ಕುಕನೂರು: ಸತತ ಮತ್ತು ಕಠಿಣ ಪರಿಶ್ರಮದಿಂದ ಮಾತ್ರ ಅತ್ಯುತ್ತಮ ಕ್ರೀಡಾಪಟುಗಳು ಆಗಲು ಸಾಧ್ಯ ಎಂದು ಜಿಲ್ಲಾ ಸೆಷನ್ಸ್ ನ್ಯಾಯಾಧೀಶರಾದ ಸಿ.ಎಸ್.ಮಾಳಗಿ ಹೇಳಿದರು. ಇಲ್ಲಿಯ ಕನ್ನಡ ಕ್ರೀಡೆ ಮತ್ತು ಆರೋಗ್ಯ ಸಂಸ್ಥೆ (ಕುಶ್)ಯ ಆಶ್ರಯದಲ್ಲಿ ಮೆಹಬೂಬ ಪಾಷಾ ಭಾನಾಪುರ ಅವರ ಪ್ರಾಯೋಜಕತ್ವದಲ್ಲಿ ಭಾನುವಾರ ಹಮ್ಮಿಕೊಂಡ 3ನೇ ವರ್ಷದ ರಾಜ್ಯ ಮಟ್ಟದ ಮ್ಯಾರಾಥಾನ್ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.

ಎಲ್ಲ ಭಾಗ್ಯಗಳಿಗಿಂತ ಆರೋಗ್ಯಭಾಗ್ಯ ಅತ್ಯಮೂಲ್ಯವಾದ ಎನ್ನುವ ಸಂಗತಿಯನ್ನು ಯುವಕರು ಅರಿತುಕೊಳ್ಳಬೇಕಾದ ಅವಶ್ಯಕತೆ ಇದೆ. ಕ್ರೀಡೆಯ ಮಹತ್ವದ ಸಂದೇಶವನ್ನು ಸಾರುವ ದಿಸೆಯಲ್ಲಿ ವಿದೇಶದಲ್ಲಿ ಉದ್ಯೋಗದಲ್ಲಿರುವ ಮೆಹಬೂಬ ಪಾಷಾ ಪ್ರಜ್ಞಾವಂತ ಯುವಕರಿಗೆ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದರು.

ವಿಧಾನ ಪರಿಷತ್ ಸದಸ್ಯ ಹಾಲಪ್ಪ ಆಚಾರ್, ಜಿಲ್ಲಾ ತ್ವರಿತ ನ್ಯಾಯಾಲಯದ ನ್ಯಾಯಾಧೀಶ ಎಲ್.ಬಿ.ಜಂಭಗಿ, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಟಿ.ಎಲ್. ಇನಾಮತಿ, ವೆಂಕಟೇಶ ಮಾಲಗಿತ್ತಿ, ಸಂಧ್ಯಾ ಮಾದಿನೂರ, ತಾ.ಪಂ. ಮಾಜಿ ಸದಸ್ಯ ಪ್ರಭಾಕರ ಆಚಾರ್, ದ್ಯಾಮಣ್ಣ ಜಮಖಂಡಿ, ಪಿ.ಎಸ್.ಐ ಸೋಮಶೇಖರ್ ಜುಟ್ಟಲ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಎಸ್. ಸಿ.ಹಿರೇಮಠ, ಡಾ.ನರಸಿಂಗಪ್ಪ ಉಪಸ್ಥಿತರಿದ್ದರು. ಕೊಪ್ಪಳ, ಬಳ್ಳಾರಿ, ರಾಯಚೂರು, ಬಾಗಲಕೋಟೆ, ಗದಗ, ಧಾರವಾಡ, ಹಾವೇರಿ ಜಿಲ್ಲೆಗಳಿಂದ ಸುಮಾರು 500 ಕ್ರೀಡಾಪಟುಗಳು ಮ್ಯಾರಥಾನ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.