ಸೋಮವಾರ, ಮಾರ್ಚ್ 27, 2023
24 °C

ರಾಜ್ಯದಿಂದ ರಾಜ್ಯಸಭೆಗೆ ಹೇಮಾಮಾಲಿನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದಿಂದ ರಾಜ್ಯಸಭೆಗೆ ಹೇಮಾಮಾಲಿನಿ

ನವದೆಹಲಿ: ಬಾಲಿವುಡ್ ನ ಒಂದು ಕಾಲದ ‘ಡ್ರೀಮ್ ಗರ್ಲ್’ ಹೇಮಾಮಾಲಿನಿ ಕರ್ನಾಟಕದಿಂದ ರಾಜ್ಯಸಭೆಗೆ ಸ್ಪರ್ಧಿಸಲಿದ್ದಾರೆ. ಶುಕ್ರವಾರ ಬೆಳಿಗ್ಗೆ ನಡೆದ ಅನಿರೀಕ್ಷಿತ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಹೇಮಾ ಮಾಲಿನಿ ಹೆಸರನ್ನು ಅಂತಿಮಗೊಳಿಸಿತು. ಸಮಿತಿಯ ತೀರ್ಮಾನವನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ಅನಂತ ಕುಮಾರ್ ಅನಂತರ ಪ್ರಕಟಿಸಿದರು.63ರ ಹರೆಯದ ಹೇಮಾ ಮಾಲಿನಿ ಆಯ್ಕೆ ಬಿಜೆಪಿ ಗುಂಪುಗಾರಿಕೆಗೆ ಮತ್ತೊಂದು ನಿದರ್ಶನವಾಗಿದ್ದು ವರಿಷ್ಠರ ಈ ತೀರ್ಮಾನದಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತೀವ್ರ ಅಸಮಾಧಾನಗೊಂಡಿದ್ದಾರೆ. ಇದು ಅವರಿಗೆ ಎಚ್ಚರಿಕೆ ಗಂಟೆ ಎಂದು ಆಪ್ತ ಮೂಲಗಳು ಸ್ಪಷ್ಟಪಡಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.