ರಾಮದುರ್ಗ: ವೈಷಮ್ಯದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನೂರಾರು ಜನರು ಪರಸ್ಪರ ಕಲ್ಲು ತೂರಾಟ ನಡೆಸಿದ್ದರಿಂದ 12 ಜನರಿಗೆ ತೀವ್ರ ಗಾಯಗಳಾದ ಘಟನೆ ತಾಲೂಕಿನ ಗೊಣ್ಣಾಗರದಲ್ಲಿ ಶುಕ್ರವಾರ ನಡೆದಿದೆ.

ಗಾಣಿಗ ಸಮಾಜ ಮತ್ತು ಶೆಟ್ಟರ್, ಮರಾಠ, ತಳವಾರ ಸಮಾಜದ ಮಧ್ಯೆ ಎರಡು ವರ್ಷಗಳಿಂದ ಜಾತಿ ವೈಷಮ್ಯ ತಲೆದೋರಿತ್ತು. ಇಪ್ಪತ್ತು ದಿನಗಳ ಹಿಂದೆಯೇ ಪೊಲೀಸರು ಗ್ರಾಮದಲ್ಲಿ ಶಾಂತಿ ಸಭೆ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದ್ದರು.

ಆದರೆ ಗುರುವಾರ ಸಂಜೆ ಯುವತಿಯೊಬ್ಬಳು ಬಟ್ಟೆ ತೊಳೆಯಲು ಹೋದಾಗ ಮತ್ತೊಂದು ಗುಂಪಿನ ಯುವಕನೊಬ್ಬ ಚುಡಾಯಿಸಿದ್ದ. ಹಿರಿಯರು ಪಂಚಾಯ್ತಿ ನಡೆಸಿ ಯಾರೂ ಈ ವಿಷಯದಲ್ಲಿ ತಂಟೆ ತೆಗೆಯಬಾರದು ಎಂದು ತಿಳಿವಳಿಕೆ ನೀಡಿದ್ದರು. ಕುಡುಕನೊಬ್ಬ ರಾತ್ರಿ ಇನ್ನೊಂದು ಕಾಲೊನಿಗೆ ಹೋಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೂಗಾಡಿದ್ದರಿಂದ ಎರಡು ಗುಂಪುಗಳ ಮಧ್ಯೆ ಘರ್ಷಣೆಗೆ ಕಾರಣವಾಗಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ `ಪ್ರಜಾವಾಣಿ~ಗೆ ಗ್ರಾಮಸ್ಥರು ತಿಳಿಸಿದರು. ಒಂದು ಗುಂಪು ಕಲ್ಲು, ಬಡಿಗೆಯೊಂದಿಗೆ ಹಲ್ಲೆಗೆ ಮುಂದಾಗಿದ್ದರೆ ಮತ್ತೊಂದು ಗುಂಪು ಕಲ್ಲು ತೂರಾಟದಲ್ಲಿ ತೊಡಗಿತ್ತು.

ಬೆಳಿಗ್ಗೆ 10.30 ರಿಂದ ಒಂದು ತಾಸು ರಾಮದುರ್ಗ-ಕೊಣ್ಣೂರು ರಸ್ತೆಯಲ್ಲಿ ಸಂಚಾರವೂ ಸ್ಥಗಿತಗೊಂಡಿತ್ತು. ಉಭಯ ಬಣಗಳ ಸುಮಾರು 12 ಜನರಿಗೆ ಕಲ್ಲಿನೇಟಿನಿಂದ ಗಾಯಗಳಾಗಿದ್ದು, ಒಬ್ಬನ ಸ್ಥಿತಿ ಚಿಂತಾಜನಕ ವಾಗಿದ್ದು, ಆತನನ್ನು ಹುಬ್ಬಳ್ಳಿಯ ಕಿಮ್ಸ ಆಸ್ಪತ್ರೆಗೆ ಕಳಿಸಲಾಗಿದೆ. ಉಳಿದವರಿಗೆ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಸಕಾಲಕ್ಕೆ ಪೊಲೀಸರು ಬಂದಿದ್ದರಿಂದ ಕಲ್ಲು ತೂರಾಟ ನಿಂತಿದೆಯಾದರೂ ಗ್ರಾಮದಲ್ಲಿ ಇನ್ನೂ ಬಿಗುವಿನ ವಾತಾವರಣವಿದೆ. ಬೈಲಹೊಂಗಲದ ಡಿವೈಎಸ್ಪಿ ಶಿವಕುಮಾರ ಪಾಟೀಲ, ಸಿಪಿಐ ಪ್ರಕಾಶ ನಾಯ್ಡು, ಸಬ್ ಇನ್ಸ್ಪೆಕ್ಟರ್ ಸಂಜೀವ ಬಳೆಗಾರ ಗ್ರಾಮದಲ್ಲಿ ಬೀಡುಬಿಟ್ಟಿದ್ದಾರೆ. ಈ ಸಂಬಂಧ ಯಾರನ್ನೂ ಬಂಧಿಸಿಲ್ಲ. ರಾಮದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.