ಭಾನುವಾರ, ಏಪ್ರಿಲ್ 11, 2021
32 °C

ರಾಜ್ಯಮಟ್ಟದ ವೀರಗಾಸೆ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿರಿಗೆರೆ (ಚಿತ್ರದುರ್ಗ ಜಿಲ್ಲೆ): ಪ್ರದರ್ಶನ ಕಲೆಯಾದ ವೀರಗಾಸೆಯ ಉಳಿವು ಮತ್ತು ಬೆಳವಣಿಗೆಗಾಗಿ ತರಳಬಾಳು ಜಗದ್ಗುರು ಬೃಹನ್ಮಠದ ಅಣ್ಣನ ಬಳಗವು ಕಳೆದ 25 ವರ್ಷಗಳಿಂದ ವೀರಗಾಸೆ ಸ್ಪರ್ಧೆಯನ್ನು ನಡೆಸಿಕೊಂಡು ಬರುತ್ತಿದ್ದು, ಈ ಬಾರಿಯೂ ಏಪ್ರಿಲ್ 11ರ ಸೋಮವಾರ ಸಿರಿಗೆರೆಯಲ್ಲಿ ರಾಜ್ಯಮಟ್ಟದ ವೀರಗಾಸೆ ಸ್ಪರ್ಧೆ ಏರ್ಪಡಿಸಲಾಗಿದೆ.ಆಸಕ್ತ ತಂಡವು ಉಚಿತವಾಗಿ ತಮ್ಮ ಹೆಸರನ್ನು ಏಪ್ರಿಲ್ 9ರೊಳಗೆ ನೋಂದಾಯಿಸಿಕೊಳ್ಳಬಹುದು. ಪ್ರತಿ ತಂಡದಲ್ಲಿ 12 ಕಲಾವಿದರಿಗೆ ಅವಕಾಶವಿರುತ್ತದೆ. ಉಚಿತ ಊಟ, ವಸತಿ ಸೌಲಭ್ಯ ಹಾಗೂ ಎರಡೂ ಕಡೆಯ ಪ್ರಯಾಣ ವೆಚ್ಚ ನೀಡಲಾಗುವುದು. ಸ್ಪರ್ಧೆಯನ್ನು ಹಿರಿಯ ಮತ್ತು ಕಿರಿಯ ವಿಭಾಗಗಳಲ್ಲಿ ನಡೆಸಿ ಪ್ರತ್ಯೇಕ 3 ಬಹುಮಾನಗಳನ್ನು ವೇಷಭೂಷಣ, ವಾದ್ಯ, ಒಡಪು ಸಾಹಿತ್ಯ, ಅಭಿನಯ ಆಧರಿಸಿ ನೀಡಲಾಗುವುದು.ಹೆಚ್ಚಿನ ಮಾಹಿತಿಗೆ ಜಿ.ಎಸ್. ಶಿವಕುಮಾರ್, ಕಾರ್ಯದರ್ಶಿ, ಅಣ್ಣನ ಬಳಗ, ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ - 577 541 ಚಿತ್ರದುರ್ಗ ತಾಲ್ಲೂಕು ಮತ್ತು ಜಿಲ್ಲೆ. ದೂರವಾಣಿ - 9986430496 ಇಲ್ಲಿಗೆ ಸಂಪರ್ಕಿಸಬಹುದಾಗಿದೆ ಎಂದು ಬೃಹನ್ಮಠದ ಪ್ರಕಟಣೆ ತಿಳಿಸಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.