್ ಮತ್ತು ರೈಲ್ವೆ ಆಧುನೀಕರಣ ಕುರಿತು ಸ್ಯಾಂ ಪಿತ್ರೋಡ ಸಲ್ಲಿಸಿರುವ ವರದಿ ಪರಿಶೀಲನೆಯಲ್ಲಿದೆ. ಈ ಬಗ್ಗೆ ಬಜೆಟ್ನಲ್ಲಿ ಪ್ರಸ್ತಾಪ ಇರಬಹುದು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.