ರಾಯಚೂರು: ಜಿಲ್ಲೆಗೆ ಸತತ ಎರಡನೇ ವರ್ಷ ಮುಂಗಾರು ಮಳೆ ಮರೀಚಿಕೆಯಾಗುತ್ತಿದೆ. ಹಿಂದಿನ ವರ್ಷ ಕೊನೆ ಗಳಿಗೆಯಲ್ಲಿ ಅಲ್ಪಸ್ವಲ್ಪ ಮಳೆ ಬಂದಿದ್ದರಿಂದ ರೈತರು ಸಾವರಿಸಿಕೊಂಡಿದ್ದರು. ಈ ವರ್ಷದ ಮುಂಗಾರು ರೈತರ ಕೈ ಹಿಡಿಯುವ ಲಕ್ಷಣ ಕಾಣುತ್ತಿಲ್ಲ.

ಈ ವರ್ಷ ವಾಡಿಕೆ ಮಳೆ 137 ಮಿ.ಮೀ ಆಗಬೇಕು. ಆದರೆ 50 ಮಿ.ಮೀ ಮಾತ್ರ ಮಳೆ ಬಂದಿದೆ. ಶೇ 70ರಷ್ಟು ಮಳೆ ಬಿದ್ದಿಲ್ಲ. 50 ಮಿ.ಮೀ ಮಳೆಯೂ ಸಮ ಪ್ರಮಾಣದಲ್ಲಿ ಬಿದ್ದಿಲ್ಲ. ಬಿತ್ತನೆಗೂ ಸಹಕಾರಿಯಾಗಲಿಲ್ಲ ಎಂದು ರೈತ ಸಮುದಾಯ ಹೇಳುತ್ತಿದೆ.

ರೋಹಿಣಿ ಮತ್ತು ಮೃಗಶಿರ ಮಳೆ ಬಿದ್ದರೆ ಉತ್ತಮ ಬೆಳೆ ನಿರೀಕ್ಷಿಸಬಹುದು. ಅದೂ ಬರಲಿಲ್ಲ. ಹೆಸರು ಬಿತ್ತನೆ ಮಾಡಲೇ ಇಲ್ಲ. ಜಿಲ್ಲೆಯಲ್ಲಿ ಪ್ರಮುಖವಾಗಿ ಬೆಳೆಯಲಾಗುವ ಹತ್ತಿ, ತೊಗರಿ, ಸೂರ್ಯಕಾಂತಿ, ಸಜ್ಜೆ ಬಿತ್ತನೆ ಮಾಡಲೂ ಮಳೆ ಸರಿಯಾಗಿ ಆಗಿಲ್ಲ.

ಬಿತ್ತನೆ ಬೀಜ, ರಸಗೊಬ್ಬರ, ಬಿತ್ತನೆ ಕಾರ್ಯದ ಖರ್ಚು ಸೇರಿ ಪ್ರತಿ ಎಕರೆಗೆ ಸರಾಸರಿ 6 ಸಾವಿರ ವೆಚ್ಚವಾಗುತ್ತದೆ. ಮುಂಗಾರು ಮಳೆ ಭರವಸೆ ಇಟ್ಟುಕೊಂಡು ಈಗಾಗಲೇ ಸಣ್ಣ, ಅತೀ ಸಣ್ಣ, ದೊಡ್ಡ ರೈತರು ಬಿತ್ತನೆ ಬೀಜ, ರಸಗೊಬ್ಬರ ಖರೀದಿಸಿದ್ದಾರೆ. ಬಹುತೇಕ ರೈತರು ಸಾಲಸೋಲ ಮಾಡಿಯೇ ಖರೀದಿಸಿ ಇಟ್ಟುಕೊಂಡಿದ್ದಾರೆ. ಸ್ವಲ್ಪ ಮಳೆ ಬಿದ್ದರೂ ಹೊಲದಲ್ಲಿ ಬೀಜ, ರಸಗೊಬ್ಬರ ಸುರಿಯಲು ರೈತರು ಕಾಯ್ದು ಕುಳಿತಿದ್ದಾರೆ. ಮಳೆಗಾಗಿ ವಾರ ಪೂರ್ತಿ ಭಜನೆ, ವಿಶೇಷ ಪೂಜೆಗಳೂ ಶುರು ಆಗಿವೆ.

ಒಂದು ವಾರದ ಹಿಂದೆ ಒಂದೆರಡು ದಿನ ಅಲ್ಪ ಮಳೆ ಬಿದ್ದಿತ್ತು. ಈ ಮಳೆಯಲ್ಲಿಯೇ ಕೆಲ ರೈತರು ಧೈರ್ಯ ಮಾಡಿ ತೊಗರಿ, ಹತ್ತಿ ಬೀಜ ಬಿತ್ತಿದ್ದಾರೆ. ಅವು ಮೊಳಕೆಯೊಡೆದು ಮಳೆಗಾಗಿ ಬಾಯ್ಬಿಡುತ್ತಿವೆ! ತೇವಾಂಶ ಕಡಿಮೆ ಆಗಿರುವುದು. ಮಳೆ ಇಲ್ಲದೇ ಹೆಚ್ಚು ಗಾಳಿ ಬೀಸುತ್ತಿರುವುದು ಇದಕ್ಕೆ ಕಾರಣ ಎಂದು ರೈತರು ಹೇಳುತ್ತಿದ್ದಾರೆ.

ಅಂಗಡಿ ಹತ್ರ ಕಾಲಿಡ್ಬೇಡಿ: ಕೈಯಲ್ಲಿದ್ದ ಅಲ್ಪಸ್ವಲ್ಪ ಹಣವನ್ನು ಬಿತ್ತನೆ ಬೀಜ, ರಸಗೊಬ್ಬರ ಖರೀದಿಗೆ ರೈತರು ಬಳಸಿದ್ದಾರೆ. ಸಾಲಕ್ಕಾಗಿ ಬೆಳೆ ಖರೀದಿ ಮಾಡುವ ಎಪಿಎಂಸಿಯ ದಲ್ಲಾಳಿ ಅಂಗಡಿಗೆ ಅಲೆಯುತ್ತಿದ್ದಾರೆ. ಕೆಲ ಕಡೆ ಬೀಜ, ರಸಗೊಬ್ಬರಕ್ಕೂ ಹಣ ಇಲ್ಲದಿರುವ ರೈತರು ರಸಗೊಬ್ಬರ ಅಂಗಡಿಗೆ ತೆರಳಿ `ಉದ್ರಿ~ಯಾಗಿ ಪಡೆಯಲು ನಿತ್ಯ ಅಲೆಯುತ್ತಿದ್ದಾರೆ.

ಮಳೆ ಇಲ್ಲ. ಹೇಗೆ ಬಿತ್ತನೆ ಮಾಡುತ್ತೀರಿ. ಪಡೆದ ಸಾಲ ಹೇಗೆ ತೀರಿಸುತ್ತೀರಿ. ದಯವಿಟ್ಟು ಅಂಗಡಿ ಮೆಟ್ಟಿಲೂ ಹತ್ತಬೇಡಿ ಎಂದು ಅಂಗಡಿಯವರು ಮುಲಾಜಿಲ್ಲದೇ ಅನ್ನದಾತನಿಗೆ ಹೇಳಿ ಕಳುಹಿಸುತ್ತಿದ್ದಾರೆ. ಹೀಗಾಗಿ `ಬರಿ ಗೈ ರೈತರು~ ಸಾಲಕ್ಕಾಗಿ ಪರದಾಡಬೇಕಿದೆ ಎಂದು ಆಸ್ಕಿಹಾಳ ಗ್ರಾಮದ ರೈತ ಇಬ್ರಾಹಿಂಸಾಬ್ ರೈತರ ಸಮಸ್ಯೆ ವಿವರಿಸಿದರು.

ಮೇವು ಖಾಲಿ: ಜಿಲ್ಲಾಡಳಿತ ತೆರೆದಿದ್ದ ಮೇವು ಬ್ಯಾಂಕ್ ಖಾಲಿಯಾಗಿವೆ. ಹಣ ಕೊಟ್ಟರೂ ಮೇವು ಸಿಗುತ್ತಿಲ್ಲ. 30 ಕಟ್ಟು ಮೇವಿಗೆ 6,000, ಟ್ರ್ಯಾಕ್ಟರ್ ಮೇವಿಗೆ 8000 ಮಾರಾಟ ಆಗುತ್ತಿದೆ. ಬತ್ತದ ಹುಲ್ಲು ಒಂದು ಟ್ರ್ಯಾಕ್ಟರ್ಗೆ ನಾಲ್ಕೈದು ಸಾವಿರಕ್ಕೆ ಮಾರಾಟವಿದ್ದರೂ ಈಗ ಸಿಗುತ್ತಿಲ್ಲ.

ಜಿಲ್ಲೆಯ ಸಿಂಧನೂರು, ಮಾನ್ವಿ ಭಾಗದಲ್ಲಿ ನೀರಾವರಿ ಕಾಲುವೆ ಅಶ್ರಯಿತ ರೈತರು ಮುಂಗಾರು ಮಳೆ ಬಂದು ಮತ್ತೆ ಹಸಿರು ಬರುತ್ತದೆ ಎಂದು ಬತ್ತದ ಹುಲ್ಲು ಮಾರಿದ್ದಾರೆ. ಕುಡಿಯುವ ನೀರು ಪಡೆಯಲು ತುಂಗಭದ್ರಾ ಎಡದಂಡೆ ಕಾಲುವೆ ವ್ಯಾಪ್ತಿ ಪ್ರದೇಶದ ಮೈಲ್ 41ರಿಂದ 147ವರೆಗೆ 144 ಕಲಂ ಅನ್ವಯ ನಿಷೇಧಾಜ್ಞೆಯನ್ನು ಜಿಲ್ಲಾಧಿಕಾರಿ ಜಾರಿಗೊಳಿಸಿದ್ದಾರೆ. ಸಿಂಧನೂರು, ಮಾನ್ವಿ, ರಾಯಚೂರು, ಮಸ್ಕಿ ಭಾಗಕ್ಕೆ ಇದೇ ನೀರು ಗತಿ. ಇದಕ್ಕೂ ತತ್ವಾರ ಬಂದಿದೆ.

ತುಂಗಭದ್ರಾ ಎಡದಂಡೆ ಕಾಲುವೆ ನೀರನ್ನೇ ಆಶ್ರಯಿಸಿದ ಜಿಲ್ಲೆಯ ರೈತರು ಜುಲೈ 10 ರ ಬಳಿಕ ಪ್ರತಿ ವರ್ಷ ಬತ್ತ ನಾಟಿ ಮಾಡಲು ಸಜ್ಜಾಗುತ್ತಿದ್ದರು. ಈ ವರ್ಷ ತುಂಗಭದ್ರಾ ಜಲಾಶಯ ಖಾಲಿ!. ಮುಂದಿನ ಬೆಳೆ ಗತಿ ಏನು? ಬತ್ತದ ಕಣಜವನ್ನೇ ನಂಬಿದ್ದ ರೈತ ಕಂಗಾಲಾಗಿದ್ದಾನೆ.

ಕೃಷಿ ಇಲಾಖೆ ಮಾಹಿತಿ: 2011-12ರಲ್ಲಿ ಮುಂಗಾರು ಹಂಗಾಮಿನಲ್ಲಿ 18,200 ಹೆಕ್ಟೇರ್ ಬಿತ್ತನೆ ಆಗಿತ್ತು. ಈ ವರ್ಷ ಕೇವಲ 320 ಹೆಕ್ಟೇರ್ (ನೀರಾವರಿ ಸೌಲಭ್ಯ ಇರುವ ಕಡೆ) ಮಾತ್ರ ಬಿತ್ತನೆ ಆಗಿದೆ. 68,000 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದೆ.

ಸಜ್ಜೆ- 885 ಕ್ವಿಂಟಲ್, ಸೂರ್ಯಕಾಂತಿ 375 ಕ್ವಿಂಟಲ್, ಬತ್ತ 10 ಸಾವಿರ ಕ್ವಿಂಟಲ್, ತೊಗರಿ 200 ಕ್ವಿಂಟಲ್, ಹೆಸರು 88 ಕ್ವಿಂಟಲ್, ಮೆಕ್ಕೆ ಜೋಳ 20 ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನು ಇದೆ. ಜುಲೈ ಕೊನೆ ವಾರದವರೆಗೂ ಬಿತ್ತನೆ ಮಾಡಲು ಅವಕಾಶ ಇದೆ. ಆಗಸ್ಟ್ನಲ್ಲಿ ಸೂರ್ಯಕಾಂತಿ, ಹುರಳಿ ಬಿತ್ತನೆ ಮಾಡಬಹುದು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕಚೇರಿ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.