ರಾಮ್ಗೋಪಾಲ್ ವರ್ಮಾಗೆ ಐವತ್ತು ತುಂಬಿತು. ಹಾಗೇಂತ ಬಾಲಿವುಡ್ನವರೆಲ್ಲ ಶುಭಾಶಯಗಳನ್ನು ತಿಳಿಸಿದ್ದಾರೆ. ಆದರೆ ಈ ಸಂದೇಶಗಳನ್ನು ಸ್ವೀಕರಿಸುವ ಮನಃಸ್ಥಿತಿಯೇ ರಾಮ್ಗೋಪಾಲ್ ವರ್ಮಾಗೆ ಇದ್ದಂತಿಲ್ಲ.

ಅಭಿಶೇಕ್ ಬಚ್ಚನ್ ಈ ವರ್ಷ ಖ್ಯಾತಿ ಹಾಗೂ ಯಶಸ್ಸು ದೊರೆಯಲಿ ಎಂದು ಹಾರೈಸಿದ್ದಾರೆ. ಇದಕ್ಕೆ ಪ್ರತಿಯಾಗಿ `ಅಭಿ, ಕಳೆದ ವರ್ಷವೂ ನನ್ನ ಹುಟ್ಟು ಹಬ್ಬಕ್ಕೆ ಹೀಗೆಯೇ ಹಾರೈಸಿದ್ದೆ. ಆದರೆ ಸಂಪೂರ್ಣವಾಗಿ ಸೋತ ವರ್ಷವಾಗಿತ್ತದು.~ ಎಂದು ಪ್ರತಿಕ್ರಿಯಿಸಿದ್ದಾರೆ.

ಅಷ್ಟೇ ಅಲ್ಲ, ಸಾಮಾನ್ಯವಾಗಿ ಸಂದೇಶ ನೀಡಿರುವ ಎಲ್ಲರಿಗೂ ನಿಮ್ಮ ಸಂದೇಶಗಳನ್ನು ನೀವೇ ಇರಿಸಿಕೊಳ್ಳಿ. ಈ ಸಂದೇಶಗಳಿಂದ ಬದುಕು ಬದಲಾಗದು~ ಎಂದೂ ಕುಟುಕಿದ್ದಾರೆ.
ಕರಣ್ ಜೋಹರ್ ರಾಮ್ ಅಂಕಲ್ಗೆ ಸಾಕಷ್ಟು ಪ್ರೀತಿ ಹಾಗೂ ನೆಮ್ಮದಿ ದೊರೆಯಲಿ ಶುಭ ಹಾರೈಸಿದ್ದಾರೆ. ಕರಣ್, ನನಗೆ ಸ್ವಲ್ಪ `ಘಂ~ ಅಂತೂ ಇದ್ದೇ ಇದೆ. ಈ ವರ್ಷವಾದರೂ ಖುಷಿ ಸಿಗುವ ನಿರೀಕ್ಷೆ ಇದೆ~ ಎಂದಿದ್ದಾರೆ.

ನಿರ್ದೇಶಕ ಮಧುರ್ ಭಂಡಾರ್ಕರ್ ಈ ವರ್ಷ ಆರ್ಜಿವಿ (ರಾಮ್ಗೋಪಾಲ್ ವರ್ಮಾ)ಗೆ ಯಶಸ್ಸು ಸಿಗಲಿ ಎಂದು ಬಯಸಿದ್ದಾರೆ. ಇದಕ್ಕೂ ಕೃತಜ್ಞ ಸಲ್ಲಿಸದ ಆರ್ಜಿವಿ `ಮಧುರ್, ವ್ಯಂಗ್ಯವಾಡಲು ಇಷ್ಟು ಸಾಕು~ ಎಂದು ಹೇಳಿದ್ದಾರೆ.

ರಿತೇಶ್ ದೇಶ್ ಮುಖ್ `ಹ್ಯಾಪ್ಪಿ ಬರ್ತ್ಡೇ ಟೂ ಯೂ... ಹ್ಯಾಪ್ಪಿ ಬರ್ತ್ಡೇ ಟೂ ಯು.. ಹ್ಯಾಪ್ಪಿ ಬರ್ತ್ಡೇ ಡಿಯರ್ ಆರ್ವಿಜಿ~ (ಇದನ್ನು ಹಾಡಿನ ಧಾಟಿಯಲ್ಲಿಯೇ ಓದಿ~ ಎಂದು ಹಾರೈಸಿದ್ದಾರೆ.

ಇದಕ್ಕೂ ಸಹ `ಓಹ್, ರಿತೇಶ್ ನಾನು ಸಾವಿಗೆ ಸಮೀಪಿಸಲಿ ಎಂದು ಬಯಸುತ್ತಿರುವೆಯಲ್ಲವೇ.. ಪ್ರತಿ ವರ್ಷ ಕಳೆದಂತೆ ನಾವು ಜೀವನವನ್ನು ಕಳೆದುಕೊಳ್ಳುತ್ತೇವಲ್ಲ... ಅದನ್ನೇ ನೆನಪಿಸುತ್ತಿರುವೆಯಲ್ಲವೇ?~ ಎಂದೂ ರಾಮ್ ವಿಚಿತ್ರವಾಗಿ ಪ್ರತಿಕ್ರಿಯಿಸಿದ್ದಾರೆ.

ಶೋಲೆ ರೀಮೇಕ್ ಬೇಡ
ಶೋಲೆ ಚಿತ್ರ `ಮಾಸ್ಟರ್ ಪೀಸ್~ ಅದು ಸಾರ್ವಕಾಲಿಕ `ಹಿಟ್~ ಚಿತ್ರ. ಅದನ್ನು ಮಾತ್ರ ರೀಮೇಕ್ ಮಾಡಬೇಡಿ ಎಂದು ಗೀತರಚನಾಕಾರ ಜಾವೇದ್ ಅಕ್ತರ್ ಹೇಳಿದ್ದಾರೆ.
ನಾನೇನು ರೀಮೇಕ್ ಚಿತ್ರ ವಿರೋಧಿ ಅಲ್ಲ. ಆದರೆ ಹೊಸ ಪೀಳಿಗೆಗೆ ಶೋಲೆಯನ್ನು ರೀಮೇಕ್ ಮಾಡಬೇಡಿ ಎಂದು ಕೇಳಿಕೊಳ್ಳುತ್ತಿದ್ದೇನೆ.

ಅದು 1975ರ ಚಿತ್ರವಾದರೂ ಇಂದಿಗೂ ಅದೇ ತಾಜಾತನ ಉಳಿಸಿಕೊಂಡಿದೆ. ಗಾಡ್ಫಾದರ್ ಅಥವಾ ಗಾಂಧಿ ಚಿತ್ರವನ್ನು ಯಾರಿಗಾದರೂ ರೀಮೇಕ್ ಮಾಡಲು ಸಾಧ್ಯವೇ? ಇದೂ ಸಹ ಆ ಸಾಲಿಗೆ ಸೇರುವ ಚಿತ್ರವಾಗಿದೆ.

ಒಂದು ವೇಳೆ ರೀಮೇಕ್ ಮಾಡುವ ಮನಸ್ಸಿದ್ದರೆ, ಆ ಕಾಲದಲ್ಲಿ ತಂತ್ರಜ್ಞಾನದ ಕೊರತೆಯಿಂದಾಗಿ ಅರ್ಧಗೊಂಡಿದ್ದ, ಅಪೂರ್ಣ ಚಿತ್ರಗಳನ್ನು ಕೈಗೆತ್ತಿಕೊಳ್ಳಲಿ. ಅಥವಾ ಆರ್ಥಿಕ ಕಾರಣಗಳಿಂದ ಅಪೂರ್ಣವಾಗಿಯೇ ಉಳಿದ ಚಿತ್ರಗಳನ್ನು ಪೂರ್ಣಗೊಳಿಸುವತ್ತ ಒಲವು ತೋರಲಿ ಎಂದೂ ಜಾವೇದ್ ಅಖ್ತರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.