ಗುರುವಾರ , ಜೂಲೈ 2, 2020
22 °C

ರಾಮದೇವ್ ಬೆಂಬಲಿಸಿ ಸತ್ಯಾಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮದೇವ್ ಬೆಂಬಲಿಸಿ ಸತ್ಯಾಗ್ರಹ

ಬೆಂಗಳೂರು: ಎರಡು ತಿಂಗಳ ಹಿಂದೆ ಅಣ್ಣಾ ಹಜಾರೆ ಅವರು ದೆಹಲಿಯ ಜಂತರ್-ಮಂತರ್‌ನಲ್ಲಿ ನಡೆಸಿದ ಭ್ರಷ್ಟಾಚಾರ ವಿರೋಧಿ ಉಪವಾಸ ಸತ್ಯಾಗ್ರಹ ಬೆಂಬಲಿಸಿ ಹಲವಾರು ಮಂದಿ ಉಪವಾಸ ಕುಳಿತಿದ್ದ ನಗರದ ಶೇಷಾದ್ರಿ ರಸ್ತೆಯ ಸ್ವಾತಂತ್ರ್ಯ ಉದ್ಯಾನವನ ಶನಿವಾರ ಅಂಥದೇ ಮತ್ತೊಂದು ಕಾರ್ಯಕ್ರಮಕ್ಕೆ ವೇದಿಕೆಯಾಯಿತು.ಯೋಗ ಗುರು ಬಾಬಾ ರಾಮದೇವ್ ಅವರು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಸುತ್ತಿರುವ ಉಪ  ವಾಸಕ್ಕೆ ಬೆಂಬಲಾರ್ಥವಾಗಿ ಅವರೇ ಹುಟ್ಟುಹಾಕಿದ `ಭಾರತ ಸ್ವಾಭಿಮಾನ್ ಟ್ರಸ್ಟ್ ` ನಗರದಲ್ಲಿ ಈ ಸತ್ಯಾಗ್ರಹ ಆಯೋಜಿಸಿತ್ತು.ಬೆಳಿಗ್ಗೆ 9ಕ್ಕೆ ಅಧಿಕೃತವಾಗಿ ಆರಂಭ ವಾದ ಸತ್ಯಾಗ್ರಹಕ್ಕೆ ಆರಂಭದಲ್ಲಿ ಬೆರಳೆಣಿಕೆಯಷ್ಟು ಮಂದಿ ಆಗಮಿಸಿದ್ದರು. ಸಮಯ ಸರಿದಂತೆಲ್ಲ ಹೋರಾಟದಲ್ಲಿ ಭಾಗವಹಿಸಿಸುವವರ ಸಂಖ್ಯೆ ಹೆಚ್ಚುತ್ತಾ ಹೋಯಿತು.

`ಅನಿರ್ದಿಷ್ಟ~ ಅವಧಿಯ ವರೆಗೆ ಉಪವಾಸ ಕುಳಿತುಕೊಳ್ಳುವ ವರನ್ನು ಸಂಘಟಕರು ವೇದಿಕೆಯ ಮೇಲೆ ಕರೆದು ಕುಳ್ಳಿರಿಸಿದರು. `ನಿರ್ದಿಷ್ಟ~ ಅವಧಿಯವರೆಗೆ ಉಪವಾಸ ಇರುವವರು ವೇದಿಕೆಯ ಮುಂಭಾಗದಲ್ಲಿ ಆಸೀನ ರಾಗಿದ್ದರು. ಸಮಯ ಸರಿದಂತೆಲ್ಲ ಹಲವಾರು ಗಣ್ಯರು ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ಸೂಚಿಸಿದರು.ಈ ಸತ್ಯಾಗ್ರಹ ಭ್ರಷ್ಟಾಚಾರ ವಿರೋಧಿಸಲಿಕ್ಕೆ ಮಾತ್ರ ಸೀಮಿತ ವಾಗಿರಲಿಲ್ಲ. ಜೊತೆಗೆ ಕನ್ನಡ ಭಾಷೆಯ ಮಹತ್ವದ ಕುರಿತ ಮಾತುಗಳು, ಆಧ್ಯಾ ತ್ಮಿಕ ಹಾಡುಗಳು, ಸಂಸ್ಕೃತ ಶ್ಲೋಕಗಳೂ ಕೇಳಿ ಬಂದುವು. ರಾಮ್‌ದೇವ್ ಅವರ ಯೋಗದಿಂದ ಪ್ರಭಾವಿತರಾಗಿದ್ದ ಮಹಿಳೆಯರೂ ಉಪವಾಸದಲ್ಲಿ ಭಾಗವಹಿಸಿ ಭ್ರಷ್ಟಾಚಾರ ವಿರೋಧಿ ಘೋಷಣೆಗಳಿಗೆ `ಜೈ~ ಎನ್ನುತ್ತಿದ್ದರು.ವಿಧಾನಸಭೆಯ ಮಾಜಿ ಸ್ಪೀಕರ್ ಕೃಷ್ಣ ಮಾತನಾಡಿ, `ಭ್ರಷ್ಟಾಚಾರವು ವಿದ್ಯಾ ವಂತರಿಂದಲೇ ಹೆಚ್ಚುತ್ತಿದೆ. ಪ್ರತಿವರ್ಷ ಸುಮಾರು 20 ಸಾವಿರ ಕೋಟಿ ರೂಪಾಯಿ ಕಪ್ಪುಹಣ ಸೃಷ್ಟಿಯಾಗುತ್ತಿದೆ. ಪ್ರಧಾನಮಂತ್ರಿಯನ್ನು ಜನರೇ ನೇರವಾಗಿ ಚುನಾಯಿಸುವ ವ್ಯವಸ್ಥೆ ಜಾರಿಗೆ ಬರಬೇಕು.

 

ಹಿಂದೆ ಕೆಲವೇ ಮಂದಿ ಭ್ರಷ್ಟ ರಾಜಕಾರಣಿಗಳಿದ್ದರು. ಇಂದು ಯಾರು ಭ್ರಷ್ಟರಲ್ಲ ಎಂದು ಹುಡುಕಬೇಕಾಗಿದೆ. ಕೊಳ್ಳೆ ಹೊಡೆಯಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಅಧಿಕಾರಿಗಳು ಸ್ವಾಮೀಜಿಗಳ ಕಾಲು ಹಿಡಿಯುವ ಬದಲು, ರಾಜಕಾರಣಿಗಳ ಕಾಲು ಹಿಡಿಯುತ್ತಿದ್ದಾರೆ~ ಎಂದು ವ್ಯಂಗ್ಯವಾಡಿದರು.ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರು ಮಾತ ನಾಡಿ, `ಜನರು ಭ್ರಷ್ಟಾಚಾರದ ವಿರುದ್ಧ ಸಿಡಿದೇಳಬೇಕು. ನಿದ್ದೆಯಿಂದ ಎಚ್ಚೆತ್ತು ಕೊಳ್ಳಬೇಕು~ ಎಂದು ಹೇಳಿದರಲ್ಲದೇ ಕುವೆಂಪು ಅವರ ಪ್ರಸಿದ್ಧ `ಆನಂದಮಯ ಈ ಕವಿ ಹೃದಯ~ ಗೀತೆ ಹಾಡಿದರು.ಆರ್‌ಎಸ್‌ಎಸ್ ಮುಖಂಡ ಮೈ.ಚ.ಜಯದೇವ, ವಿಧಾನಪರಿಷತ್ ಸದಸ್ಯ ಪ್ರೊ.ಪಿ.ವಿ.ಕೃಷ್ಣಭಟ್, ವಿ. ನಾಗರಾಜ್, ಕವಿಗಳಾದ ಎಚ್.ಎಸ್.ವೆಂಕಟೇಶಮೂರ್ತಿ, ಬಿ.ಆರ್. ಲಕ್ಷ್ಮಣರಾವ್, ಎಂ.ಎನ್.ವ್ಯಾಸರಾವ್, ಧಾರವಾಡದ ಬಸವಾನಂದ ಸ್ವಾಮೀಜಿ, ಬಿ.ಆರ್.ಛಾಯಾ ದಂಪತಿ, ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ ರವಿಕುಮಾರ್, ಚಕ್ರವರ್ತಿ ಸೂಲಿಬೆಲೆ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.ಹಿರಿಯ ಕವಿಗಳಾದ ಡಾ.ಜಿ.ಎಸ್.ಶಿವರುದ್ರಪ್ಪ, ಪ್ರೊ.ಕೆ.ಎಸ್.ನಿಸಾರ್ ಅಹಮದ್ ಅವರು ಬೆಂಬಲ ಪತ್ರ ಕಳುಹಿಸಿದ್ದರು. ಆಮರಣಾಂತ ಉಪವಾ ಸದಲ್ಲಿ 150ಕ್ಕೂ ಅಧಿಕ ಮಂದಿ ಭಾಗವ ಹಿಸಿದ್ದರು. ಉಳಿದವರು ಭಾನುವಾರ ಬೆಳಿಗ್ಗೆ ಭಾಗವಹಿಸಲಿದ್ದಾರೆ ಎಂದು ಸಂಘಟಕರೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.