ಸೋಮವಾರ, ಜನವರಿ 27, 2020
21 °C

ರಾಮನಗರದಲ್ಲಿ ಒಡೆಯರ್‌ ನೆನಪು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಮೈಸೂರು ಸಂಸ್ಥಾನದ ‘ಮಹಾರಾಜ’ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಅವರು 1991ರಲ್ಲಿ  ನಡೆದ 10ನೇ ಲೋಕಸಭೆ ಚುನಾ ವಣೆಯಲ್ಲಿ ರಾಮನಗರದ ಹಳೆ ಬಸ್ ನಿಲ್ದಾಣದಲ್ಲಿ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಮಾಡಿದ್ದರು. ಬೆಂಗಳೂರು ಗ್ರಾಮಾಂತರ ಲೋಕ ಸಭಾ ಕ್ಷೇತ್ರ ಆಗ 'ಕನಕಪುರ ಲೋಕ ಸಭಾ ಕ್ಷೇತ್ರ'ವಾಗಿತ್ತು.

1991ರಲ್ಲಿ ನಡೆದ ಕನಕಪುರ ಲೋಕಸಭಾ ಕ್ಷೇತ್ರದ ಚುನಾವಣೆಗೆ ಬಿಜೆಪಿಯಿಂದ ರಾಮ ಚಂದ್ರೇಗೌಡ, ಕಾಂಗ್ರೆಸ್‌ನಿಂದ ಚಂದ್ರ ಶೇಖರಮೂರ್ತಿ, ಜನತಾ ದಳದಿಂದ ಪಿ.ಜಿ.ಆರ್. ಸಿಂಧ್ಯಾ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಪ್ರಚಾರ ಮಾಡಿದ್ದರು ಎಂದು ಬಿಜೆಪಿ ನಗರಸಭಾ ಸದಸ್ಯ ಬಿ. ನಾಗೇಶ್ ನೆನಪಿಸಿಕೊಂಡರು.ಆದರೆ ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋತು ಕಾಂಗ್ರೆಸ್‌ನ ಅಭ್ಯರ್ಥಿ ಗೆದ್ದರು. ಒಡೆಯರ್ ಅವರ ಪ್ರಚಾರದ ಸಲುವಾಗಿ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ 13,900 ಮತ ಗಳು ಬಂದವು ಎಂದು ಅವರು ವಿವ ರಿಸಿದರು. 

ಭವ್ಯ ಸ್ವಾಗತ ನೀಡಲಾಗಿತ್ತು:  ಒಡೆ  ಯರ್ ಅವರು ಚುನಾವಣಾ ಪ್ರಚಾರಕ್ಕೆ ಕನಕಪುರದಿಂದ ರಾಮನಗರಕ್ಕೆ ಬಂದಿ ದ್ದರು. ಮಾರ್ಗ ಮಧ್ಯದ ಗ್ರಾಮಗಳಲ್ಲಿ ಜನರು 'ರಾಜನ ಮಗ' ಬರುತ್ತಿದ್ದಾರೆ ಎಂದು ಭವ್ಯ ಸ್ವಾಗತವನ್ನೇ ನೀಡಿದ್ದರು. ಒಡೆಯರ್‌ ಅವರನ್ನು ನೋಡಿ ಪುಳಕಿತರಾಗಿದ್ದರು, ಆರತಿ ಬೆಳಗುವ ಮೂಲಕ ಆರಾಧಿಸಿದ್ದರು ಎಂದು ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಶಿವ ಮಾದು ಸ್ಮರಿಸಿದರು.ಒಡೆಯರ್ ಅವರು 35ರಿಂದ 40 ನಿಮಿಷ ಭಾಷಣ ಮಾಡಿದರು. ಅವರ ಜತೆ ಸಂಸದ ಅನಂತಕುಮಾರ್ ಕೂಡಾ ಇದ್ದರು. ಒಡೆಯರ್ ಅವರಿಗೆ ಬೃಹತ್‌ ರೇಷ್ಮೆ ಹಾರ ಹಾಕಿ ಅಭಿನಂದಿಸ ಲಾಗಿತ್ತು.ಕಂಬನಿ ಮಿಡಿದ ಜನತೆ

ರಾಮನಗರ:
  ಯದುವಂಶದ ಕೊನೆಯ ಕುಡಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಪಾರ್ಥಿವ ಶರೀರ ಬೆಂಗಳೂರು– ಮೈಸೂರು ಹೆದ್ದಾರಿ ಯಲ್ಲಿ ಮಂಗಳವಾರ ರಾತ್ರಿ ಸಾಗು ವಾಗ ಜಿಲ್ಲೆಯ ಗಡಿಭಾಗ ದಿಂದಲೂ ರಸ್ತೆಯ ಎರಡೂ ಬದಿ ಯಲ್ಲಿ ನಿಂತಿದ್ದ ಜನಸಾಗರ ಒಡೆಯರ್‌ ಅವರ ಅಂತಿಮ ದರ್ಶನ ಪಡೆಯಿತು.ರಾಮನಗರ ನಗರಸಭೆಯ ವ್ಯಾಪ್ತಿಗೆ ಒಡೆಯರ್‌ ಅವರ ಪಾರ್ಥಿವ ಶರೀರದ ಆಗಮಿಸಿದಾಗ ನಗರದ ಸಹಸ್ರಾರು ಜನ ರಾತ್ರಿ 12 ಗಂಟೆಯಾದರೂ ರಸ್ತೆಯ ಇಕ್ಕೆಲಗಳಲ್ಲಿ ಸರತಿಯಲ್ಲಿ ನಿಂತು ದರ್ಶನ ಪಡೆದು, ನಮನ ಸಲ್ಲಿಸಿದರು. ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿ ಕಾರಿ ಡಾ.ಡಿ.ಎಸ್‌.ವಿಶ್ವನಾಥ್‌, ಎಸ್ಪಿ ಅನುಪಮ್‌ ಅಗ್ರವಾಲ್‌, ಎ.ಸಿ ಡಾ.ಸ್ನೇಹಾ, ತಹಶೀಲ್ದಾರ್‌ ಹನು ಮಂತರಾಯಪ್ಪ, ವಾರ್ತಾಧಿಕಾರಿ ಹಮೀದ್‌ ಖಾನ್‌ ಮತಿತರರು ನಮನ ಸಲ್ಲಿಸಿದರು. ನಗರದ ಮಧ್ಯಭಾಗದ ಐಜೂರು ವೃತ್ತ, ಅರ್ಚಕರಹಳ್ಳಿ, ಜಾನಪದ ಲೋಕದ ಹತ್ತಿರವೂ ಸಾರ್ವಜನಿಕರು ದರ್ಶನ ಪಡೆದು ಕಂಬನಿ ಮಿಡಿದರು.ಜಾನಪದ ಲೋಕದಲ್ಲಿ ಶ್ರದ್ಧಾಂಜಲಿ:

ಜಾನಪದ ಲೋಕದಲ್ಲಿ ಬುಧವಾರ ಶ್ರದ್ಧಾಂಜಲಿ ಅರ್ಪಿಸಲಾಯಿತು. ಒಡೆ ಯರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಸಂತಾಪ ಸೂಚಿಸ ಲಾಯಿತು. ಸಾಹಿತಿ ಡಾ.ಹಿ.ಶಿ. ರಾಮ ಚಂದ್ರೇಗೌಡ, ಕರ್ನಾಟಕ ಜಾನಪದ ಪರಿಷತ್ತಿನ ರಾಜ್ಯ ಸಂಚಾಲಕ ಎಸ್. ಬಾಲಾಜಿ, ಜಾನಪದ ಲೋಕದ ಸಂಯೋಜಕ ಡಾ.ಕುರುವ ಬಸವರಾಜ್ ಪಾಲ್ಗೊಂಡಿದ್ದರು.ಕರುನಾಡ ಸೇನೆ ಶ್ರದ್ಧಾಂಜಲಿ

ಐಜೂರು ವೃತ್ತದಲ್ಲಿ ಕರುನಾಡ ಸೇನೆ ಪದಾಧಿಕಾರಿಗಳು ಶ್ರದ್ಧಾಂಜಲಿ ಅರ್ಪಿಸಿದರು. ಕರುನಾಡ ಸೇನೆಯ ರಾಜ್ಯ ಘಟಕದ ಉಪಾಧ್ಯಕ್ಷ ಎಂ. ಜಗದೀಶ್, ಡಿಎಸ್ ಎಸ್ ಜಿಲ್ಲಾ ಸಂಚಾಲಕ ರಾ.ಸಿ. ದೇವರಾಜು, ಮಹಿಳಾ ಘಟಕದ ಅಧ್ಯಕ್ಷೆ ಗಾಯಿತ್ರಿ ಬಾಯಿ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷೆ ಸಹಿದಾ ಬೇಗಂ, ಮುಖಂಡರಾದ ಅಬ್ದುಲ್ಲಾ ಖಾನ್, ಕೃಷ್ಣ, ಷಡಕ್ಷರಿದೇವ, ವಿನೋದ್, ಹಬೀಬ್, ಶ್ರೀರಾಮ್ ಹತ್ವಾರ್, ಮಂಜುನಾಥ್ ಅಂಧೆ ಇದ್ದರು.ವಿಜಯನಗರ ಯುವಕ ಸಂಘದವರೂ ಸಂತಾಪ ಸೂಚಕ ಸಭೆ ನಡೆಸಿದರು. ಸಭೆಯಲ್ಲಿ ಕಾಂಗ್ರೆಸ್ ಮುಖಂಡ ಶಿವಲಿಂಗಯ್ಯ, ಆಂಜಿನಪ್ಪ, ರಾಮಯ್ಯ, ಕೃಷ್ಣಪ್ಪ, ಚಂದ್ರು ಇತರರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)