ರಾಜ್ಯ ಸರ್ಕಾರದ ಅವಧಿ ಅನಿಶ್ಚಿತ
ಶಿರಾ: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ರಾಜ್ಯಕ್ಕೆ ಭೇಟಿ ನೀಡಿ ಬರ ಅಧ್ಯಯನ ನಡೆಸಿದ್ದರೂ; ಇದೂವರೆಗೂ ಪರಿಹಾರ ಹಣ ಬಿಡುಗಡೆಯಾಗಿಲ್ಲ ಎಂದು ಬಿಎಸ್ಆರ್ ಪಕ್ಷದ ಸ್ಥಾಪಕ ಬಿ.ಶ್ರೀರಾಮುಲು ಟೀಕಿಸಿದರು.
ಪಾದಯಾತ್ರೆ ಮೂಲಕ ತಾಲ್ಲೂಕು ಪ್ರವೇಶಿಸಿದ ಅವರು, ತಾವರೇಕೆರೆ ಕಾರ್ಯಕರ್ತರ ಮನೆಯಲ್ಲಿ ಮಾತನಾಡಿ, ಕೇವಲ ಪಕ್ಷದ ಸಂಘಟನೆಗೆ ಒತ್ತು ನೀಡುತ್ತಿರುವುದು ರಾಜ್ಯದ ರೈತರಿಗೆ ಮಾಡಿರುವ ಅನ್ಯಾಯ. ಮಳೆ ಇಲ್ಲದೆ ಮುಗಿಲು ನೋಡುತ್ತಿರುವ ರೈತನಿಗೆ ಕನಿಷ್ಠ ಸೌಜನ್ಯ ತೋರಿಸದಿರುವುದು ದುರದೃಷ್ಟಕರ ಎಂದರು.
ರಾಜ್ಯದ ಮುಖ್ಯಮಂತ್ರಿ ಸರ್ವಪಕ್ಷಗಳ ನಿಯೋಗದೊಂದಿಗೆ ತೆರಳಿ, ಕೇಂದ್ರಕ್ಕೆ ಬರ ಕುರಿತು ಸಮಗ್ರ ಅಧ್ಯಯನ ಮಾಹಿತಿ ನೀಡಿ ಪರಿಹಾರ ಕೋರಿದ್ದಾರೆ. ಆದರೆ ಪಕ್ಕದ ಆಂಧ್ರಕ್ಕೆ ಪೂರ್ಣ ಪ್ರಮಾಣದ ಪರಿಹಾರ ನೀಡಿ, ನಮ್ಮ ರಾಜ್ಯಕ್ಕೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.
ಬೆಂಗಳೂರು ತಲುಪುವ ವೇಳೆಗೆ ರಾಜ್ಯ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವುದು ಅನಿಶ್ಚಿತ. ಏಳು ಜಿಲ್ಲೆಗಳಲ್ಲಿಯೂ ಬಿಎಸ್ಆರ್ ಪಕ್ಷಕ್ಕೆ ಪಕ್ಷಾತೀತವಾಗಿ ಬೆಂಬಲ ದೊರೆತಿದೆ ಎಂದರು.
ಕಂಪ್ಲಿ ಶಾಸಕ ಸುರೇಶ್ಬಾಬು ಸೇರಿದಂತೆ ಕಾರ್ಯಕರ್ತರು ಜೊತೆಗಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.