ಶುಕ್ರವಾರ, ಜೂನ್ 25, 2021
27 °C
ಗೃಹ ಮಂತ್ರಿ ಮಗನಿಗೆ ಸದಸ್ಯ ಸ್ಥಾನ

ರಾಜ್ಯ ವನ್ಯಜೀವಿ ಮಂಡಳಿ ರಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ರಾಜ್ಯ ವನ್ಯಜೀವಿ ಮಂಡಳಿಯನ್ನು ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅರಣ್ಯ ಸಚಿವ ಬಿ. ರಮಾನಾಥ ರೈ ಅವರು ಮಂಡಳಿಯ ಉಪಾಧ್ಯಕ್ಷರಾಗಿರುತ್ತಾರೆ.ಚಾಮರಾಜನಗರ ಜಿಲ್ಲೆಯ ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್‌ನ ಅಧ್ಯಕ್ಷ ಜಿ. ಮಲ್ಲೇಶಪ್ಪ, ದಕ್ಷಿಣ ಕನ್ನಡದ ನಿಸರ್ಗ ಅಪೇಕ್ಷಾ ಸಮಿತಿಯ ಪ್ರಧಾನ ಕಾರ್ಯದರ್ಶಿ ನೀರಜ್‌ ನಿರ್ಮಲ್‌, ಮೈಸೂರಿನ ಪ್ರಕೃತಿ ಸಂರಕ್ಷಣಾ ಪ್ರತಿಷ್ಠಾನದ ಡಾ.ಎಂ.ಡಿ. ಮಧುಸೂದನ್‌ ಅವರು ಎನ್‌ಜಿಒ ಸದಸ್ಯರಾಗಿರುತ್ತಾರೆ.ಹಿರಿಯ ಪರಿಸರವಾದಿಗಳಾದ ಅಜಯ್‌ ಎ. ದೇಸಾಯಿ, ಸಂಜಯ್‌ ಗುಬ್ಬಿ, ಎಂ.ಕೆ. ಭಾಸ್ಕರ ರಾವ್‌, ಶರತ್‌ ಚಂಪತಿ, ಡಾ.ಎನ್‌.ಆರ್‌. ಸೂರ್ಯ, ಪಿ.ಎಂ. ಸುಬ್ರು, ರಾಣಾ ಜಾರ್ಜ್‌ (ಗೃಹ ಸಚಿವ ಕೆ.ಜೆ.ಜಾರ್ಜ್‌ ಪುತ್ರ), ಜೋಸೆಫ್‌ ಹೂವರ್‌, ಡಾ.ಸಿ. ಮಾದೇಗೌಡ, ಡಾ.ಎನ್‌.ಸಿ. ಶಿವಪ್ರಕಾಶ್‌ ಅವರೂ ಮಂಡಳಿಯ ಸದಸ್ಯರಾಗಿರುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.